ಮೈಸೂರು,ಡಿ.7(ಎಸ್‍ಬಿಡಿ)-ಮೈಸೂರು ಜಿಲ್ಲೆಯ 148 ಗ್ರಾಮ ಪಂಚಾಯ್ತಿಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಈ ಸಂಬಂಧ ಜಿಲ್ಲಾಡಳಿತ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಮೊದಲ ಹಂತದಲ್ಲಿ ಹುಣಸೂರು ತಾಲೂಕಿನ 41, ಕೆ.ಆರ್. ನಗರದ 34, ಪಿರಿಯಾಪಟ್ಟಣದ 34, ಹೆಚ್.ಡಿ.ಕೋಟೆಯ 26 ಹಾಗೂ ಸರಗೂರು ತಾಲೂಕಿನ 13 ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆಗೆ ಡಿ.11 ಕೊನೆಯ ದಿನವಾಗಿದ್ದು, ಡಿ.12ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿಸೆಂಬರ್ 14ರವರೆಗೆ ಕಾಲಾವಕಾಶವಿದ್ದು, ಡಿ.22ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಡಿ.30ಕ್ಕೆ ಆಯಾಯ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಿ, ಅಂದೇ ಫಲಿತಾಂಶ ಪ್ರಕಟಿಸಲಾಗುತ್ತದೆ.
ಗ್ರಾಪಂಗಳ ವಿವರ: ಹುಣಸೂರು ತಾಲೂಕಿನ ಹರವೆ, ಹಿರಿಕ್ಯಾತನ ಹಳ್ಳಿ, ಗಾವಡಗೆರೆ, ಜಾಬಗೆರೆ, ಮುಳ್ಳೂರು, ಬೋಳನಹಳ್ಳಿ, ಹುಸೇನ ಪುರ, ಹಳೇಬೀಡು, ಬಿಳಿಕೆರೆ, ಮನುಗನಹಳ್ಳಿ, ಗಾಗೇನಹಳ್ಳಿ, ಚಿಕ್ಕ ಬೀಚನಹಳ್ಳಿ, ಬನ್ನಿಕುಪ್ಪೆ, ಮರದೂರು, ಕಟ್ಟೆಮಳಲವಾಡಿ, ಮೋದೂರು, ಬಿಳಿಗೆರೆ, ಕೊತ್ತೆಗಾಲ, ಚಿಲ್ಕುಂದ, ಕಲ್ಲಹಳ್ಳಿ, ಬೀಜಗನಹಳ್ಳಿ, ಮೂಕನಹಳ್ಳಿ, ಉದ್ದೂರು ಕಾವಲ್, ಉದ್ದೂರ್, ಚಲ್ಲಹಳ್ಳಿ, ಸಿಂಗರ ಮಾರನಹಳ್ಳಿ, ಕರೀಮುದ್ದನಹಳ್ಳಿ, ಧರ್ಮಾಪುರ, ಉಯಿಗೊಂಡನ ಹಳ್ಳಿ, ಆಸ್ಪತ್ರೆ ಕಾವಲ್, ಗೋವಿಂದನಹಳ್ಳಿ, ಉಮ್ಮತ್ತೂರು, ಗುರು ಪುರ, ತಟ್ಟೆಕೆರೆ, ಕರ್ಣಕುಪ್ಪೆ, ಕಡೇಮನುಗನಹಳ್ಳಿ, ನೇರಳಕುಪ್ಪೆ, ಹನಗೋಡು, ಹೆಗ್ಗಂದೂರು, ಕಿರಂಗೂರು ಹಾಗೂ ದೊಡ್ಡ ಹೆಜ್ಜೂರು.
ಕೆ.ಆರ್.ನಗರದ ಹರದನಹಳ್ಳಿ, ಶೀಗವಾಳು, ಹೊನ್ನೇನಹಳ್ಳಿ, ಕರ್ಪೂರಹಳ್ಳಿ, ಲಕ್ಷ್ಮೀಪುರ, ಸಾಲಿಗ್ರಾಮ, ತಂದ್ರೆ, ಮೇಲೂರು, ಅಂಕನಹಳ್ಳಿ, ಮಿರ್ಲೆ, ಮುಂಜನಹಳ್ಳಿ, ಭೇರ್ಯ, ಹೊಸಅಗ್ರ ಹಾರ, ಗಂಧನಹಳ್ಳಿ, ಅಡಗೂರು, ಅರ್ಜುನಹಳ್ಳಿ, ಹಂಪಾಪುರ, ತಿಪ್ಪೂರು, ಕಗ್ಗೆರೆ, ಲಾಳಂದೇವನಹಳ್ಳಿ, ದೊಡ್ಡೇಕೊಪ್ಪಲು (ಡೋರ್ನಹಳ್ಳಿ), ಚಂದಗಾಲು, ಹೆಬ್ಬಾಳು, ಬ್ಯಾಡರಹಳ್ಳಿ, ಸಿದ್ದಾ ಪುರ(ಡಿ.ಕೆ.ಕೊಪ್ಪಲು), ಮಾವತ್ತೂರು, ಕೆಸ್ತೂರು, ಕುಪ್ಪೆಹಂತ, ಹೊಸಕೋಟೆ, ಹಳಿಯೂರು, ನರಚನಹಳ್ಳಿ, ಹನಸೋಗೆ, ಚನ್ನಂಗೆರೆ ಹಾಗೂ ಮಾಯಿಗೌಡನಹಳ್ಳಿ.
ಪಿರಿಯಾಪಟ್ಟಣದ ಕಣಗಾಲು, ಹಲಗನಹಳ್ಳಿ, ಅತ್ತಿಗೋಡು, ಕಿತ್ತೂರು, ಹಂಡಿತವಳ್ಳಿ, ರಾವಂದೂರು, ಎನ್.ಶೆಟ್ಟಹಳ್ಳಿ, ಬೆಟ್ಟದ ತುಂಗ, ಬೆಟ್ಟದಪುರ, ಹರದೂರು, ಭುವನಹಳ್ಳಿ, ಕೋಮಲಾ ಪುರ, ಹಿಟ್ನೆಹೆಬ್ಬಾಗಿಲು, ರಾಮನಾಥತುಂಗ, ದೊಡ್ಡ ಬ್ಯಾಲಾಳು, ಮಾಕೋಡು, ಕಂಪಲಾಪುರ, ಕಿರನಲ್ಲಿ, ಪಂಚವಳ್ಳಿ, ಮಾಲಂಗಿ, ಮುತ್ತೂರು, ಚೌತಿ, ಚಿಟ್ಟೇನಹಳ್ಳಿ, ಹುಣಸವಾಡಿ, ಪೂನಾಡ ಹಳ್ಳಿ, ಬೈಲುಕುಪ್ಪೆ, ನವಿಲೂರು, ಕೊಪ್ಪ, ಆವರ್ತಿ, ಚಿಕ್ಕನೇರಳೆ, ಚಪ್ಪರದಹಳ್ಳಿ, ಹಾರನಹಳ್ಳಿ, ಚನ್ನಕಲ್ ಕಾವಲು ಹಾಗೂ ದೊಡ್ಡಕಮರವಳ್ಳಿ. ಹೆಚ್.ಡಿ.ಕೋಟೆಯ ಆಲನಹಳ್ಳಿ, ಜಿ.ಬಿ.ಸರಗೂರು, ಕ್ಯಾತನಹಳ್ಳಿ, ಬಾಚೇಗೌಡನಹಳ್ಳಿ, ಚಿಕ್ಕೆರೆಯೂರು, ಕಂಚಮಳ್ಳಿ, ಹಂಪಾಪುರ, ಹೊಮ್ಮರಗಳ್ಳಿ, ಮಾದಪುರ, ಹೈರಿಗೆ, ಹೆಬ್ಬಲಗುಪ್ಪೆ, ತುಂಬಸೋಗೆ, ನಾಗನಹಳ್ಳಿ, ಹಿರೇಹಳ್ಳಿ, ಚಕ್ಕೋಡನಹಳ್ಳಿ, ಅಣ್ಣೂರು, ಭೀಮನಹಳ್ಳಿ, ಪಡುಕೋಣೆ ಕಾವಲ್, ಸವ್ವೆ, ಬೀಚನಹಳ್ಳಿ, ಅಂತರಸಂತೆ, ಹೊಸ ಹೊಳಲು, ನೂರಲ ಕುಪ್ಪೆ, ಎನ್.ಬೆಳ್ತೂರು, ಎನ್.ಬೇಗೂರು ಹಾಗೂ ದೊಡ್ಡಬೈರನ ಕುಪ್ಪೆ. ಸರಗೂರು ತಾಲೂಕಿನ ಇಟ್ನಾ, ಕೆ.ಬೆಳತ್ತೂರು, ಮನುಗನಹಳ್ಳಿ, ಕಲ್ಲಂಬಾಳು, ಮುಳ್ಳೂರು, ಹಂಚೀಪುರ, ಕೊತ್ತೇಗಾಲ, ಸಾಗರೆ, ಎಂ.ಸಿ.ತಳಲು, ಹಾದನೂರು, ಹೆಗ್ಗನೂರು, ಬಿ.ಮಟಕೆರೆ ಹಾಗೂ ಬಿದರಹಳ್ಳಿ ಗ್ರಾಪಂ ಸೇರಿದಂತೆ ಮೊದಲ ಹಂತದಲ್ಲಿ ಒಟ್ಟು 148 ಗ್ರಾಪಂಗಳ 2303 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ.