ರಾಜ್ಯದಲ್ಲಿ 1925 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 23474ಕ್ಕೇರಿಕೆ ಭಾನುವಾರ 38 ಮಂದಿ ಸಾವು, 603 ಮಂದಿ ಗುಣಮುಖ
ಮೈಸೂರು

ರಾಜ್ಯದಲ್ಲಿ 1925 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 23474ಕ್ಕೇರಿಕೆ ಭಾನುವಾರ 38 ಮಂದಿ ಸಾವು, 603 ಮಂದಿ ಗುಣಮುಖ

July 6, 2020

ಬೆಂಗಳೂರು, ಜು.5- ರಾಜ್ಯದಲ್ಲಿ ಭಾನುವಾರವೂ ಅಬ್ಬರಿಸಿದ ಕೊರೊನಾ ಸೋಂಕು, ಇಂದು 1925 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 23,474ಕ್ಕೆ ಏರಿಕೆಯಾಗಿದೆ. ಸಾವಿನ ಸರಣಿಯೂ ಮುಂದುವರೆದಿದ್ದು, ಬೆಂಗಳೂರಿನಲ್ಲಿ 16 ಸೇರಿದಂತೆ ರಾಜ್ಯದಲ್ಲಿ 38 ಮಂದಿ ಭಾನುವಾರ ಮೃತಪಟ್ಟಿ ದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 373ಕ್ಕೆ ಏರಿಕೆ ಯಾಗಿದ್ದು, 603 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುಣಮುಖರಾದವರ ಸಂಖ್ಯೆ 9847ಕ್ಕೆ ಏರಿಕೆಯಾಗಿದೆ. 13250 ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ 147, ಬಳ್ಳಾರಿ 90, ವಿಜಯಪುರ 51, ಕಲಬುರಗಿ 49, ಉಡುಪಿ ಮತ್ತು ಧಾರವಾಡ ತಲಾ 45, ಬೀದರ್ 29, ಮೈಸೂರು 25, ಕೊಪ್ಪಳ 22, ಉತ್ತರ ಕನ್ನಡ 21, ಚಾಮರಾಜನಗರ 19, ಹಾವೇರಿ 15, ಹಾಸನ 14, ಚಿಕ್ಕಬಳ್ಳಾಪುರ ಮತ್ತು ತುಮಕೂರು ಹಾಗೂ ಕೋಲಾರ ತಲಾ 13, ಬೆಳಗಾವಿ ಮತ್ತು ದಾವಣಗೆರೆ ತಲಾ 11, ರಾಯಚೂರು ಮತ್ತು ಮಂಡ್ಯ ತಲಾ 10, ಚಿಕ್ಕಮಗ ಳೂರು 8, ಗದಗ 7, ರಾಮನಗರ 4, ಚಿತ್ರದುರ್ಗದಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಥಮ ಸಂಪರ್ಕದ 30354 ಮತ್ತು ದ್ವಿತೀಯ ಸಂಪರ್ಕದ 23449 ಮಂದಿ ಸೇರಿದಂತೆ 53803ಯನ್ನು ಕ್ವಾರಂಟೈನ್ ಮಾಡಲಾಗಿದೆ.