ನಂಜನಗೂಡಿನಲ್ಲಿ ಇಂದಿನಿಂದ 15 ವೈನ್ ಸ್ಟೋರ್ ಆರಂಭ
ಮೈಸೂರು

ನಂಜನಗೂಡಿನಲ್ಲಿ ಇಂದಿನಿಂದ 15 ವೈನ್ ಸ್ಟೋರ್ ಆರಂಭ

May 4, 2020

ನಂಜನಗೂಡು, ಮೇ 3(ರವಿ)-ರಾಜ್ಯ ಸರ್ಕಾರದ ಆದೇಶದಂತೆ ಹಲವು ಷರ ತ್ತಿನ್ವಯ ನಾಳೆ(ಮೇ 4) ನಂಜನಗೂಡು ನಗರ ಸೇರಿದಂತೆ ತಾಲೂಕಿನಾದ್ಯಂತ ಇರುವ 15 ವೈನ್ಸ್ ಸ್ಟೋರ್‍ಗಳು ಆರಂಭವಾಗ ಲಿವೆ ಎಂದು ತಾಲೂಕು ಅಬಕಾರಿ ನಿರೀಕ್ಷಕಿ ಪದ್ಮಾವತಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಜಾರಿಗೊಂಡು ವೈನ್ಸ್ ಸ್ಟೋರ್‍ಗಳು ಸ್ಥಗಿತಗೊಂಡಿದ್ದವು. ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಷರತ್ತು ಬದ್ಧ ಆದೇಶ ಹೊರಡಿಸಿದ್ದು, ಅದರಂತೆ ಸೋಮವಾರದಿಂದ ನಗರದ 1 ಎಂಎಸ್ ಐಎಲ್ ಹಾಗೂ 6 ವೈನ್ಸ್‍ಸ್ಟೋರ್ಸ್, ಗ್ರಾಮಾಂ ತರದ 1 ಎಂಎಸ್‍ಐಎಲ್ ಹಾಗೂ 7 ವೈನ್ಸ್‍ಸ್ಟೋರ್ಸ್‍ಗಳು ಮದ್ಯ ಮಾರಾಟ ಆರಂಭಿಸಲಿವೆ ಎಂದು ಹೇಳಿದರು. ಸದ್ಯ ಭಾನುವಾರ ಸಂಜೆಯಿಂದಲೇ ಅಧಿಕಾರಿಗಳ ತಂಡ ವೈನ್ಸ್‍ಸ್ಟೋರ್‍ಗಳಿಗೆ ಭೇಟಿ ನೀಡಿ, ದಾಸ್ತಾನು ಪರಿಶೀಲಿಸುತ್ತಿದ್ದು, ಮಾಲೀಕರು ಅನುಸರಿಸಬೇಕಾದ ನಿಯಾ ಮವಳಿಗಳನ್ನು ತಿಳಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದರೆ ಅಂತಹವರ ಲೈಸನ್ಸ್ ಗಳನ್ನು ರದ್ದು ಮಾಡಲಾಗುವುದು. ಅಲ್ಲದೆ ಮದ್ಯದಂಗಡಿಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶವಿದ್ದು, ಮದ್ಯ ಖರೀದಿಸುವ ವರೂ ಶಿಸ್ತಿನಿಂದ ವರ್ತಿಸಬೇಕು. ಗೊಂದಲ -ಗಲಾಟೆ ಸೃಷ್ಟಿಸಿದರೆ ಅಂತಹವರ ವಿರುದ್ಧವೂ ಮೊಕದ್ದಮೆ ದಾಖಲಾಗುವುದು ಎಂದು ಅಬಕಾರಿ ನಿರೀಕ್ಷಕಿ ಪದ್ಮಾವತಿ ಎಚ್ಚರಿಸಿದರು.

Translate »