ನಕಲಿ ಪ್ರಶಸ್ತಿಗಳಿಗೆ ಕಡಿವಾಣ ಅಗತ್ಯ
ಮೈಸೂರು

ನಕಲಿ ಪ್ರಶಸ್ತಿಗಳಿಗೆ ಕಡಿವಾಣ ಅಗತ್ಯ

September 30, 2020

ಮೈಸೂರು, ಸೆ.29(ಆರ್‍ಕೆಬಿ)- ಇಂದು ಲಾಬಿ ಮಾಡಿದವರಿಗೆಲ್ಲ ಸಾಹಿತ್ಯ ಪ್ರಶಸ್ತಿ ಎಂಬಂತಾಗಿದೆ. ಪ್ರಶಸ್ತಿ ಕೊಡುವವರು, ತೆಗೆದುಕೊಳ್ಳುವವರ ಹಿನ್ನೆಲೆ ನೋಡಿದರೆ ನಾಚಿಕೆಯಾಗುತ್ತದೆ. ಸರ್ಕಾರ ಇಂಥ ನಕಲಿ ಪ್ರಶಸ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಸಾಹಿತಿ ಬನ್ನೂರು ಕೆ.ರಾಜು ಒತ್ತಾಯಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳವಾರ ಡಿ.ಪಿ.ಚಿಕ್ಕಣ್ಣ ಅವರ `ಕವ ಲೊಡೆದ ಕರುಳಬಳ್ಳಿ’ ಮತ್ತು `ಓದೊಂದು ಒಲವಿನ ಸ್ಫೂರ್ತಿ’ ಕಾದಂಬರಿ ಬಿಡುಗಡೆ ಮಾಡಿದ ಅವರು, ಸಾಹಿತ್ಯ ಮತ್ತು ಪುಸ್ತಕೋದ್ಯಮ ಪೂರ್ಣ ಕಲುಷಿತ ಗೊಂಡಿದೆ. ಚಿಕ್ಕಣ್ಣ ಕಾದಂಬರಿ ಮೂಲಕ ಸಮಾಜದ ಶುದ್ಧೀಕರಣಕ್ಕೆ ಯತ್ನಿಸಿದ್ದಾರೆ. ಇಂತಹ ಅರ್ಹ ಕೃತಿಗಳಿಗೆ ಪ್ರಶಸ್ತಿ ಸಿಗುವು ದಿಲ್ಲ. ಏಕೆಂದರೆ ಪ್ರಶಸ್ತಿ ಬೇಕಾದರೆ ಲಾಬಿ ಮಾಡಬೇಕು ಎಂದು ವ್ಯಂಗ್ಯವಾಡಿದರು. ಇತ್ತೀಚೆಗೆ ಮೈಸೂರಲ್ಲಿ ನಕಲಿ ಗೌರವ ಡಾಕ್ಟರೇಟ್ ಹಂಚುತ್ತಿದ್ದವರನ್ನು ಪೊಲೀ ಸರು ವಶಕ್ಕೆ ಪಡೆದಿದ್ದಾರೆ. ನಕಲಿ ಸಾಹಿತ್ಯ ಪ್ರಶಸ್ತಿಗಳೂ ಅಪಾಯಕಾರಿ ಎಂದರು.

ಕೆ.ಆರ್.ಪೊಲೀಸ್ ಠಾಣೆ ಪೊಲೀಸ್ ಇನ್‍ಸ್ಪೆಕ್ಟರ್ ಶ್ರೀನಿವಾಸ್, ಸರ್ಕಾರಿ ನೌಕ ರರ ಸಂಘದ ನಿರ್ದೇಶಕ ಎನ್.ಕೆ. ಗಣೇಶ್, ಮೈಮ ನಾಗರಾಜು, ಮೈನೆಟ್ ಮಂಜೇಶ್, ಸಂಗೀತ, ನಾಟಕ ನಿರ್ದೇಶಕ ಹೆಚ್.ಪಿ.ನಾಗೇಂದ್ರಪ್ರಸಾದ್, ರೂಪಾ ಚಿಕ್ಕಣ್ಣ ಇನ್ನಿತರÀರು ಉಪಸ್ಥಿತರಿದ್ದರು.

 

 

Translate »