ನಾಳೆ ವಿದ್ಯಾ ಗಣಪತಿ ವಿಸರ್ಜನಾ ಮೆರವಣಿಗೆ
ಚಾಮರಾಜನಗರ

ನಾಳೆ ವಿದ್ಯಾ ಗಣಪತಿ ವಿಸರ್ಜನಾ ಮೆರವಣಿಗೆ

September 25, 2018

ಚಾಮರಾಜನಗರ: ಚಾಮರಾಜನಗರ ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ವಿದ್ಯಾಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆಯು ಸೆ. 26ರಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.

ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾ ಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸೆ.26ರ ಬೆಳಿಗ್ಗೆ 7 ಗಂಟೆಯಿಂದ 27ರ ಬೆಳಿಗ್ಗೆ 7 ಗಂಟೆಯವರೆಗೆ ಮೆರವಣಿಗೆ ಸಂಚರಿಸುವ ಬೀದಿಗಳಲ್ಲಿ ಕಟ್ಟಡಗಳ ಮೇಲೆ ಸಾರ್ವಜನಿಕರು ಹತ್ತಿ ಕುಳಿತುಕೊಳ್ಳುವುದು ಹಾಗೂ ಮಹಡಿ ಮೇಲಿನಿಂದ ಗುಂಪುಕಟ್ಟಿಕೊಂಡು ಮೆರವಣಿಗೆ ವೀಕ್ಷಿಸುವುದನ್ನು ನಿಷೇಧಿಸಿ ಆದೇಶಿಸಿದ್ದಾರೆ. ನಗರದ ಪ್ರಮುಖ ಬೀದಿಗಳಾದ ಖಡಕಪುರ ಮೊಹಲ್ಲ, ಅಂಬೇಡ್ಕರ್ ಬಡಾವಣೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ರಸ್ತೆ, ದೇವಾಂಗ 3ನೇ ಬೀದಿ, ಆದಿಶಕ್ತಿ ದೇವಸ್ಥಾನದ ಬೀದಿ, ಬಣಜಿಗರ ಬೀದಿ, ಭ್ರಮರಾಂಭ ಬಡಾ ವಣೆಯ 1 ಹಾಗೂ 2ನೇ ಕ್ರಾಸ್, ಕುರುಬರ ಬೀದಿ, ನಾಗಪ್ಪಶೆಟ್ಟರ ವೃತ್ತ, ದೊಡ್ಡ ಅಂಗಡಿ ಬೀದಿ, ಗುಂಡ್ಲುಪೇಟೆ ವೃತ್ತ, ಗಾಡಿಖಾನೆ ಮೊಹಲ್ಲ ಬೀದಿ, ಮೇಗಲ ಪರಿವಾರ ನಾಯಕರ ಬೀದಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ, ಮಾರ್ಕೆಟ್ ವೃತ್ತ, ಸಂತೇಮರಹಳ್ಳಿ ವೃತ್ತ, ಹಳ್ಳದ ಬೀದಿ, ಅಗ್ರಹಾರ ಬೀದಿ, ಪೊಲೀಸ್ ಕಚೇರಿ ರಸ್ತೆ, ಖಾಸಗಿ ಬಸ್ ನಿಲ್ದಾಣ, ವೀರಭದ್ರ ದೇವಸ್ಥಾನ, ಜೈನರ ಬೀದಿ, ಆಂಜನೇಯ ದೇವಸ್ಥಾನದ ಬೀದಿಯಲ್ಲಿ ಸಾಗಿ ದೊಡ್ಡ ಅರಸನ ಕೊಳದಲ್ಲಿ ವಿಸರ್ಜನೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »