ಮೈಸೂರು: ಮೈಸೂರಿನ ಮಾಗಿ ಉತ್ಸವದ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಸಹಯೋಗದಲ್ಲಿ ಡಿಸೆಂಬರ್ 28 ಮತ್ತು 29 ರಂದು ಎರಡು ದಿನಗಳ ಪಕ್ಷಿ ಹಬ್ಬ ಆಯೋಜಿಸಲಾಗಿದೆ. ಪಕ್ಷಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಮೈಸೂರು ಜಿಲ್ಲಾಧಿ ಕಾರಿಗಳಾದ ಅಭಿರಾಮ್ ಜಿ.ಶಂಕರ್ ಅವರು, ಪಕ್ಷಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಬ್ಬದಲ್ಲಿ ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ಗಿರಿಬೆಟ್ಟದ ಕೆರೆ, ವರಕೋಡು ಕೆರೆ, ಲಿಂಗಾಂಬುದಿ ಕೆರೆ, ಹೆಬ್ಬಾಳ್ ಕೆರೆ ಸೇರಿದಂತೆ ವಿವಿಧ ಸ್ಥಳದಲ್ಲಿ ಪಕ್ಷಿಗಳ ವೀಕ್ಷಣೆ ಹಾಗೂ ಮೈಸೂರು ಮೃಗಾಲಯದ ಸಭಾಂಗಣ ದಲ್ಲಿ ತಾಂತ್ರಿಕ ಗೋಷ್ಠಿಗಳು ಇರುತ್ತವೆ.
ಡಿಸೆಂಬರ್ 28 ರಂದು ಬೆಳಗ್ಗೆ 11.00 ಗಂಟೆಗೆ ಮೃಗಾಲಯದ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭವಿರುತ್ತದೆ. ಇದೇ ಸಭಾಂಗಣದಲ್ಲಿ ಮಧ್ಯಾಹ್ನ 12.00 ರಿಂದ 1.30 ರವರೆಗೆ ತಾಂತ್ರಿಕ ಅಧಿವೇ ಶನ ಇರುತ್ತದೆ. ಕುಮಾರಿ ಅಭಿಶೇಕ ರಾಜ್ ಗೋಪಾಲ್ ಅವರು ‘ಜನರಲ್ಲಿ ಪಕ್ಷಿಗಳ ಪ್ರೀತಿ ತರುವ’ ವಿಷಯದ ಬಗ್ಗೆ ಮಾತ ನಾಡುವರು. ಪಕ್ಷಿಗಳ ವೀಕ್ಷಣೆ ಹವ್ಯಾಸದ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಾತನಾಡುವರು. ಮಧ್ಯಾಹ್ನ 2.30ರಿಂದ 3 ಗಂಟೆ ವರೆಗೆ ಕ್ಷೇತ್ರ ಕಾರ್ಯಚಟುವಟಿಕೆ ಹಾಗೂ ಪಕ್ಷಿಗಳ ವೀಕ್ಷಣೆಗೆ ಹೊರಡಲು ಸಿದ್ಧತೆಯ ಬಗ್ಗೆ ಮೈಸೂರು ನೇಜರ್ನ ಸದಸ್ಯರು ವಿವರಿಸುವರು. ಮಧ್ಯಾಹ್ನ 3.30 ರಿಂದ ಸಂಜೆ 6 ಗಂಟೆಗೆ ವರೆಗೆ 6 ತಂಡಗಳಲ್ಲಿ ವಿವಿಧ ಸ್ಥಳಗಳಲ್ಲಿ ಪಕ್ಷಿಗಳ ವೀಕ್ಷಣೆ ಇರುತ್ತದೆ. ಪ್ರತಿ ತಂಡದಲ್ಲಿ ಗರಿಷ್ಠ 20 ಸದಸ್ಯರಿಗೆ ಮಾತ್ರ ಅವಕಾಶವಿರುತ್ತದೆ.
ಡಿಸೆಂಬರ್ 29ರಂದು ಬೆಳಗ್ಗೆ 6.30 ರಿಂದ 9.30ವರೆಗೆ ಪಕ್ಷಿ ವೀಕ್ಷಣೆಯು ಹಿಂದಿನ ದಿನದ ಸ್ಥಳಗಳಲ್ಲೇ ಇರುತ್ತದೆ. ಬೆಳಗ್ಗೆ 10.30ರಿಂದ 1.15 ರವರೆಗೆ ತಾಂತ್ರಿಕ ಅಧಿವೇಶನ. ಸುಹೇಲ್ ಖ್ವಾಡರ್ ಅವರು ನಾಗರಿಕರ ವಿಜ್ಞಾನದ ಮೂಲಕ ಪಕ್ಷಿಗಳ ಬಗ್ಗೆ ಅರಿಯುವಿಕೆ ಬಗ್ಗೆ ಮಾತನಾಡು ವರು. ಬಿ.ಆರ್. ಶೇಷಗಿರಿ ಅವರು ಮೈಸೂರು ಪ್ರಾಂತ್ಯದಲ್ಲಿ ವಲಸೆ ಹಕ್ಕಿಗಳ ಪ್ರಬೇಧಗಳ ಬಗ್ಗೆ ತಿಳಿಸುವರು. ಎ. ಶಿವ ಪ್ರಕಾಶ್ ಅವರು ಮೈಸೂರು ಬಡ್ರ್ಸ್ ಅಟ್ಲಾಸ್ ಪರಿಚಯಿಸುವರು. ಮಧ್ಯಾಹ್ನ 2.30ರಿಂದ 4 ಗಂಟೆವರೆಗೆ ಕ್ಷೇತ್ರ ಅನು ಭವದ ಸಂಯೋಜನೆ ಹಾಗೂ ಅನುಭವ ವಿನಿಮಯ ಕಾರ್ಯಕ್ರಮ. ಶ್ರೀಮತಿ ತನುಜಾ ಅವರು ಈ ಕಾರ್ಯಕ್ರಮ ನಡೆಸಿಕೊಡುವರು.
ಡಿಸೆಂಬರ್ 26 ನೋಂದಣಿಗೆ ಕೊನೆ ದಿನ: ಪಕ್ಷಿ ಹಬ್ಬದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾ ಗುತ್ತದೆ. ನೋಂದಣಿ ಶುಲ್ಕ 200 ರೂ.ಗಳು ಮಾತ್ರ. ಊಟೋಪಚಾರ ಹಾಗೂ ಕ್ಷೇತ್ರ ಗಳಿಗೆ ಪ್ರಯಾಣದ ವ್ಯವಸ್ಥೆಯನ್ನು ಸಂಘ ಟಕರ ವತಿಯಿಂದ ಮಾಡಲಾಗುವುದು. ವಾಸ್ತವ್ಯವನ್ನು ಶಿಬಿರಾರ್ಥಿಗಳೇ ಸ್ವತಃ ವ್ಯವಸ್ಥೆ ಮಾಡಿಕೊಳ್ಳಬೇಕು. ನೋಂದಣಿಯನ್ನು ಆನ್‍ಲೈನ್ ಮೂಲಕ ಮಾಡಬೇಕಾಗಿದ್ದು, hಣಣಠಿ://mಜಛಿ.ಠಿsmeಜiಚಿ.iಟಿ/ ವೆಬ್ ವಿಳಾಸದಲ್ಲಿ ನೋಂದಣಿ ಮಾಡಿಕೊಳ್ಳಬಹುದು.