ಹಲವರಿಂದ ಮೃಗಾಲಯದ ಪ್ರಾಣಿ, ಪಕ್ಷಿ ದತ್ತು ಸ್ವೀಕಾರ
ಮೈಸೂರು

ಹಲವರಿಂದ ಮೃಗಾಲಯದ ಪ್ರಾಣಿ, ಪಕ್ಷಿ ದತ್ತು ಸ್ವೀಕಾರ

July 14, 2020

ಮೈಸೂರು, ಜು.13- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಅನೇಕ ಗಣ್ಯರು, ಸಾರ್ವ ಜನಿಕರು ಪ್ರಾಣಿ, ಪಕ್ಷಿಗಳಿಗೆ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ ವರ್ಷದ ಅವಧಿಗೆ ದತ್ತು ಸ್ವೀಕಾರ ಮಾಡಿರುವ ಬಗ್ಗೆ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾ ಹಕ ನಿರ್ದೇಶಕರು ತಿಳಿಸಿದ್ದಾರೆ.

ಬೆಂಗಳೂರಿನ ಡಾ.ನರೇಂದ್ರ ವಿ. ಎಂಬುವವರು 35 ಸಾವಿರ ರೂ. ಪಾವತಿಸಿ ಕಪ್ಪು ಚಿರತೆÀ, ಡಾ. ಮಾರ್ಜೋರಿ 20 ಸಾವಿರ ರೂ. ಪಾವತಿಸಿ ಇಂಡಿಯನ್ ಗೇ ವುಲ್ಫ್, ವಿಶ್ವನಾಥ್ ಎಸ್. 5 ಸಾವಿರ ರೂ. ಪಾವತಿಸಿ ಲೆಪರ್ಡ್ ಕ್ಯಾಟ್, ಮೈಸೂ ರಿನ ವನಜಾಕ್ಷಿ ಪಿ. 10 ಸಾವಿರ ರೂ. ಪಾವತಿಸಿ ಕಾಮನ್ ಆಸ್ಟ್ರಿಚ್, ಲಾವಣ್ಯ ಮೋಹನ್ 1 ಸಾವಿರ ರೂ. ಪಾವತಿಸಿ ಬುಡ್ಜರಿಗಾರ್, ಸೌಮ್ಯ ಎಸ್. 6,500 ರೂ. ಪಾವತಿಸಿ ಕಾಕ ಟೈಲ್, ರಿವರ್‍ಟೆರ್ರಾಪಿನ್ ಮತ್ತು ಮಾನಿಟರ್ ಹಲ್ಲಿ, ಕ್ಷಿತಿಜ್ ಮತ್ತು ಕ್ಷಮಯ 7 ಸಾವಿರ ರೂ. ಪಾವತಿಸಿ ನೈಲು ಮತ್ತು ಕಾಳಿಂಗ ಸರ್ಪ, ಎನ್.ಸುರೇಶ್ 5 ಸಾವಿರ ರೂ. ಪಾವತಿಸಿ 4 ಕೊಂಬಿನ ಜಿಂಕೆ, ದಾವಣಗೆರೆಯ ಉಮಾಶಂಕರ್ ಎಂ. 5 ಸಾವಿರ ರೂ. ಗ್ರೇಟ್ ಇಂಡಿಯನ್ ಹಾನ್ರ್ಬಲ್ ಅನ್ನು ದತ್ತು ಪಡೆದಿದ್ದಾರೆಂದು ಚಾಮರಾಜೆಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »