ಮುಡಾಗೆ ಸೇರಿದ 13 ಸಾವಿರ ನಿವೇಶನ, 300 ಎಕರೆ ಭೂಮಿ ಖಾಲಿ ಬಿದ್ದಿವೆ
News

ಮುಡಾಗೆ ಸೇರಿದ 13 ಸಾವಿರ ನಿವೇಶನ, 300 ಎಕರೆ ಭೂಮಿ ಖಾಲಿ ಬಿದ್ದಿವೆ

August 11, 2022

ಬೆಂಗಳೂರು, ಆ.10(ಕೆಎಂಶಿ)-ಜನರಿಗೆ ಹಂಚಿಕೆಯಾಗದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಉಳಿದುಕೊಂಡಿದ್ದ 5000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಲಾ ಗಿದೆ ಎಂದು ನಗರಾಭಿ ವೃದ್ಧಿ ಸಚಿವ ಭೈರತಿ ಬಸವ ರಾಜ್ ಇಂದಿಲ್ಲಿ ಬಹಿರಂಗಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ನಗರಾಭಿವೃದ್ಧಿ ಪ್ರಾಧಿ ಕಾರದ ವ್ಯಾಪ್ತಿಯಲ್ಲಿ ಜನರಿಗೆ ಹಂಚಿಕೆ ಯಾಗದೆ ಉಳಿದ ಹದಿಮೂರು ಸಾವಿರ ನಿವೇಶನಗಳು ಮತ್ತು 300 ಎಕರೆಗೂ ಹೆಚ್ಚಿನ ಭೂಮಿಯನ್ನು ಪತ್ತೆ ಹಚ್ಚಲಾ ಗಿದ್ದು,ಉಳಿದ ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗದೆ ಉಳಿದಿ ರುವ ಆಸ್ತಿಯ ವಿವರ ಪಡೆಯಲಾಗುತ್ತಿದೆ ಎಂದರು. ಮೈಸೂರು ಮಹಾನಗರದ ವ್ಯಾಪ್ತಿ ಯಲ್ಲಿ ಮುಡಾ ಹಲವಾರು ಬಡಾವಣೆ ಗಳನ್ನು ನಿರ್ಮಿಸಿದ್ದು ಹಲವು ಕಾರಣ ಗಳಿಂದ ವಿವಿಧ ಬಡಾವಣೆಯಲ್ಲಿ ತನ್ನ ವಶದಲ್ಲಿರುವ ನಿವೇಶನಗಳ ವಿವರ ಮರೆ ತಿತ್ತು. ಆದರೆ ಈಗ ಅಂತಹ ನಿವೇಶನ ಮತ್ತು ಭೂಮಿಯ ದಾಖಲೆಗಳನ್ನು ಸಂಗ್ರಹಿಸಿದ್ದು, ಅದರ ಮೌಲ್ಯ 4 ರಿಂದ 5 ಸಾವಿರ ಕೋಟಿ ರೂ. ಎಂದರು.

ಮುಡಾ ವಶದಲ್ಲಿರುವ ಈ ನಿವೇಶನ ಗಳನ್ನು ಸಾರ್ವಜನಿಕರಿಗೆ ಹಂಚಿಕೆ ಇಲ್ಲವೇ ಹರಾಜು ರೂಪದಲ್ಲಿ ಮರಾಟ ಮಾಡಲಾ ಗುವುದು, ಖಾಲಿ ಭೂಮಿಯಲ್ಲಿ ಹೊಸ ಬಡಾವಣೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ದೊರೆತಿ ರುವ ಭೂಮಿಯಲ್ಲಿ ಬಡಾವಣೆ ನಿರ್ಮಿಸು ವುದಲ್ಲದೆ, ಬೆಂಗಳೂರು ಬಿಡಿಎ ಮಾದರಿ ಯಲ್ಲೇ ಮೈಸೂರಿನಲ್ಲೂ ಬಡವರು ಮತ್ತು ಮಧ್ಯಮ ವರ್ಗದವರಿಗೆ ಗುಂಪು ಮನೆ ಗಳನ್ನು ನಿರ್ಮಿಸಿಕೊಡಲು ಸರ್ಕಾರ ಬಯಸಿದೆ ಎಂದರು.

ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳ ಆರ್ಥಿಕತೆಯನ್ನು ಬಲಪಡಿಸಿ ಜನರಿಗೆ ನಿವೇಶನಗಳನ್ನು ವಿತರಿಸಲು ಯೋಜಿಸಲಾಗಿದ್ದು ಹಾಸನದಲ್ಲಿ 1200 ಎಕರೆ, ಬಳ್ಳಾರಿಯಲ್ಲಿ 120 ಎಕರೆ,ದಾವಣಗೆರೆಯಲ್ಲಿ ಐವತ್ತೇಳು ಎಕರೆ ಸೇರಿದಂತೆ ಹಲವು ಕಡೆ ಭೂಮಿ ಖರೀದಿಸಲಾಗಿದೆ ಎಂದು ನುಡಿದರು. ಹಲವು ಕಾಲದಿಂದ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಮಾಡುವ ಕಾರ್ಯ ನಡೆದಿಲ್ಲ. ಆದರೆ ಇನ್ನು ಮುಂದೆ ಸಣ್ಣ ಮಟ್ಟದಲ್ಲಾದರೂ ಭೂಮಿಯನ್ನು ಅಭಿವೃದ್ಧಿಪಡಿಸಿ ಜನರಿಗೆ ಹಂಚಿಕೆ ಮಾಡುವುದು ಸರ್ಕಾರದ ಯೋಚನೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ ಹಲವು ಕಡೆ ರೈತರು ಭೂಮಿ ಕೊಡಲು ಮುಂದೆ ಬರುತ್ತಿಲ್ಲ. ರೈತರು ಭೂಮಿ ಕೊಡದೆ ನಾವೂ ನಿವೇಶನಗಳನ್ನು ಅಭಿವೃದ್ಧಿ ಮಾಡುವುದು ಕಷ್ಟ.
ರೈತರು ಭೂಮಿ ಕೊಟ್ಟರೆ ಅಭಿವೃದ್ಧಿಗೊಂಡಿದ್ದರಲ್ಲಿ ಅರ್ಧ ಅವರ ಪಾಲು: ರೈತರು ಭೂಮಿ ಕೊಡಲು ಮುಂದೆ ಬಂದರೆ ಅಭಿವೃದ್ಧಿಪಡಿಸುವ ಭೂಮಿಯಲ್ಲಿ ಅರ್ಧದಷ್ಟು ಭೂಮಿಯನ್ನು ರೈತರಿಗೇ ಕೊಡುವುದಾಗಿ ನುಡಿದ ಅವರು,ಎಲ್ಲ ಕಡೆ ಬಂಡವಾಳ ಹೂಡಿ ಭೂಮಿ ಖರೀದಿಸುವುದು ಕಷ್ಟ ಎಂದರು. ಈ ಮಧ್ಯೆ ರಾಜ್ಯದಲ್ಲಿ ನಕ್ಷೆ ಇಲ್ಲದಿರುವುದೂ ಸೇರಿದಂತೆ ಹಲವು ಕಾನೂನುಗಳನ್ನು ಉಲ್ಲಂಘಿಸಿ ಜನ ಮನೆ ನಿರ್ಮಿಸಿಕೊಂಡಿದ್ದು ಇದನ್ನು ಸಕ್ರಮಗೊಳಿಸುವ ಸಂಬಂಧ ಈ ತಿಂಗಳಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ರಾಜ್ಯದ ಹಲವು ನಗರಗಳಲ್ಲಿ ಜಾರಿಯಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಪ್ರಗತಿಪಥದಲ್ಲಿದ್ದು ಮುಂದಿನ ಏಪ್ರಿಲ್ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ ಎಂದರು. ಸ್ಮಾರ್ಟ್ ಸಿಟಿ ವಿಸ್ತರಣೆಗೆ ಮನವಿ: ಸ್ಮಾರ್ಟ್ ಸಿಟಿ ಯೋಜನೆಯನ್ನು ಇನ್ನೂ ಹಲವು ನಗರಗಳಿಗೆ ವಿಸ್ತರಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಉತ್ತರ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ನಗರಗಳನ್ನು ಹೊರತುಪಡಿಸಿ ಇತರ ನಗರಗಳ ಅಭಿವೃದ್ಧಿಗೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದಾರೆ.ನಾವು ಕೂಡಾ ಕರ್ನಾಟಕದಲ್ಲಿ ಅದೇ ಕೆಲಸ ಮಾಡಿದ್ದೇವೆ ಎಂದರು.

Translate »