ಹುಣಸೂರು, ಮೇ 3-ತಂಬಾಕು ಬೆಳೆಗೆ ಅತ್ಯವಶ್ಯಕ ವಾಗಿ ಬೇಕಾಗಿರುವ ಎಸ್‍ಓಪಿ ರಸಗೊಬ್ಬರವನ್ನು ಕಂಪನಿ ಬೆಲೆಗಿಂತ ಕಡಿಮೆ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡು ತ್ತಿರುವುದು ಬೆಳಕಿಗೆ ಬಂದಿದ್ದು, ಇದು ನಕಲಿ ಗೊಬ್ಬರವಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ಕೃಷಿ ಇಲಾಖೆ ಅಧಿಕಾರಿ ಗಳು ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ತಾಲೂಕಿನ ಬಿಳಿಕೆರೆ ಹೋಬಳಿ ರಾಮನಹಳ್ಳಿ ಸಮೀಪದ ತೊಳಸಿಕೊಪ್ಪಲು ಗ್ರಾಮದ ನಾಗೇಂದ್ರ ಎಂಬಾತನೇ ರಸಗೊಬ್ಬರವನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವವನಾಗಿದ್ದು, ಈತ ಹಲವೆಡೆ 250 ರಿಂದ 300 ಮೂಟೆ ಎಸ್‍ಓಪಿ ರಸಗೊಬ್ಬರವನ್ನು ದಾಸ್ತಾನು ಮಾಡಿ ರೈತರಿಗೆ ಚೀಲವೊಂದಕ್ಕೆ 2200 ರೂ.ಗೆ ಮಾರಾಟ ಮಾಡುತ್ತಿದ್ದನೆಂದು ಹೇಳಲಾಗಿದೆ. ಸಹಜವಾಗಿಯೇ ಈ ಗೊಬ್ಬರದ ಕಂಪನಿ ದರ 2300 ರೂ. ಆಗಿದ್ದು, 100 ರೂ. ಕಡಿಮೆ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದದ್ದು ಸಂಶಯಕ್ಕೆಡೆ ಮಾಡಿದೆ.
ಕಡಿಮೆ ಬೆಲೆಗೆ ಈತ ರಸಗೊಬ್ಬರ ಮಾರಾಟ ಮಾಡುತ್ತಿದ್ದರಿಂದ ಅನುಮಾನಗೊಂಡ ಕೆಲ ರೈತರು ಕೃಷಿ ಇಲಾಖೆಗೆ ಮಾಹಿತಿ ನೀಡಿದರು ಎಂದು ಹೇಳ ಲಾಗಿದೆ. ಈ ಮಾಹಿತಿ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರ ಸೂಚನೆ ಮೇರೆಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಮತ್ತು ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಯ ತಾಲೂಕು ನಿರ್ದೇಶಕ ಅಭಿಶೇಕ್ ಭಾನುವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಾವುದೇ ರಸಗೊಬ್ಬರವನ್ನು ತಂಬಾಕು ಬೆಳೆಯುವ ರೈತರಿಗೆ ತಂಬಾಕು ಮಂಡಳಿಯಿಂದ ನೀಡಬೇಕು ಅಥವಾ ಅಧಿಕೃತ ನೋಂದಾಯಿತ ಗೊಬ್ಬರ ವಿತರಕ ರಿಂದ ಮಾರಾಟವಾಗಬೇಕು. ಆದರೆ ತೊಳಸಿಕೊಪ್ಪಲು ಗ್ರಾಮದ ನಾಗೇಂದ್ರ ನೋಂದಾಯಿತ ವಿತರಕರಲ್ಲ. ಈತ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದಾನೆ ಎಂದು ಕೃಷಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.
ನಾಗೇಂದ್ರ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ರಸಗೊಬ್ಬರ ನಕಲಿ ಇರಬಹುದೆಂದು ಸಂಶಯ ವ್ಯಕ್ತಪಡಿಸಿ ರುವ ಕೃಷಿ ಇಲಾಖೆ ಅಧಿಕಾರಿಗಳು ಬಿಳಿಕೆರೆ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಜಯಕುಮಾರ್ ಅವರಿಗೆ ದೂರು ಸಲ್ಲಿಸಿ ದ್ದಾರೆ. ಸೋಮವಾರ ಎನ್‍ಓಪಿ ಕಂಪನಿಯ ಡಿಜಿಎಂ ಮತ್ತು ಸಹಾಯಕ ಕೃಷಿ ನಿರ್ದೇಶಕರು ಈ ರಸಗೊಬ್ಬರದ ತಪಾಸಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.