ಭಾನುವಾರ ಮತ್ತೊಂದು ಬಲಿ: ಮೃತರ ಸಂಖ್ಯೆ 5ಕ್ಕೆ ಏರಿಕೆ
ಮೈಸೂರು

ಭಾನುವಾರ ಮತ್ತೊಂದು ಬಲಿ: ಮೃತರ ಸಂಖ್ಯೆ 5ಕ್ಕೆ ಏರಿಕೆ

July 6, 2020

ಮೈಸೂರು,ಜು.5(ಎಂಟಿವೈ)- ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 46 ವರ್ಷದ ವ್ಯಕ್ತಿ ಭಾನುವಾರ ಮೈಸೂರಲ್ಲಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿದೆ. ಮೈಸೂರಲ್ಲಿ ಟ್ರಾವೆಲ್ ಹಿಸ್ಟರಿ ಯೊಂದಿಗೆ 50 ವರ್ಷ ಮೇಲ್ಪಟ್ಟವರಲ್ಲಿ ಹಾಗೂ ಶ್ವಾಸಕೋಶದ ಸಮಸ್ಯೆಗೆ ತುತ್ತಾದವ ರಲ್ಲೇ ಹೆಚ್ಚಾಗಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಮಕ್ಕಳು ಹಾಗೂ ಹಿರಿಯ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಕೊರೊನಾ ಪಾಠ ಕಲಿಸಿದೆ. ತೀವ್ರ ಉಸಿ ರಾಟದ ತೊಂದರೆ(ಐಎಲ್‍ಐ)ಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೈಸೂರಿನ ಅಗ್ರ ಹಾರದ 46 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿಯಮಾನುಸಾರ ಆ ಇಬ್ಬರ ಗಂಟಲು ದ್ರವದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಆ ವೃದ್ಧೆಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಎಸ್‍ಎಆರ್‍ಐ(ಸಾರಿ) ವಾರ್ಡ್‍ನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗು ತ್ತಿತ್ತು. ಆದರೆ ಕಳೆದ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿದ್ದರೆ, ಆ ಮೂಲಕ ಮೈಸೂರಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಜೂ.24ರಂದು ಕೆ.ಆರ್.ನಗರದ 87ವರ್ಷದ ವೃದ್ಧ, ಜೂ.28ರಂದು ಮೈಸೂರಿನ ಕಲ್ಯಾಣಗಿರಿಯ 70 ವರ್ಷದ ವೃದ್ಧ, ಜೂ.30 ಕೆ.ಆರ್.ನಗರದ 36 ವರ್ಷದ ಯುವಕ, ಜು.2 ತಿ.ನರಸೀಪುರ ಮೂಲದ 60 ವರ್ಷದ ವೃದ್ಧೆ ಮೃತಪಟ್ಟಿದ್ದರು. ಇದೀಗ ಕಳೆದ ರಾತ್ರಿ ಕೊರೊನಾಗೆ 5ನೇ ಬಲಿಯಾಗಿದೆ.