ಶಾರ್ಟ್ ಸಕ್ರ್ಯೂಟ್‍ನಿಂದ ದುರ್ಘಟನೆನ: ನಂಜನಗೂಡು ಬಸ್ ನಿಲ್ದಾಣದಲ್ಲಿ ಬೇಕರಿಗೆ ಬೆಂಕಿ: ತಿಂಡಿ ತಿನಿಸು ಅಪಾರ ಹಾನಿ
ಮೈಸೂರು

ಶಾರ್ಟ್ ಸಕ್ರ್ಯೂಟ್‍ನಿಂದ ದುರ್ಘಟನೆನ: ನಂಜನಗೂಡು ಬಸ್ ನಿಲ್ದಾಣದಲ್ಲಿ ಬೇಕರಿಗೆ ಬೆಂಕಿ: ತಿಂಡಿ ತಿನಿಸು ಅಪಾರ ಹಾನಿ

September 25, 2018

ನಂಜನಗೂಡು:  ಪಟ್ಟಣದಲ್ಲಿ ರುವ ಹಳೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬೇಕರಿ ವಾಣಿಜ್ಯ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ತಗುಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಪ್ರಮಾಣದ ತಿಂಡಿ ತಿನಿಸು ಸೇರಿದಂತೆ ಹಲವು ವಸ್ತುಗಳು ಭಸ್ಮವಾಗಿ ಸುಮಾರು ನಾಲ್ಕು ಲಕ್ಷ ರೂ. ನಷ್ಟ ಉಂಟಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ವಾಣಿಜ್ಯ ಮಳಿಗೆ 6ರಲ್ಲಿ ಬಾಡಿಗೆ ಪಡೆ ದಿದ್ದ ಮೈಸೂರು ಜಿಲ್ಲೆಯ ಮಾರ್ಬಳ್ಳಿ ಎನ್. ರವೀಶ್ ಎಂಬುವರು ಹಲವು ವರ್ಷಗಳಿಂದ ಬೇಕರಿ ನಡೆಸುತ್ತಿದ್ದರು. ಬೆಂಕಿ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಬೇಕರಿಯಲ್ಲಿದ್ದ ತಿಂಡಿ ತಿನಿಸು ಹಾಗೂ ಪಾನೀಯ ಪದಾರ್ಥಗಳು ಸೇರಿದಂತೆ ಎರಡು ಫ್ರಿಡ್ಜ್, ಒಂದು ಓವನ್, ಮರದ ಸಾಮಗ್ರಿಗಳು ಸುಟ್ಟು ಕರುಕಲಾಗಿವೆ. ಇನ್ನು ಬೇಕರಿಯಲ್ಲಿದ್ದ 32 ಸಾವಿರ ರೂ. ನಗದು ಬೆಂಕಿ ಜ್ವಾಲೆಗೆ ಸಿಲುಕಿ ಬೆಂದು ಹೋಗಿದೆ.

ಭಾನುವಾರ ರಾತ್ರಿ ಕೆಲಸ ಮುಗಿಸಿಕೊಂಡು ಬೇಕರಿ ಬಾಗಿಲು ಮುಚ್ಚಿ ಮನೆಗೆ ತೆರಳಿ ದ್ದರು. ಸಂಜೆ ಸುರಿದ ಮಳೆಗೆ ಮಳಿಗೆಯ ಗೋಡೆಯೆಲ್ಲಾ ಸಂಪೂರ್ಣ ಶಿಥಿಲಗೊಂಡು ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಸಂಭವಿಸಿದೆ ಎನ್ನಲಾಗಿದ್ದು, ಮಾಲೀಕರು ಬಂದು ಬಾಗಿಲು ತೆರೆಯುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು. ಸರಿಯಾಗಿ ವಿದ್ಯುತ್ ವೈರಿಂಗ್ ಮಾಡದೇ ಇರುವುದರಿಂದ ಈ ಅವಘಡ ಸಂಭವಿಸಲು ಕಾರಣ ಎಂಬುದಾಗಿ ಸ್ಥಳೀಯ ಸಾರ್ವ ಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಅಗ್ನಿ ನಂದಿಸುವಷ್ಟರಲ್ಲಿ ಅಪಾರ ನಷ್ಟ ಸಂಭವಿಸಿದ್ದು ಇದರಿಂದ ಚಿಂತಾ ಕ್ರಾಂತರಾಗಿರುವ ಬೇಕರಿ ಮಾಲೀಕರು ದಿಕ್ಕು ತೋಚದಂತಾಗಿದ್ದಾರೆ. ಸಾರಿಗೆ ಇಲಾಖೆಯು ಸೂಕ್ತ ಪರಿಹಾರ ನೀಡು ವಂತೆ ಸಂತ್ರಸ್ತ ಬಾಡಿಗೆದಾರ ಮಾರ್ಬಳ್ಳಿ ಎನ್.ರವೀಶ್ ಸಾರಿಗೆ ಇಲಾಖೆ ಅಧಿಕಾರಿ ಗಳ ಬಳಿ ಅಲವತ್ತುಕೊಂಡಿದ್ದಾರೆ. ಘಟನೆಯ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಾರಿಗೆ ಇಲಾಖೆಗೆ ದೂರು ನೀಡಿ ಪರಿಹಾರಕ್ಕೆ ಒತ್ತಾಯಿಸಲಾಗಿದೆ.

Translate »