ಮುಡಾದ 534 ಕೋಟಿ ಮೌಲ್ಯದ ಆಸ್ತಿ ಸಂರಕ್ಷಣೆ
ಮೈಸೂರು

ಮುಡಾದ 534 ಕೋಟಿ ಮೌಲ್ಯದ ಆಸ್ತಿ ಸಂರಕ್ಷಣೆ

January 5, 2022

ಮೈಸೂರು,ಜ.4-ಅತೀ ವೇಗವಾಗಿ ಬೆಳೆಯುತ್ತಿ ರುವ ಮೈಸೂರು ನಗರ ಮತ್ತು ಸುತ್ತಮುತ್ತಲ ಪ್ರದೇಶ ದಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿರುವುದರಿಂದ ಸರ್ಕಾರಿ ಆಸ್ತಿ ಕಬಳಿಸುವ ಹಾಗೂ ಒತ್ತುವರಿ ಮಾಡಿ ಸ್ವಾಧೀನಾನುಭವದಲ್ಲಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಯಲ್ಲೇ ಅತೀ ಹೆಚ್ಚು ನಿವೇಶನ, ಮನೆ, ಭೂಮಿ ಒತ್ತುವರಿ, ಅತಿಕ್ರಮ ಪ್ರಕರಣಗಳು ಕಂಡುಬರು ತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ, ಇಚ್ಚಾಸಕ್ತಿಯ ಕೊರತೆ, ಭೂಗಳ್ಳರೊಂದಿಗೆ ಶಾಮೀಲು ಅಕ್ರಮಕ್ಕೆ ಪ್ರಮುಖ ಕಾರಣ ಎಂಬುದನ್ನು ಹೇಳಬೇಕಿಲ್ಲ.

ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರ ಕಾಳಜಿ ಹಾಗೂ ಆಯುಕ್ತ ಡಾ.ಡಿ.ಬಿ.ನಟೇಶ್ ಅವರ ಇಚ್ಛಾಶಕ್ತಿಯಿಂದಾಗಿ ನಿರಂತರವಾಗಿ ನಡೆಸಿದ ಕಾರ್ಯಾ ಚರಣೆಯಿಂದಾಗಿ 2020ರ ಜೂನ್ 30ರಿಂದೀಚೆಗೆ 54 ಎಕರೆ 25 ಗುಂಟೆ ಭೂಮಿ ಹಾಗೂ 134 ನಿವೇ ಶನಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ, ಒಟ್ಟು 533.95 ಕೋಟಿ ರೂ. ಬೆಲೆಬಾಳುವ ಆಸ್ತಿ ಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆ ಪೈಕಿ 342.90 ಕೋಟಿ ರೂ. ಮೌಲ್ಯದ ಮುಡಾಗೆ ಸೇರಿದ ಭೂಮಿ ಮತ್ತು 191.05 ಕೋಟಿ ರೂ. ಬೆಲೆಬಾಳುವ ನಿವೇಶನಗಳು ಭೂ ಮಾಫಿಯಾ ದವರ ವಶದಿಂದ ಪ್ರಾಧಿಕಾರದ ವಶಕ್ಕೆ ಬಂದಂತಾ ಗಿದೆ. 20×30 ಅಳತೆಯ 40, 30×40 ಅಳತೆಯ 17, 50×80 ಅಳತೆಯ 14 ಹಾಗೂ ಇತರೆ 8 ಸೇರಿ ಒಟ್ಟು 134 ನಿವೇಶನಗಳನ್ನು ಒತ್ತುವರಿ ತೆರವು ಗೊಳಿಸಿ, ವಶಪಡಿಸಿಕೊಳ್ಳಲಾಗಿದೆ.

ದೇವನೂರು 2ನೇ ಹಂತದಲ್ಲಿ 10 ಕೋಟಿ ರೂ. ಮೌಲ್ಯದ 14 ನಿವೇಶನ, ಹಿನಕಲ್‍ನಲ್ಲಿ 40 ಕೋಟಿ ರೂ.ನ 26, ಬನ್ನಿಮಂಟಪ ‘ಬಿ’ ಲೇಔಟ್‍ನಲ್ಲಿ 2 ಕೋಟಿ ರೂ.ನ 2, ವಿದ್ಯಾರಣ್ಯಪುರಂನಲ್ಲಿ 8 ಕೋಟಿಯ 12, ದೇವನೂರು 1ನೇ ಹಂತದಲ್ಲಿ 6 ಕೋಟಿ ರೂ.ನ 4, ದಟ್ಟಗಳ್ಳಿಯಲ್ಲಿ 12 ಕೋಟಿ ರೂ.ನ 3, ವಿಜಯ ನಗರ 4ನೇ ಹಂತದ ಬಸವನಹಳ್ಳಿ ಸರ್ವೆ ನಂಬರ್ 118ರಲ್ಲಿ 100 ಕೋಟಿ ರೂ. ಮೌಲ್ಯದ 47 ನಿವೇಶನ ಗಳನ್ನು ಮುಡಾ ಅಧಿಕಾರಿಗಳು ತೆರವುಗೊಳಿಸಿ ಪ್ರಾಧಿಕಾರದ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ಅದೇ ರೀತಿ ಬೆಲವತ್ತ, ಗೋಕುಲಂ, ಕುವೆಂಪು ನಗರ ಪಡುವಣ ರಸ್ತೆ, ಟಿ.ಕೆ. ಬಡಾವಣೆ, ರಾಮಕೃಷ್ಣ ನಗರ ಜೆ’ ಬಡಾವಣೆಗಳಲ್ಲೂ ಕೆಲವರು ನಿವೇಶನ ಗಳನ್ನು ಅಕ್ರಮವಾಗಿ ತಮ್ಮದಾಗಿಸಿಕೊಳ್ಳಲು ಹುನ್ನಾರ ನಡೆಸಿ ಸಿಕ್ಕಿಬಿದ್ದಿದ್ದಾರೆ.

