2.35 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ಶಾಸಕ ಜಿಟಿಡಿ ಚಾಲನೆ
ಮೈಸೂರು

2.35 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ಶಾಸಕ ಜಿಟಿಡಿ ಚಾಲನೆ

January 5, 2022

ಮೈಸೂರು, ಜ.4(ಆರ್‍ಕೆಬಿ)- ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿಜಯನಗರ 3ನೇ ಹಂತದ ಸಿ. ಬ್ಲಾಕ್‍ನ 80 ಅಡಿ ರಸ್ತೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರು ಘಟಕ ಹಾಗೂ 2.35 ಕೋಟಿ ರೂ. ಅಂದಾಜಿನ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಶಾಸಕ ಜಿ.ಟಿ.ದೇವೇಗೌಡ ಅವರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 3ನೇ ವಲಯ ಕಚೇರಿ ವತಿಯಿಂದ ವಿಜಯನಗರ 3ನೇ ಹಂತ ಎ1 ಬ್ಲಾಕ್ ಬಡಾವಣೆಯಲ್ಲಿ 25 ಲಕ್ಷ ರೂ.ನಲ್ಲಿ ರಸ್ತೆ ಮರು ಡಾಂಬರೀಕರಣ, ಬಿ.ಬ್ಲಾಕ್‍ನ ಆಯ್ದ ಭಾಗಗಳಲ್ಲಿ ಗುಂಡಿ ಮುಚ್ಚುವ ಹಾಗೂ ಮರು ಡಾಂಬರೀಕರಣ (ರೂ.25 ಲಕ್ಷ), ಎ-1 ಬ್ಲಾಕ್ ಬಡಾ ವಣೆಯಲ್ಲಿ ಚರಂಡಿ ನಿರ್ಮಾಣ (ರೂ. 25 ಲಕ್ಷ), ಸಿ ಬ್ಲಾಕ್ ಬಡಾವಣೆಯಲ್ಲಿ ರಸ್ತೆ ಮರು ಡಾಂಬರೀಕರಣ (ರೂ.25 ಲಕ್ಷ), ಎ-1 ಬ್ಲಾಕ್ ಬಡಾವಣೆಯಲ್ಲಿ ದೊಡ್ಡ ಮಳೆ ನೀರು ಚರಂಡಿ (ಸುಬ್ರಹ್ಮಣ್ಯ ನಗರ ಹತ್ತಿರ) ತಡೆಗೋಡೆ ನಿರ್ಮಿಸುವ ಕಾಮಗಾರಿ (ರೂ.25 ಲಕ್ಷ), ಹಿನಕಲ್ ಗ್ರಾಮ ಸರ್ವೆ ನಂ.257ರಲ್ಲಿ ಬಡಾವಣೆಗೆ ನೀರು ಸರಬರಾಜು ಮಳೆ ನೀರು ಚರಂಡಿ ಮತ್ತು ಒಳಚರಂಡಿ ನಿರ್ಮಿಸುವ ಕಾಮಗಾರಿ (ರೂ.49 ಲಕ್ಷ), ಸಿ. ಬ್ಲಾಕ್ ಬಡಾವಣೆಯಲ್ಲಿ ಒಳಚರಂಡಿ ನಿರ್ಮಾಣ (ರೂ.25 ಲಕ್ಷ), ವಿಜಯನಗರ 4ನೇ ಹಂತ ಒಂದನೇ ಘಟ್ಟ ಬಡಾವಣೆಯ ಪಾರ್ಕ್ ನಂ.4ರ ಅಭಿವೃದ್ಧಿ ಕಾಮಗಾರಿ (ರೂ.25 ಲಕ್ಷ) ಹಾಗೂ ತೋಟಗಾರಿಕೆ ಉಪವಿಭಾಗದಿಂದ 3ನೇ ಹಂತದ ಉದ್ಯಾ ನವನಗಳ ಅಭಿವೃದ್ಧಿ ಮತ್ತು ನಿರ್ವಹಣೆ (11 ಲಕ್ಷ). ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಿತು.

ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಆಯುಕ್ತ ಡಿ.ಬಿ.ನಟೇಶ್, 3ನೇ ವಲಯ ಎಸಿ ಚಂದ್ರಮ್ಮ, ಗ್ರಾಪಂ ಮಾಜಿ ಸದಸ್ಯ ವಿಜಯನಗರ ಮಂಜು ಇನ್ನಿತರರಿದ್ದಾರೆ.

Translate »