ರಾಜ್ಯದ 224 ಕ್ಷೇತ್ರದಲ್ಲೇ `ಕೃಷ್ಣರಾಜ’ ಮಾದರಿ ಕ್ಷೇತ್ರ
ಮೈಸೂರು

ರಾಜ್ಯದ 224 ಕ್ಷೇತ್ರದಲ್ಲೇ `ಕೃಷ್ಣರಾಜ’ ಮಾದರಿ ಕ್ಷೇತ್ರ

January 5, 2022

ಮೈಸೂರು,ಜ.4(ಎಂಟಿವೈ)- ಶಾಸಕ ಎಸ್.ಎ. ರಾಮದಾಸ್ ಪ್ರತಿನಿಧಿಸುವ ಮೈಸೂರಿನ ಕೆ.ಆರ್. ವಿಧಾನಸಭಾ ಕ್ಷೇತ್ರ ರಾಜ್ಯದ 224 ಕ್ಷೇತ್ರಗಳಲ್ಲಿಯೇ ಮಾದರಿ ಕ್ಷೇತ್ರ ಎನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಗನ್‍ಹೌಸ್ ವೃತ್ತದ ಬಳಿಯ ಶಂಕರ ಮಠದ ಆವರಣದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಸೃಷ್ಟಿ ನೋಂದಣಿ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಸ್ವ-ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮೈಸೂರಲ್ಲಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಸೃಷ್ಟಿ ನೋಂದಣಿ ಮೇಳ ಮಹತ್ವದ ಪಾತ್ರ ವಹಿಸಲಿದೆ. ಶಾಸಕ ಎಸ್.ಎ.ರಾಮದಾಸ್ ತಮ್ಮ ಕ್ಷೇತ್ರದಲ್ಲಿ 5 ದಿನ ಈ ಮೇಳ ಆಯೋಜಿಸುವ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ. ಪಕ್ಷದ ಕಾರ್ಯಕಾರಿಣಿಯಲ್ಲಿ ವೈಯಕ್ತಿಕ ವಿಚಾರಗಳು ಪ್ರಸ್ತಾಪವಾಗುವುದೇ ಇಲ್ಲ. ಅಂತಹ ಸಂದರ್ಭದಲ್ಲಿ ಎಸ್.ಎ.ರಾಮದಾಸ್ ಅವರ ಕ್ರಿಯಾಶೀಲತೆಯನ್ನು ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಪ್ರಶಂಸಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆ ಗಳನ್ನು ಜನರಿಗೆ ತಲುಪಿಸುವಲ್ಲಿ ರಾಮದಾಸ್ ಶ್ರಮಿಸುತ್ತಿದ್ದಾರೆ. ಕೆ.ಆರ್.ಕ್ಷೇತ್ರದ ಮಹಿಳಾ ಸ್ವಸಹಾಯ ಸಂಘಗಳ ಪಟ್ಟಿಯನ್ನು ನೀಡಿದರೆ ಸಾಲ ಸೌಲಭ್ಯ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೋವಿಡ್-19 ಸಂದರ್ಭದಲ್ಲಿ ಶಾಸಕ ರಾಮ ದಾಸ್ ಅತ್ಯುತ್ತಮವಾಗಿ ಸೇವಾ ಕಾರ್ಯ ನಡೆಸಿ ದರು. ಸಮರೋಪಾದಿಯಲ್ಲಿ ಸೇವಾ ಕಾರ್ಯ ನಡೆಸಿ ಸಂತ್ರಸ್ತರಿಗೆ ನೆರವಾದರು. ಇಂತಹ ಬದ್ಧತೆ ಇರುವ ರಾಜಕಾರಣಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗ ಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸುವುದು ನಮ್ಮ ಗುರಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯ, ಕನಸು ಮತ್ತು ಗುರಿಯನ್ನು ಪೆÇ್ರೀತ್ಸಾಹಿಸುವ ಸದಾಶಯವೂ ನಮ್ಮ ಮುಂದೆ ಇದೆ. ಸ್ವಯಂ ಉದ್ಯೋಗ ಸೇರಿ ಎಲ್ಲದಕ್ಕೂ ಪೆÇ್ರೀತ್ಸಾಹ ನೀಡಲು ಯೋಜನೆ ರೂಪಿಸಲಾಗಿದೆ. 2030ಕ್ಕೆ ಭಾರತವನ್ನು ವಿಶ್ವಗುರು ಮಾಡುವುದು ಮೋದಿ ಅವರ ಕನಸನ್ನು ನನಸಾಗಿರುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುತ್ತಿದೆ. 135 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ 40 ಕೋಟಿಗಿಂತಲೂ ಹೆಚ್ಚು ಮಕ್ಕಳಿದ್ದಾರೆ. ಅವರ ಭವಿಷ್ಯ ಉತ್ತಮವಾಗಿ ರೂಪಿಸಬೇಕಾದ ಜವಾಬ್ದಾರಿ ಇದೆ. 8ನೇ ತರಗತಿ ಓದಿದವರು, ಶಾಲೆ ಬಿಟ್ಟವರಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸುತ್ತೇವೆ ಎಂದರು.

ಮೇಳದಲ್ಲಿ ಹೆಸರು ನೋಂದಾಯಿಸಿಕೊಂಡ ಅರ್ಹ ಅಭ್ಯರ್ಥಿಗಳಿಗೆ ಊಟ, ವಸತಿಯೊಂದಿಗೆ 6 ತಿಂಗಳು ತರಬೇತಿ ನೀಡುವ ಆಲೋಚನೆ ಇದೆ. ಅಲ್ಲದೆ, ತರ ಬೇತಿ ವೇಳೆ 1500 ಶಿಷ್ಯ ವೇತನ ನೀಡುತ್ತೇವೆ. ಈಗಾ ಗಲೇ ಅರ್ಹರಿಗೆ ತರಬೇತಿ ನೀಡಲು ನಿವೃತ್ತ ಐಟಿಐ ಉಪನ್ಯಾಸಕರು ಮುಂದೆ ಬಂದಿದ್ದಾರೆ. ರಾತ್ರಿ ಕಾಲೇಜು ಆರಂಭಿಸುವ ಆಲೋಚನೆ ಇದೆ. ಸ್ವ ಉದ್ಯೋಗ ಕೈಗೊಳ್ಳು ವವರಿಗೆ ಸಾಲ ಸೌಲಭ್ಯ ಕಲ್ಪಿಸುತ್ತೇವೆ ಎಂದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, 18ರಿಂದ 40 ವರ್ಷದೊಳಗಿನವರಿಗೆ ಉದ್ಯೋಗ ಕಲ್ಪಿಸುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ. ಸರ್ಕಾರ ಮಾತ್ರವಲ್ಲದೇ ಸಂಘ ಸಂಸ್ಥೆಗಳು ಉದ್ಯೋಗ ಸೃಷ್ಟಿಸುವ ಜವಾಬ್ದಾರಿ ಇದೆ. ಕೌಶಲ ತರಬೇತಿ ನೀಡಿ ಉದ್ಯೋಗ ಮೇಳ ಏರ್ಪಡಿಸಿರುವುದು ಶ್ಲಾಘ ನೀಯ ಕಾರ್ಯ ಎಂದು ತಿಳಿಸಿದರು.

ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಕೌಶಲ ತರಬೇತಿ ಇಲ್ಲದ ಕಾರಣಕ್ಕೆ ಉದ್ಯೋಗ ಪಡೆ ಯಲಿಕ್ಕೆ ಕಷ್ಟವಾಗುತ್ತಿದೆ. ವಿದ್ಯಾರ್ಥಿದೆಸೆಯಲ್ಲಿಯೇ ಕೌಶಲ ತರಬೇತಿ ನೀಡಿ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಈ ಕಾರ್ಯಕ್ರಮ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂ ರಿನಿಂದಲೇ ವರ್ಚುವಲ್ ಮೂಲಕ ಸಮಾರಂಭ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ಇದೇ ವೇಳೆ ತಿಬ್ಬಾದೇವಿ ಸ್ತ್ರೀ ಶಕ್ತಿ ಮಹಿಳಾ ಸಂಘಕ್ಕೆ 9 ಲಕ್ಷ ರೂ. ಮತ್ತು ಜ್ವಾಲಾಮುಖಿ ಸ್ತ್ರೀ ಶಕ್ತಿ ಮಹಿಳಾ ಸಂಘಕ್ಕೆ 13 ಲಕ್ಷ ರೂ.ಗಳ ಸಾಲದ ಚೆಕ್ ಅನ್ನು ಹಸ್ತಾಂ ತರಿಸಲಾಯಿತು. ಪ್ರಧಾನ ಮಂತ್ರಿ ಮಾತೃ ವಂದನಾ ಫಲಾನುಭವಿ ನಿವೇದಿತಾ ಅವರಿಗೆ 5 ಸಾವಿರ ಚೆಕ್ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೇಯರ್ ಸುನಂದಾ ಪಾಲನೇತ್ರ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀ ಕಾಂತ್‍ರೆಡ್ಡಿ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಶಿವಕುಮಾರ್, ಚಂಪಕಾ, ಶಾರದಮ್ಮ ಈಶ್ವರ್, ಕೆ.ಆರ್.ಕ್ಷೇತ್ರದ ಅಧ್ಯಕ್ಷ ವಡಿವೇಲು, ನೂರ್ ಫಾತಿಮಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Translate »