ಭೂ ಕಬಳಿಕೆಗೆ ಸಿಎಂ ಕುಮಾರಸ್ವಾಮಿಯಿಂದ ತಡೆ
ಮೈಸೂರು

ಭೂ ಕಬಳಿಕೆಗೆ ಸಿಎಂ ಕುಮಾರಸ್ವಾಮಿಯಿಂದ ತಡೆ

December 24, 2018

ಮೈಸೂರು: ಜೆಡಿಎಸ್ -ಬಿಜೆಪಿ ಸಮಿಶ್ರ ಸರ್ಕಾರದ ಅವಧಿಯಲ್ಲಿ ಡಾ.ಎ.ಟಿ.ರಾಮಸ್ವಾಮಿ ಅಧ್ಯಕ್ಷತೆಯ ಜಂಟಿ ಸದನ ಸಮಿತಿ ನೀಡಿದ್ದ ಅಕ್ರಮ ಭೂ ಒತ್ತು ವರಿ ವರದಿಯ ಸಾಕಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತೆ ಸ್ವಂತದ್ದೆಂದು ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದು, ಇದಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಡೆ ಹಾಕಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.

ಮೈಸೂರಿನ ಬಂದಂತಮ್ಮ ಕಾಳಮ್ಮ ಸಮುದಾಯ ಭವನದಲ್ಲಿ ಎ.ಟಿ.ರಾಮ ಸ್ವಾಮಿಯವರ ಅಭಿಮಾನಿಗಳ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅರಕಲಗೂಡು ಕ್ಷೇತ್ರದ ಶಾಸಕ ಡಾ.ಎ.ಟಿ.ರಾಮಸ್ವಾಮಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆ ಯಲ್ಲಿ ರಚಿಸಿದ್ದ ಜಂಟಿ ಸದನ ಸಮಿತಿ ಅಕ್ರಮ ಭೂ ಒತ್ತುವರಿಗೆ ಸಂಬಂಧಿಸಿದಂತೆ ವರದಿ ನೀಡಿತ್ತು. ಈ ಹಿಂದಿನ ಸರ್ಕಾರಗಳ ಅವಧಿಯ ವರದಿಯಲ್ಲಿ ಉಲ್ಲೇಖಿಸಿದ್ದ ಸಾಕಷ್ಟು ಒತ್ತು ವರಿ ಪ್ರಕರಣಗಳಿಗೆ ಮತ್ತೆ ಸ್ವಂತದ್ದೆಂದು ದಾಖಲೆಗಳನ್ನು ಸೃಷ್ಟಿ ಮಾಡಿಕೊಳ್ಳಲಾಗಿದೆ. ಇದನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪರಿಶೀಲಿಸಿದ್ದು, ನಕಲಿ ದಾಖಲೆ ಗಳಿಗೆ ತಡೆ ಹಾಕಿದ್ದಾರೆ ಎಂದು ಹೇಳಿದರು.

ಎ.ಟಿ.ರಾಮಸ್ವಾಮಿ ಪ್ರಾಮಾಣಿಕ ರಾಜಕಾರಣಿ. ಪ್ರಸ್ತುತ ಸಮಾಜದಲ್ಲಿ ಅಪ್ರಾಮಾ ಣಿಕತೆ ಮೇಲುಗೈ ಸಾಧಿಸುತ್ತಿದ್ದು, ಇಂತಹ ಕಠಿಣ ಸನ್ನಿವೇಶದಲ್ಲಿ ರಾಮಸ್ವಾಮಿಯವ ರಂತಹ ಸಜ್ಜನ ರಾಜಕಾರಣಿಗಳ ಸೇವೆ ಸಮಾಜಕ್ಕೆ ಸಲ್ಲಬೇಕು. ರಾಮಸ್ವಾಮಿ ಅವರ ಮೈಸೂರಿನ ಅಭಿಮಾನಿಗಳು ಇಂದು ಅವ ರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದಾರೆ. ಸಾಮಾನ್ಯವಾಗಿ ರಾಮಸ್ವಾಮಿಯವರು ಸನ್ಮಾನಕ್ಕೆ ಒಪ್ಪಿಕೊಳ್ಳುವವರಲ್ಲ. ಅವರು ಇಂದು ತಮ್ಮ ಭಾಷಣದಲ್ಲಿ ವಾಸ್ತವಾಂಶ ಬಿಚ್ಚಿಟ್ಟಿದ್ದಾರೆ ಎಂದರು.

ಸಿಎಂ ಕುಮಾರಸ್ವಾಮಿಯವರ ರೈತರ ಸಾಲ ಮನ್ನಾ ಯೋಜನೆ ಗುಜರಾತ್ ಸರ್ಕಾರದ ಗಮನ ಸೆಳೆದಿದೆ. ಅಲ್ಲಿನ ಹಣಕಾಸು ಇಲಾಖೆ ರೈತರ ಸಾಲ ಮನ್ನಾ ಸಂಬಂಧ ಕರ್ನಾಟಕ ಮಾದರಿಯ ಅಧ್ಯಯನ ನಡೆಸುತ್ತಿದೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಎ.ಟಿ.ರಾಮಸ್ವಾಮಿ ಮಾತನಾಡಿ, ಇಂದಿನ ಸನ್ಮಾನ ನನ್ನ ಜವಾ ಬ್ದಾರಿ ಹೆಚ್ಚಿಸಿದೆ ಎಂದೇ ಭಾವಿಸಿದ್ದೇನೆ. ಬಂದ ದಾರಿಯನ್ನು ನಾನೆಂದೂ ಮರೆಯೋ ದಿಲ್ಲ. ನಾನು ಬಡಕುಟುಂಬದಲ್ಲಿ ಹುಟ್ಟಿದ ವನು. ಒಂದೇ ತೊಟ್ಟಿ ಮನೆಯಲ್ಲಿ ನಾಲ್ಕು ಕುಟುಂಬಗಳು ವಾಸವಾಗಿದ್ದವರಲ್ಲಿ ನಮ್ಮದು ಒಂದು. ಕಷ್ಟ-ಸುಖಗಳಿಗೆ ಪರಸ್ಪರ ಸ್ಪಂದಿ ಸುವ ವಾತಾವರಣ ಅಲ್ಲಿತ್ತು. ಇಂತಹ ಸುಮಧುರ ಬಾಂಧವ್ಯದ ಬದುಕು ಕಂಡ ವನು ನಾನು. ಆದರೆ ಇಂದು ಸಮಾಜ ದಲ್ಲಿ ಅಂತಹ ವಾತಾವರಣ ಕಣ್ಮರೆಯಾಗು ತ್ತಿದ್ದು, ಹಣದ ವ್ಯಾಮೋಹ ಹೆಚ್ಚಿ ಸಂಬಂಧ ಗಳಿಗೆ ಬೆಲೆ ಇಲ್ಲವಾಗಿದೆ. ಜನ್ಮ ಕೊಟ್ಟ ವರು ಸ್ವರ್ಗಕ್ಕಿಂತಲೂ ಹೆಚ್ಚು. ಇದನ್ನು ಇಂದಿನ ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ನನಗೆ ಆಸೆ ಎಂಬುದೇ ಇಲ್ಲ. ರಾಜಕೀಯ ಪ್ರವೇಶ ಮಾಡಿದ ಸಂದರ್ಭದಲ್ಲಿ ನಾನು ನಡೆಸುತ್ತಿದ್ದ ಗೊಬ್ಬರದ ಅಂಗಡಿಯನ್ನೇ ಮುಚ್ಚಿದೆ. ಸಾರ್ವಜನಿಕ ಜೀವನದಲ್ಲಿ ಇದ್ದುಕೊಂಡು ವಾಣಿಜ್ಯ ವಹಿವಾಟು ಹೊಂದಿರಬಾರ ದೆಂಬ ಭಾವನೆ ಇದಕ್ಕೆ ಕಾರಣ. ಜನ ