ಚಿಕ್ಕ ಮನೆಯಲ್ಲಿ 2-3 ಕುಟುಂಬ ವಾಸ; ಪ್ರತ್ಯೇಕ ಮನೆ ನಿರ್ಮಾಣಕ್ಕೆ ಶೀಘ್ರ ಕ್ರಮ
ಮೈಸೂರು

ಚಿಕ್ಕ ಮನೆಯಲ್ಲಿ 2-3 ಕುಟುಂಬ ವಾಸ; ಪ್ರತ್ಯೇಕ ಮನೆ ನಿರ್ಮಾಣಕ್ಕೆ ಶೀಘ್ರ ಕ್ರಮ

August 28, 2020

ಮೈಸೂರು, ಆ.27(ಪಿಎಂ)- ಅಶೋಕ ಪುರಂನ ಬಹಳ ಚಿಕ್ಕದಾದ ಮನೆಗಳಲ್ಲಿ 2-3 ಸಂಸಾರಗಳು ವಾಸಿಸುತ್ತಿವೆ. ಈ ಬಡ ಕುಟುಂಬಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪ್ರತ್ಯೇಕ ಮನೆಗಳನ್ನು ನಿರ್ಮಿಸಿಕೊಡಲು ಶೀಘ್ರ ಕ್ರಮ ಕೈಗೊಳ್ಳು ವುದಾಗಿ ಶಾಸಕ ಎಸ್.ಎ.ರಾಮದಾಸ್ ಭರವಸೆ ನೀಡಿದರು.

ಕೆಆರ್ ಕ್ಷೇತ್ರ ವ್ಯಾಪ್ತಿಯ ಮೈಸೂರು ಮಹಾ ನಗರ ಪಾಲಿಕೆಯ ವಾರ್ಡ್ 56 ಹಾಗೂ 60ರ ಅಶೋಕಪುರಂನಲ್ಲಿ ಗುರುವಾರ ಪಾದ ಯಾತ್ರೆ ನಡೆಸಿದ ಶಾಸಕರು, ನಾಗರಿಕರ ಸಮಸ್ಯೆಗಳನ್ನು ಆಲಿಸಿದರು. ಇಲ್ಲಿನ ಕಂಟೇ ನ್ಮೆಂಟ್ ವಲಯಗಳಿಗೆ ಭೇಟಿ ನೀಡಿ, ಕೊರೊನಾ ಸೋಂಕಿಗೆ ಒಳಗಾದ 27 ಕುಟುಂಬ ಗಳಿಗೆ ರೋಗನಿರೋಧಕ ಶಕ್ತಿ ವೃದ್ಧಿಸುವ ಆಯುಷ್ ಕಿಟ್ ವಿತರಿಸಿದರು. ಅಂಬೇ ಡ್ಕರ್ ಉದ್ಯಾನದಲ್ಲಿ ಡಾ. ಬಿ.ಆರ್.ಅಂಬೇ ಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಸಿದ್ದಪ್ಪಾಜಿ ದೇವಸ್ಥಾನಕ್ಕೆ 3 ಲಕ್ಷ: ಅಶೋಕ ಪುರಂನ ಚಿಕ್ಕಗರಡಿ ಅಭಿವೃದ್ಧಿ ಮತ್ತು ಸಿದ್ದಪ್ಪಾಜಿ ದೇವಸ್ಥಾನದ ಜೀರ್ಣೋ ದ್ಧಾರಕ್ಕೆ ತಲಾ 3 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿರುವ ಆದೇಶಪತ್ರವನ್ನು ಇದೇ ವೇಳೆ ವಿತರಿಸಿದ ಶಾಸಕರು, ಶೀಘ್ರ ದಲ್ಲಿ ಕಾಮಗಾರಿಗಳ ಅಂದಾಜು ಪಟ್ಟಿ ಸಿದ್ಧಪಡಿಸಿ ಕಾಮಗಾರಿ ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಶೋಕಪುರಂನ 6ನೇ ಕ್ರಾಸ್‍ನ ರಾಮ ಮಂದಿರ, 1ನೇ ಕ್ರಾಸ್‍ನ ಶಂಭುಲಿಂಗೇಶ್ವರ ದೇವಸ್ಥಾನ, 13ನೇ ಕ್ರಾಸ್‍ನ ಕತ್ತಿ ಮುನೇ ಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಕ್ಕಾಗಿ ಆರಾಧನಾ ಸಮಿತಿ ಸಭೆಯಲ್ಲಿ ತಲಾ 1 ಲಕ್ಷ ರೂ. ಹಂಚಿಕೆ ಮಾಡ ಲಾಗಿದೆ ಎಂದು ಪ್ರಕಟಿಸಿದರು.

ಅಧಿಕಾರಿಗಳಿಗೆ ಸೂಚನೆ: ಇಲ್ಲಿನ ಅಂಬೇ ಡ್ಕರ್ ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಫುಟ್‍ಪಾತ್ ನಿರ್ಮಿಸಬೇಕು. ಒಳಚರಂಡಿ, ಕುಡಿಯುವ ನೀರಿನ ಸಮಸ್ಯೆಯೂ ಇದೆ ಎಂದು ನಾಗರಿಕರು ಶಾಸಕರ ಗಮನಸೆಳೆ ದರು. ಈ ಸಮಸ್ಯೆಗಳನ್ನು ಪರಿಹರಿಸಲು ಶೀಘ್ರ ಕ್ರಮ ವಹಿಸಿ ಎಂದು ಅಧಿಕಾರಿ ಗಳಿಗೆ ಸೂಚನೆ ನೀಡಿದರು.

ಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ಭುವನೇಶ್ವರಿ, ಶಾರದಮ್ಮ, ಡಾ.ಅಂಬೇಡ್ಕರ್ ಮಹಾಸಭಾ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಈಶ್ವರ್, ಪಿ.ಟಿ.ಕೃಷ್ಣ, ರವಿ, ನಾಗರಾಜ್ ಬಿಲ್ಲಯ್ಯ, ಸಂತೋಷ್ ಶಂಭು, ಹೇಮಂತ್, ಸತ್ಯಪ್ರಕಾಶ್, ನಾಗ ರತ್ನ, ರಂಗಸ್ವಾಮಿ, ರಾಜೀವ್, ರವೀಶ್, ಕುಮಾರ್ ಸೇರಿದಂತೆ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.

Translate »