ಅಭಿವೃದ್ಧಿ ಮೂಲಕ ಮತದಾರರ ಋಣ ತೀರಿಸುವೇ ಶಾಸಕ ಹರ್ಷವರ್ಧನ್
ಮೈಸೂರು

ಅಭಿವೃದ್ಧಿ ಮೂಲಕ ಮತದಾರರ ಋಣ ತೀರಿಸುವೇ ಶಾಸಕ ಹರ್ಷವರ್ಧನ್

September 25, 2018

ಮಲ್ಕುಂಡಿ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜನತೆ ಈ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿ ಬಗ್ಗೆ ಭರವಸೆ ಇಟ್ಟು ಕೊಂಡಿದು ನಾನು ಪ್ರಮಾಣೀಕವಾಗಿ ಕೆಲಸ ಮಾಡಿ ಕ್ಷೇತ್ರವನ್ನು ಮಾದರಿಯಾಗಿಸುತ್ತೇನೆ ಎಂದು ಶಾಸಕ ಬಿ ಹರ್ಷವರ್ಧನ್ ತಿಳಿಸಿದರು.

ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದಲ್ಲಿ ಆಯೋಜಿಸಿದ ಮತದಾರರಿಗೆ ಕೃತಜತ ಸಭೆ ಹಾಗೂ ನೀರಾವರಿ ಇಲಾಖೆಯ 20 ಲಕ್ಷ ರೂ. ವೆಚ್ಚದ ಕಾಂಕ್ರೇಟ್ ರಸ್ತೆ ನಿರ್ಮಾಣಕ್ಕೆ ಗುದ್ದಿಲು ಪೂಜೆ ನೆರವೇರಿಸಿ ಮಾತನಾಡಿದ ಅವರು ಚುನಾವಣೆಯಲ್ಲಿ ಜಯಗಳಿಸಿದ ನಂತರ ಪ್ರತಿದಿನ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಗ್ರಾಮೀಣಾ ಪ್ರದೇಶಗಳಲ್ಲಿ ಹದೆಗೆಟ್ಟ ರಸ್ತೆಗಳು ಹಾಗೂ ಮೂಲ ಸೌಕರ್ಯಗಳ ಕೊರೆತೆ ಗ್ರಾಮಗಳಲ್ಲಿ ದಿನನಿತ್ಯ ಸಮಸ್ಯೆಗಳ ಬಗ್ಗೆ ವಿವರ ಸಂಗ್ರಹಿಸಿ ಇಂತಹ ಸಮಸ್ಯೆಗಳಿಗೆ ಹೆಚ್ಚು ಅದ್ಯತೆ ನೀಡಿ ಹಂತ, ಹಂತವಾಗಿ ಪರಿಹರಿಸಿ ಕ್ಷೇತ್ರದ ಜನತೆ ನಿರೀಕ್ಷೆಯನ್ನು ಈಡೇರಿಸಲು ಪ್ರಮಾಣೀಕ ಪ್ರಯತ್ನ ಮಾಡುತ್ತೇನೆ.

ಮುಂದಿನ ಲೋಕಸಭೆ ಚುನಾವಣೆಗೆ ಕಾರ್ಯಕರ್ತರು ಒಗ್ಗಟಾಗಿ ಶ್ರಮಿಸಬೇಕು ಈಗಿನ ಮೈತ್ರಿ ಸರ್ಕಾರದ ಕಚ್ಚಾಟದಿಂದ ಸರ್ಕಾರ ಬಿಳುವ ಪರಿಸ್ಥಿತಿಯಲ್ಲಿದೆ. ಮುಂದಿನ ದಿನಗಳಲ್ಲಿ ಬಿ.ಎಸ್.ಯಾಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದು ತಿಳಿಸಿದರು. ಈ ವೇಳೆ ತಾ.ಪಂ ಸದಸ್ಯ ಎಸ್ ಬಸವರಾಜು ತಾ.ಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ ಮುಖಂಡರುಗಳಾದ ಎಂ.ಪುಟ್ಟಸ್ವಾಮಿ, ಕುಂಬ್ರಳ್ಳಿ ಸುಬ್ಬಣ್ಣ, ಎಂ.ವಿ.ಬಸವರಾಜಪ್ಪ, ಶಿವಾನಂದ, ಕೆಂಡಗಣ್ಣಪ್ಪ, ಎಂ.ಸಿ.ರಮೇಶ, ಹರದನಹಳ್ಳಿ ಬಸಪ್ಪ ಮತ್ತಿತರು ಹಾಜರಿದ್ದರು.

Translate »