ಮೈಸೂರಲ್ಲಿ ಮತ್ತೆ 25 ಮಂದಿಯಲ್ಲಿ ಕೊರೊನಾ
ಮೈಸೂರು

ಮೈಸೂರಲ್ಲಿ ಮತ್ತೆ 25 ಮಂದಿಯಲ್ಲಿ ಕೊರೊನಾ

July 6, 2020

ಮೈಸೂರು,ಜು.5(ಎಂಟಿವೈ)- ಮೈಸೂ ರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿ ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಆತಂಕ ಕ್ಕೀಡಾಗಿದ್ದಾರೆ. ಭಾನುವಾರವೂ ಗರ್ಭಿಣಿ, ಓರ್ವ ಬಾಲಕ, 7 ಮಹಿಳೆಯರು ಸೇರಿ ದಂತೆ 25 ಮಂದಿಯಲ್ಲಿ ಸೋಂಕು ಪತ್ತೆ ಯಾಗಿದ್ದು, ಸೋಂಕಿತರ ಸಂಖ್ಯೆ 436ಕ್ಕೆ ಏರಿಕೆ ಕಂಡಿದ್ದರೆ, 12 ಮಂದಿ ಸೋಂಕಿ ತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.

ಕಳೆದ ಒಂದು ವಾರದಿಂದ ಮೈಸೂರಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಜನರ ನಿದ್ದೆಗೆಡಿಸಿದೆ. ಹೊರ ರಾಜ್ಯ ಮಾತ್ರವಲ್ಲದೆ, ಬೆಂಗಳೂರಿಂದ ವಾಪಸ್ಸಾದ ಬಹುತೇಕರಲ್ಲಿ ಕೊರೊನಾ ಪತ್ತೆಯಾಗುತ್ತಿದ್ದು, ಆತಂಕ ಹೆಚ್ಚಿಸುತ್ತಿದೆ. ಮೈಸೂರನ್ನು ಕಳೆದೊಂದು ವಾರದಿಂದ ಕೊರೊನಾ ಮಹಾಮಾರಿ ತೀವ್ರ ಸ್ವರೂಪ ದಲ್ಲಿ ಕಾಡುತ್ತಿದ್ದು, ಒಂದೇ ವಾರದಲ್ಲಿ 150ಕ್ಕೂ ಅಧಿಕ ಕೊರೊನಾ ಸೋಂಕಿತ ಹೊಸ ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸುವಂತೆ ಮಾಡಿದೆ. ಶನಿವಾರ 22, ಸೋಮವಾರ 22, ಬುಧವಾರ 51 ಮಂದಿ, ಗುರುವಾರ 17 ಮಂದಿಯಲ್ಲಿ ಹಾಗೂ ಶುಕ್ರವಾರ 35 ಮಂದಿ ಹಾಗೂ ಶನಿವಾರ 38 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಮರು ದಿನವೇ 25 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರ ಬೆನ್ನಲ್ಲೇ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, ಚಿಕಿತ್ಸೆ ಫಲಕಾರಿಯಾಗದೇ ಓರ್ವ ಸೋಂಕಿತ ಸಾವಿಗೀಡಾಗಿದ್ದಾರೆ. ಇದುವ ರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 436ಕ್ಕೆ ಹೆಚ್ಚಾಗಿದೆ. ಅದರಲ್ಲಿ 252 ಮಂದಿ ಗುಣ ಮುಖರಾಗಿದ್ದರೆ, 179 ಮಂದಿ ಸಕ್ರಿಯ ಪ್ರಕರಣವಿದೆ. ಭಾನುವಾರ ಪತ್ತೆಯಾದ 25 ಮಂದಿಯಲ್ಲಿ 12 ಮಂದಿಗೆ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಕೊರೊನಾ ತಗುಲಿ ದ್ದರೆ, 6 ಮಂದಿ ಬೆಂಗಳೂರಿಂದ ಬಂದವರಾ ಗಿದ್ದಾರೆ. ಇಬ್ಬರು ಉಸಿರಾಟದ ಸಮಸ್ಯೆ (ಎಸ್‍ಎಆರ್‍ಐ), 4 ಮಂದಿಗೆ ಐಎಲ್‍ಐ ಹಾಗೂ ಓರ್ವ ಗರ್ಭಿಣಿ ಸೇರಿದ್ದಾರೆ.

