ಮೈಸೂರು

ಕೊರೊನಾ ಸಂದರ್ಭ ಹೃದ್ರೋಗ ಸಮಸ್ಯೆ ಪರಿಹಾರಕ್ಕೆ ಮಾಹಿತಿ ಮೂಲಕ 

September 30, 2020

ಜೆಎಸ್‍ಎಸ್ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆ  

ಮೈಸೂರು, ಸೆ.29(ಪಿಎಂ)- ಸಾರ್ವಜನಿಕರಿಗೆ ಹೃದ್ರೋಗ ಮತ್ತು ಕೊರೊನಾ ಸಂದೇಹ ಸಂಬಂಧ ಮಾಹಿತಿ ನೀಡುವ ಮೂಲಕ ಮೈಸೂ ರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆ ಆಚರಿಸಲಾಯಿತು. `ಯೂಸ್ ಹಾರ್ಟ್ ಟು ಟ್ರೀಟ್ ಹಾರ್ಟ್ ಡಿಸೀಸ್’ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನಾಚರಣೆಯನ್ನು ಜೆಎಸ್‍ಎಸ್ ಆಸ್ಪತ್ರೆ ನಿರ್ದೇಶಕ ಡಾ.(ಕರ್ನಲ್) ಎಂ.ದಯಾನಂದ ಉದ್ಘಾಟಿಸಿದರು.

ಆಸ್ಪತ್ರೆಯ ಹೃದಯ ತಜ್ಞ ಡಾ.ವಿನಯ್‍ಕುಮಾರ್, ಡಾ. ಮಂಜಪ್ಪ ಅವರು ಕೋವಿಡ್-19 ಸಂದರ್ಭದಲ್ಲಿ ಹೃದ್ರೋಗ ಸಮಸ್ಯೆಯ ಪರಿಹಾರಗಳ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿ, ಅವರ ಸಂದೇಹಗಳನ್ನು ಪರಿಹರಿಸಿದರು. ಅಲ್ಲದೆ, ವಿಶ್ವ ಹೃದಯ ದಿನಾಚರಣೆ ಮಹತ್ವವನ್ನು ತಿಳಿಸಿಕೊಟ್ಟರು. ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಬಸವನ ಗೌಡಪ್ಪ, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಂ.ಗುರುಸ್ವಾಮಿ, ಉಪನಿರ್ದೇಶಕರಾದ ಡಾ.ಮಂಜುನಾಥ್, ಡಾ.ಶ್ಯಾಮ್ ಪ್ರಸಾದ್‍ಶೆಟ್ಟಿ, ಮುಖ್ಯ ಅಭಿಯಂತರ ಬೆನ್ನೂರ್, ಸ್ಥಾನೀಯ ವೈದ್ಯಾಧಿಕಾರಿ ಡಾ.ಶಾಂತಮಲ್ಲಪ್ಪ, ಕಾರ್ಡಿಯಾಲಜಿ ಮುಖ್ಯಸ್ಥ ಡಾ.ಸುನೀಲ್ ಕುಮಾರ್, ಆಸ್ಪತ್ರೆಯ ಹೃದಯ ತಜ್ಞರಾದ ಡಾ.ಕೆ.ಆರ್.ಸುಜಯ್, ಡಾ.ಗಣೇಶ್ ಜಿ.ಗೌಡ, ಡಾ.ಗುರುಪ್ರಸಾದ್, ಡಾ.ಪೂರ್ಣಿಮ ಮತ್ತಿತರರು ಹಾಜರಿದ್ದರು.

 

 

Translate »