343 ಕೋಟಿ ರೂ. ಭೂಮಿ: ಮೈಸೂರು ನಗರದ ವಿವಿಧ ಬಡಾವಣೆಯಲ್ಲಿದ್ದ 343 ಕೋಟಿ ರೂ. ಬೆಲೆ ಬಾಳುವ ಒಟ್ಟು 54.25 ಎಕರೆ ಭೂಮಿಯನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದರು. 2021ರ ಜುಲೈ 13ರಿಂದೀಚೆಗೆ ಮುಡಾ ಅಧಿಕಾರಿಗಳು ಕಾರ್ಯಾ ಚರಣೆ ತೀವ್ರಗೊಳಿಸಿ, ಮುಡಾ ಆಸ್ತಿ ವಶಪಡಿಸಿ ಕೊಳ್ಳುತ್ತಿದ್ದಾರೆ. ಹಂಚ್ಯಾ ಗ್ರಾಮದ ವಿವಿಧ 7 ಸರ್ವೆ ನಂಬರ್‍ಗಳಲ್ಲಿ 13 ಎಕರೆ (33 ಕೋಟಿ ರೂ.), ಬಸವನಹಳ್ಳಿ ಸರ್ವೆ ನಂಬರ್ 123/1ರಲ್ಲಿ 6.14 ಎಕರೆ (170 ಕೋಟಿ ರೂ.), ದೇವನೂರು ಸರ್ವೆ ನಂಬರ್‍ಗಳಲ್ಲಿ 27 ಗುಂಟೆ (6 ಕೋಟಿ ರೂ.), ಹೆಬ್ಬಾಳ್‍ನ 6 ಸ. ನಂ.ಗಳಲ್ಲಿ 27 ಗುಂಟೆ (6 ಕೋಟಿ ರೂ.) ಲಲಿತಾದ್ರಿಪುರದ 7 ಸ. ನಂ.ಗಳಲ್ಲಿ 15.19 ಎಕರೆ (10 ಕೋಟಿ ರೂ.), ಸಾತಗಳ್ಳಿಯಲ್ಲಿ 3.27 ಎಕರೆ (15 ಕೋಟಿ ರೂ.), ಬೆಲವತ್ತದಲ್ಲಿ 8.08 ಎಕರೆ (6 ಕೋಟಿ ರೂ.), ಲಲಿತಾದ್ರಿಪುರದಲ್ಲಿ 2 ಎಕರೆ (8 ಕೋಟಿ ರೂ.), ಹಿನಕಲ್‍ನಲ್ಲಿ 8.33 ಎಕರೆ (88 ಕೋಟಿ ರೂ.) ಹಾಗೂ ದೇವನೂರಲ್ಲಿ 27 ಗುಂಟೆ (3 ಕೋಟಿ ರೂ.) ಸೇರಿದಂತೆ ಮೈಸೂ ರಿನ 9 ಕಡೆ ಒಟ್ಟು 54.25 ಎಕರೆ (343 ಕೋಟಿ ರೂ. ಮೌಲ್ಯ) ಭೂಮಿಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ.

ಇನ್ನೂ 150 ಮನೆಗಳಿವೆ: ಈ ಹಿಂದೆ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿ (ಅIಖಿಃ)ಯಿಂದ ನಿರ್ಮಿಸಿದ್ದ ಎಲ್‍ಐಜಿ, ಎಂಐಜಿ ಹುಡ್ಕೋ ಮನೆಗಳ ಪೈಕಿ ಖಾಲಿ ಇರುವ ಮನೆಗಳಿಗೆ ಅತಿ ಕ್ರಮ ಪ್ರವೇಶ ಮಾಡಿ ವರ್ಷಾನುಗಟ್ಟಲೆ ವಾಸ ವಾಗಿದ್ದ ಅನಧಿಕೃತ ವ್ಯಕ್ತಿಗಳನ್ನು ಇದೀಗ ತೆರವು ಗೊಳಿಸಲಾರಂಭಿಸಿರುವ ಮುಡಾ ಅಧಿಕಾರಿಗಳು, ಅದೇ ಮಾದರಿಯಲ್ಲೇ ಒತ್ತುವರಿಯಾಗಿರುವ ಇನ್ನೂ 150 ಮನೆಗಳಿವೆ ಎಂದು ಗುರ್ತಿಸಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ತಿಳಿಸಿದ್ದಾರೆ.

ವಶಕ್ಕೆ ಪಡೆದ ಮನೆ, ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡಿ ಮುಡಾಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿ ಆ ಹಣವನ್ನು ಪ್ರಾಧಿ ಕಾರ ಕೈಗೊಳ್ಳುವ ಅಭಿವೃದ್ಧಿ ಯೋಜನೆಗೆ ಬಳಸ ಲಾಗುವುದು ಎಂದ ಅವರು, ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಭೂ ಮಾಲೀಕರಿಗೆ ಬಾಕಿ ಉಳಿದಿದ್ದ ಪರಿಹಾರದ ಹಣವನ್ನು ಬಡ್ಡಿ ಸಮೇತ ನಿಯಮಾನುಸಾರ ಪಾವತಿ ಮಾಡುತ್ತಿದ್ದೇವೆ ಎಂದರು.

Translate »