ಮೈಸೂರು,ಸೆ.29-ಮಾನವನಲ್ಲಿರುವ ಚೈತನ್ಯವೇ ದೇವರು ಎಂದು ಹಾಸ್ಯ ಸಾಹಿತಿ ಇಂದುಮತಿ ಸಾಲಿಮಠ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತ ರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ 18ನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ದೇವರೆಲ್ಲಿ ದ್ದಾನೆ? ವಿಷಯ ಕುರಿತು ಪ್ರವಚನ ನೀಡಿದ ಅವರು ಶರಣರ ವಚನದಲ್ಲಿ ಬರುವ ತನ್ನ ತಾನರಿತು ತಾನಾರೆಂದು ತಿಳಿದರೆ ತಾನೇ ದೇವರು ಎಂಬ ಸಾಲು ಅಕ್ಷರಶಃ ಸತ್ಯ. ಹಾಲಿನಲ್ಲಿ ತುಪ್ಪ ಇರುವಂತೆ, ಗಾಳಿಯಲ್ಲಿ ಗಂಧ ಇರುವಂತೆ, ಹೂವಿನಲ್ಲಿ ಮಕರಂದ ಇರುವಂತೆ ಪ್ರತಿಯೊಬ್ಬರ ಆತ್ಮದಲ್ಲಿಯೂ ದೇವನು ಇರುವನು. ಅಳುವ ಮಗುವಿನ ಕೆಂದುಟಿಯಲ್ಲಿ, ಅರಳಿದ ಹೂಗಳ ಸೌಗಂಧ ದಲ್ಲಿ, ಹರಿವ ನದಿಯಲಿ, ಸುರಿವ ಮಳೆ ಯಲಿ, ವಿವಿಧ ಬಗೆಯ ಮರ ಮತ್ತು ಪಕ್ಷಿ ಗಳಲ್ಲಿ ದೇವರ ಇರುವಿಕೆ ಕಂಡುಬರುತ್ತದೆ. ಅರಿತು ಹುಡುಕಿದರೆ ಪ್ರಕೃತಿಯ ಪ್ರತೀ ಅಂಶಗಳಲ್ಲಿಯೂ ದೇವಸ್ವರೂಪ ಗೋಚರ ವಾಗುತ್ತದೆ ಎಂದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಮಾತನಾಡಿ, ವಚನಗಳು ಮಹಾಲಿಂಗದ ಬೆಳಕು, ಶಿವಯೋಗಕ್ಕೆ ಸಾಧನ, ಪರಮ ಶಾಂತಿಯ ಪ್ರಕಾಶವಾಗಿವೆ. ವಚನಪ್ರಭೆ ಯನ್ನು ತಲುಪಿಸಲು ಕೋವಿಡ್‍ನ ಸಂದಿಗ್ಧ ಪರಿಸ್ಥಿತಿಯಲ್ಲೂ ಅಂತರ್ಜಾಲದ ಮುಖಾಂ ತರ ಪ್ರತಿಯೊಬ್ಬರನ್ನೂ ಒಂದೆಡೆ ಸೇರಿಸಿ ಸತ್ಸಂಗ ವಾತಾವರಣವನ್ನು ನಿರ್ಮಿಸ ಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮಾತೆ ಜಯದೇವಿ ತಾಯಿ, ಶರಣು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್‍ಕುಮಾರ್ ವಾಜಂತ್ರಿ, ಕಾರ್ಯ ದರ್ಶಿ ಅನಿತಾ ನಾಗರಾಜ್, ಕೊಪ್ಪಳ ಜಿಲ್ಲಾ ಧ್ಯಕ್ಷೆ ಅರುಣ ನರೇಂದ್ರ, ಮಂಡ್ಯ ಅಧ್ಯಕ್ಷ ಮಹದೇವಪ್ಪ, ಕೇಂದ್ರೀಯ ಸಂಚಾಲಕ ರಾದ ಸುಧಾ ಮೃತ್ಯುಂಜಯಪ್ಪ, ಲಿಂಗಣ್ಣ, ಹವ್ಯಾಸಿ ಗಾಯಕ ಬಸವರಾಜು, ಬಹ್ರೈನ್ ಶಿವಾನಂದ ಪಾಟೀಲ್, ಮಸ್ಕತ್ ಭೀಮ್ ನೀಲಕಂಠರಾವ್ ಹಂಗರ್ಗೆ, ನಂದೀಶ್ವರ್ ನಂದು, ಇಟಲಿಯ ಜಯಮೂರ್ತಿ, ಎಚ್.ಕೆ. ಚನ್ನಪ್ಪ, ಡಾ.ಸುಮಂಗಳ, ವೀರೇಶ ಮೂರ್ತಿ, ಸುನಿತಾ ಅಂಗಡಿ ಕೊಡೇಕಲ್, ಮಹಂತೇಶ್, ಸರಸ್ವತಿ ರಾಮಣ್ಣ, ನೀಲಾಂ ಬಿಕಾದೇವಿ ನಾಗರಾಜು, ಸುನಿತಾ ಅಂಗಡಿ ಕೊಡೇಕಲ್, ಪೂರ್ಣಿಮಾ, ಶ್ವೇತ ಅನು ರಾಗ್, ಮಾರುತೇಶ್, ಕವಿತ, ಅಶ್ವಿನಿ ಉಮೇಶ್, ದೀಪ ತೊಲಗಿ, ಭಾಗ್ಯ, ಸಿದ್ಧಪ್ಪ ಬೋರಗಿ, ಶಿವಪುತ್ರಪ್ಪ, ನಾಗನಗೌಡ ಪಾಟೀಲ್, ವೀರೇಶಮೂರ್ತಿ ಉಪಸ್ಥಿತರಿದ್ದರು.