ಸಿಎಂ ಪರಿಹಾರ ನಿಧಿಗೆ ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳಿಂದ 2.50 ಲಕ್ಷ ರೂ.ಗಳ ದೇಣಿಗೆ
ಮೈಸೂರು

ಸಿಎಂ ಪರಿಹಾರ ನಿಧಿಗೆ ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳಿಂದ 2.50 ಲಕ್ಷ ರೂ.ಗಳ ದೇಣಿಗೆ

July 14, 2020

ಮೈಸೂರು, ಜು. 13- ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹ ನಿರ್ಮಾಣ ಸಹಕಾರ ಸಂಘದಿಂದ 2.50 ಲಕ್ಷ ರೂ.ಗಳ ದೇಣಿಗೆ ನೀಡಲಾಯಿತು.

ಕೋವಿಡ್-19 ಸೋಂಕು ದೇಶ ಹಾಗೂ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋ ಪಾದಿಯಲ್ಲಿ ಈ ರೋಗವನ್ನು ನಿಯಂತ್ರಿ ಸಲು ಎಲ್ಲಾ ರೀತಿಯ ತುರ್ತು ಕಾರ್ಯ ಗಳನ್ನು ಕೈಗೊಳ್ಳುತ್ತಿವೆ. ರಾಜ್ಯದ ಜನರ ಆರೋಗ್ಯ ರಕ್ಷಣೆ ಹಾಗೂ ಇತರ ಎಲ್ಲ ಕಾರ್ಯಗಳಿಗೆ ಅನುಕೂಲವಾಗಲೆಂದು ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹನಿರ್ಮಾಣ ಸಹಕಾರ ಸಂಘದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2.50 ಲಕ್ಷ ರೂ.ಗಳ (ಎರಡು ಲಕ್ಷದ ಐವತ್ತು ಸಾವಿರ ರೂ.ಗಳು) ಚೆಕ್ಕನ್ನು ಮೈಸೂರು ಶ್ರೀ ಸುತ್ತೂರು ಶಾಖಾಮಠ ದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಸಂಘದ ಉಪಾ ಧ್ಯಕ್ಷ ಎ.ಎಸ್.ಚನ್ನಬಸಪ್ಪ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಹೆಚ್.ವಿ. ರಾಜೀವ್, ಮೈಮುಲ್ ನಿರ್ದೇಶಕ ಎಸ್.ಸಿ. ಅಶೋಕ್, ಸಂಘದ ನಿರ್ದೇಶಕರಾದ ಡಾ. ಎಂ.ನಂಜುಂಡಪ್ಪ, ವಿ.ಮಲ್ಲಿ ಕಾರ್ಜುನ ಸ್ವಾಮಿ, ಎಂ.ಎಂ.ಸ್ವಾಮಿ, ಕೆ.ಬಿ. ಸೋಮಶೇಖರಮೂರ್ತಿ, ಕಾರ್ಯ ದರ್ಶಿ ಸಿ.ರಾಜಶೇಖರಮೂರ್ತಿ ಸೇರಿ ದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »