ಶುಕ್ರವಾರ ರಾಜ್ಯದ 138 ಸೋಂಕಿತರಲ್ಲಿ 111 ಮಂದಿ ಮಹಾರಾಷ್ಟ್ರದಿಂದ ಬಂದವರೇ!
ಮೈಸೂರು

ಶುಕ್ರವಾರ ರಾಜ್ಯದ 138 ಸೋಂಕಿತರಲ್ಲಿ 111 ಮಂದಿ ಮಹಾರಾಷ್ಟ್ರದಿಂದ ಬಂದವರೇ!

May 23, 2020

ಬೆಂಗಳೂರು, ಮೇ 22- ಮಹಾರಾಷ್ಟ್ರ ಜಾಢ್ಯದಿಂದ ಕರ್ನಾಟಕ ತತ್ತರಿಸಿದ್ದು, ಶುಕ್ರ ವಾರ ಪತ್ತೆಯಾದ 138 ಸೋಂಕಿತರ ಪೈಕಿ ಮಹಾರಾಷ್ಟ್ರದಿಂದ ಬಂದವರೇ 111 ಮಂದಿ ಸೋಂಕಿತರಾಗಿದ್ದಾರೆ. ಇಂದು ಬೆಳಿಗ್ಗೆ 105 ಮತ್ತು ಸಂಜೆ 33 ಮಂದಿ, ಒಟ್ಟು 138 ಮಂದಿಗೆ ಸೋಂಕು ಪತ್ತೆಯಾಗಿದ್ದು, ಅವರಲ್ಲಿ 58 ಮಹಿಳೆಯರು ಸೇರಿದ್ದಾರೆ. ಮಂಡ್ಯ ಜಿಲ್ಲೆ ಯಲ್ಲಿ ಇಂದು ಬೆಳಿಗ್ಗೆ 3 ಮತ್ತು ಸಂಜೆ 5 ಸೇರಿ ಒಟ್ಟು 8 ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 209ಕ್ಕೆ ಏರಿದೆ. ಈವರೆಗೆ 25 ಮಂದಿ ಗುಣಮುಖರಾಗಿದ್ದು, ಉಳಿದ 184 ಮಂದಿ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಇಂದು ಪತ್ತೆಯಾದ ಎಲ್ಲಾ ಸೋಂಕಿತರೂ ಮಹಾರಾಷ್ಟ್ರದಿಂದ ತವರಿಗೆ ಹಿಂದಿರುಗಿ ದವರು. ಹಾಸನ ಜಿಲ್ಲೆಯಲ್ಲಿ ಇಂದು ಐವರು ಮಹಿಳೆಯರು ಸೇರಿ ಒಟ್ಟು 14 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಇಂದು ಈ ಜಿಲ್ಲೆಯಲ್ಲಿ ಸೋಂಕು ಪತ್ತೆಯಾದ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾ ಗಿದ್ದಾರೆ. ಉಳಿದಂತೆ ಚಿಕ್ಕಬಳ್ಳಾಪುರದಲ್ಲಿ 47, ರಾಯಚೂರಿನಲ್ಲಿ 10, ಬೀದರ್‍ನಲ್ಲಿ 9, ತುಮಕೂರಿನಲ್ಲಿ 8, ವಿಜಯಪುರದಲ್ಲಿ 7, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ 5, ದಾವಣಗೆರೆ, ಉಡುಪಿ ಮತ್ತು ಹಾವೇರಿಯಲ್ಲಿ ತಲಾ 3, ಧಾರವಾಡ, ಶಿವಮೊಗ್ಗ ಮತ್ತು ಯಾದಗಿರಿಯಲ್ಲಿ ತಲಾ 2, ಬೆಳಗಾವಿ, ಬಾಗಲ ಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಚಿತ್ರದುರ್ಗದಲ್ಲಿ ತಲಾ ಒಂದು ಸೇರಿದಂತೆ ಇಂದು 138 ಪ್ರಕರಣ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1743ಕ್ಕೆ ಏರಿದೆ. ಈವರೆಗೆ 597 ಮಂದಿ ಗುಣಮುಖರಾಗಿದ್ದು, 41 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಳಿದ 1104 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 19 ಮಂದಿಯನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 11,147 ಮತ್ತು ದ್ವಿತೀಯ ಸಂಪರ್ಕದ 13,032 ಮಂದಿ ಸೇರಿ ಒಟ್ಟು 24,179 ಮಂದಿಯನ್ನು ಕ್ವಾರಂಟೈನ್‍ನಲ್ಲಿಟ್ಟು ನಿಗಾ ವಹಿಸಲಾಗಿದೆ. ಇಂದು 12,228 ಮಂದಿಯ ಗಂಟಲ ದ್ರವ ಪರೀಕ್ಷಿಸಿದ್ದು, ಅವರಲ್ಲಿ 11,604 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಖಾಖೆ ಪ್ರಕಟಣೆ ತಿಳಿಸಿದೆ.

Translate »