ಮೈಸೂರು ನಗರ ಸೇರಿ 141 ಪೊಲೀಸ್ ಇನ್ಸ್‍ಪೆಕ್ಟರ್ ವರ್ಗಾವಣೆ
ಮೈಸೂರು

ಮೈಸೂರು ನಗರ ಸೇರಿ 141 ಪೊಲೀಸ್ ಇನ್ಸ್‍ಪೆಕ್ಟರ್ ವರ್ಗಾವಣೆ

September 25, 2018

ಮೈಸೂರು: ಪೊಲೀಸ್ ಇಲಾಖೆಯಲ್ಲಿ ಸರ್ಜರಿ ನಡೆಸಿರುವ ರಾಜ್ಯ ಸರ್ಕಾರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ 141 ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು ವರ್ಗಾ ವಣೆ ಮಾಡಿ ಆದೇಶ ಹೊರಡಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ವೃತ್ತ ನಿರೀಕ್ಷಕರಾಗಿದ್ದ ಡಿ.ಪಿ.ಧನರಾಜ್ ಅವರನ್ನು ಮೈಸೂರು ನಗರದ ಸರಸ್ವತಿಪುರಂ ಪೊಲೀಸ್ ಠಾಣೆಗೆ, ಮೈಸೂರು ರೈಲ್ವೆ ಇನ್ಸ್‍ಪೆಕ್ಟರ್ ಆಗಿದ್ದ
ಎ.ಗುರುಪ್ರಸಾದ್ ಅವರನ್ನು ಹೆಬ್ಬಾಳ್ ಠಾಣೆಗೆ, ಚನ್ನಪಟ್ಟಣ ಕೆಎಸ್‍ಪಿಟಿಎಸ್‍ನಲ್ಲಿದ್ದ ಡಿ.ಯೋಗೇಶ್ ಅವರನ್ನು ಮೈಸೂರಿನ ನರಸಿಂಹರಾಜ ಸಂಚಾರ ಠಾಣೆಗೆ, ಕೆಎಲ್‍ಎನಲ್ಲಿದ್ದ ವಿ.ಎಸ್.ಶಶಿಕುಮಾರ್ ಅವರನ್ನು ಕೃಷ್ಣರಾಜ ಪೊಲೀಸ್ ಠಾಣೆಗೆ, ಐಎಸ್‍ಡಿಯ ಬಿ.ಜಿ.ರಾಘವೇಂದ್ರ ಅವರನ್ನು ಮೇಟಗಳ್ಳಿ ಪೊಲೀಸ್ ಠಾಣೆಗೆ, ಕೆಎಲ್‍ಎನಿಂದ ಎಂ.ಮಹದೇವಸ್ವಾಮಿ ಅವರನ್ನು ನಜರ್‍ಬಾದ್ ಠಾಣೆಗೆ, ಮೈಸೂರು ಮಂಡಕಳ್ಳಿ ವಿಮಾನನಿಲ್ದಾಣದಿಂದ ಬಿ.ಬಸವರಾಜು ಅವರನ್ನು ನರಸಿಂಹರಾಜ ಠಾಣೆಗೆ ಹಾಗೂ ಮೈಸೂರಿನ ಎನ್.ಆರ್. ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಅಶೋಕ್‍ಕುಮಾರ್ ಅವರನ್ನು ಮೈಸೂರು ಸಿಟಿ ಸಿಸಿಐಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Translate »