19 ಹೊಸ ಪ್ರಕರಣಗಳಿವು: ಮೈಸೂ ರಲ್ಲಿ ಭಾನುವಾರ ಪತ್ತೆಯಾದ 25 ಹೊಸ ಕೊರೊನಾ ಸೋಂಕಿತರ ಪ್ರಕರಣದಲ್ಲಿ 7 ವರ್ಷದ ಬಾಲಕ, 17 ವರ್ಷದ ಅಪ್ರಾಪ್ತ ಸೇರಿದಂತೆ 15 ಪುರುಷರು, 10 ಮಹಿಳೆ ಯರು ಸೇರಿದ್ದಾರೆ. ಅದರಲ್ಲಿ 64 ವರ್ಷದ ಹಿರಿಯ ನಾಗರಿಕರಿಗೆ ಕೊರೊನಾ ಸುಳಿ ಸುತ್ತಿಕೊಂಡಿದೆ.

ಮೈಸೂರಿನ ರಾಜೀವ್‍ನಗರದ 2 ನೇ ಹಂತದ ಒಂದೇ ಮನೆಯಲ್ಲಿ 33 ವರ್ಷದ ಮಹಿಳೆ ಹಾಗೂ 7 ವರ್ಷದ ಬಾಲಕ, ಉದಯಗಿರಿಯ 2ನೇ ಕ್ರಾಸ್‍ನಲ್ಲಿ ಒಂದೇ ಮನೆಯಲ್ಲಿ 40 ವರ್ಷದ ಮಹಿಳೆ, 24 ವರ್ಷದ ಮಹಿಳೆ, 17 ವರ್ಷದ ಯುವಕ, 21 ವರ್ಷದ ಯುವತಿ, 19 ವರ್ಷದ ಯುವಕ, ಬೀಡಿ ಕಾಲೋನಿಯ 25 ವರ್ಷದ ಮಹಿಳೆ, ಮಂಡಿಮೋಹಲ್ಲಾದ ನಿವಾಸಿ 29 ವರ್ಷದ ಮಹಿಳೆ, ಮೈಸೂರು ತಾಲೂಕು ನಾಡನಹಳ್ಳಿ ಸಮೀಪದ ಕೆಎಸ್‍ಆರ್‍ಟಿಸಿ ಲೇಔಟ್‍ನ 34 ವರ್ಷದ ವ್ಯಕ್ತಿ, ಮೈಸೂರು ತಾಲೂಕಿನ ವರುಣಾ ಗ್ರಾಮದ ದೇವಮ್ಮ ದೇವಾಲಯದ ಸಮೀಪದ ನಿವಾಸಿ 55 ವರ್ಷದ ವ್ಯಕ್ತಿ, ಬೆಂಗಳೂರಿಂದ ಹುಣಸೂರು ತಾಲೂಕಿನ ಭರತ್ವಾಡಿ ಗ್ರಾಮಕ್ಕೆ ಬಂದಿದ್ದ 38 ವರ್ಷದ ಪುರುಷ, ಮೈಸೂರಿನ ಅಶೋಕ ರಸ್ತೆಯ ವೀರನಗೆರೆಯ ಜವರಟ್ಟಿ ಸ್ಟ್ರೀಟ್ ನಿವಾಸಿ 20 ವರ್ಷದ ಯುವತಿ, ಮುಕಾಂಬಿಕೆನಗರದ 41 ವರ್ಷದ ಪುರುಷ, ಮೈಸೂರಿನ 64 ವರ್ಷದ ವೃದ್ದ, ಮೈಸೂರಿನ ಮೇಟಗಳ್ಳಿಯ ಸಂಜೀವಿನಿ ಸರ್ಕಲ್ ಸಮೀಪದ ನಿವಾಸಿ 25 ವರ್ಷದ ಯುವಕ, ಜಲಪುರಿ 2ನೇ ಕ್ರಾಸ್‍ನ ಪೊಲೀಸ್ ಕ್ವಾಟ್ರಸ್ ನಿವಾಸಿ 42 ವರ್ಷದ ಪೊಲೀಸ್ ಪೇದೆ, ಲಕ್ಷ್ಮಿಪುರಂ 1ನೇ ಮೇನ್ ನಿವಾಸಿ 45 ವರ್ಷದ ಪುರುಷ, ಜ್ಯೋತಿನಗರದ ಕೆಇಬಿ ಕಾಲೋನಿಯ 40 ವರ್ಷದ ವ್ಯಕ್ತಿ, ಟಿ.ಕೆ.ಲೇಔಟ್, ಸಿದ್ದಾರ್ಥನಗರ, ಶ್ರೀರಾಮಪುರದ ಪರಸಯ್ಯನಹುಂಡಿ, ಲಕ್ಷ್ಮೀಪುರಂ, ಜೆಸಿನಗರದಲ್ಲಿ ತಲಾ ಒಬ್ಬೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. 56 ವರ್ಷದ ವ್ಯಕ್ತಿ, 38 ವರ್ಷದ ಮಹಿಳೆ, 55 ವರ್ಷದ ಮಹಿಳೆ, 59 ವರ್ಷದ ಪುರುಷ, 50 ವರ್ಷದ ಪುರುಷ, 47 ವರ್ಷದ ಪುರುಷ, 27 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಕ್ವಾರಂಟೇನ್‍ನಲ್ಲಿ 2657ಕ್ಕೂ ಹೆಚ್ಚು ಮಂದಿ: ವಿವಿಧ ರಾಜ್ಯ ಮೈಸೂರಿಗೆ ವಾಪಸ್ಸಾ ಗಿರುವ 2657 ಮಂದಿ ಕ್ವಾರಂಟೇನ್‍ನಲ್ಲಿದ್ದಾರೆ. ಅವರಲ್ಲಿ 52 ಮಂದಿ 7 ದಿನಗಳ ಫೆಸಿಲಿಟಿ ಕ್ವಾರಂಟೇನ್‍ನಲ್ಲೂ, 2605 ಮಂದಿ 14 ದಿನಗಳ ಹೋಮ್ ಕ್ವಾರಂಟೇನ್ ನಲ್ಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇದುವರೆಗೂ 13551 ಮಂದಿ ಮೇಲೆ ನಿಗಾ ಇಡಲಾಗಿತ್ತು. ಅವರಲ್ಲಿ 10715 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಇದುವರೆಗೆ 23266 ಮಂದಿ ಕಫ, ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ 22830 ಮಂದಿಯ ಸ್ಯಾಂಪಲ್ ನೆಗೆಟಿವ್ ಬಂದಿದೆ. 436 ಪಾಸಿಟಿವ್ ಆಗಿತ್ತು. ಅದರಲ್ಲಿ 252ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 165 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 6 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, ಇಬ್ಬರು ಗರ್ಭಿಣಿಯರು ಜಯಲಕ್ಷ್ಮೀಪುರಂ ಕೋವಿಡ್-ಹೆರಿಗೆ ಆಸ್ಪತ್ರೆಯಲ್ಲಿ ಹಾಗೂ 6ಮಂದಿ ಮನೆಯಲ್ಲಿಯೇ ಐಸೋಲೆಟೆಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಚಿಕಿತ್ಸೆ ಫಲಕಾರಿಯಾಗದೇ 5 ಮಂದಿ ಸಾವಿಗೀಡಾಗಿದ್ದಾರೆ.

9 ಹೊಸ ಕಂಟೇನ್ಮೆಂಟ್ ಜೋನ್: ಇಂದು ಪತ್ತೆಯಾದ ಎಲ್ಲಾ ಸೋಂಕಿತರು ಮನೆಯಲ್ಲಿದ್ದ ಹಿನ್ನೆಲೆಯಲ್ಲಿ ಸೋಂಕಿತರ ಮನೆಯಿರುವ ರಸ್ತೆಯನ್ನು ಕಂಟೇನ್ಮೆಂಟ್ ವಲಯವಾಗಿ ಪರಿವರ್ತಿಸಿ ಸೀಲ್ಡ್‍ಡೌನ್ ಮಾಡಲಾಗಿದೆ. ಮೈಸೂರಿನ ಜೆಸಿ ನಗರದ ಮೊದಲ ಕ್ರಾಸ್, ಮಂಡಿಮೊಹಲ್ಲಾದ ಸೊಪ್ಪಿನಕೇರಿ ಮೊದಲ ಕ್ರಾಸ್, ಮೈಸೂರು ತಾಲೂಕು ನಾಡನಹಳ್ಳಿ ಸಮೀಪದ ಕೆಎಸ್‍ಆರ್‍ಟಿಸಿ ಲೇಔಟ್, ವರುಣಾ ಗ್ರಾಮದ ದೇವಮ್ ದೇವಾಲಯದ ಸಮೀಪದ ರಸ್ತೆ, ಹುಣಸೂರು ತಾಲೂಕಿನ ಭರತ್ವಾಡಿ, ಪರಸಯ್ಯನಹುಂಡಿ ಶ್ರೀರಾಂಪುರದ ಮೂಕಾಂಬಿಕ ನಗರ, ಒಂದನೇ ಮೇನ್ ಲಕ್ಷ್ಮೀಪುರಂ, ಸಿದ್ದಾರ್ಥ ಬಡಾವಣೆ, ವಿನಯ ಮಾರ್ಗ 8ನೇ ಕ್ರಾಸ್, ಟಿ.ಕೆ.ಲೇಔಟ್ 5ನೇ ಮೇನ್ ಅನ್ನು ಹೊಸ ಕಂಟೇನ್ಮೆಂಟ್ ಜೋನ್ ಆಗಿ ಘೋಷಿಸಲಾಗಿದೆ.

Translate »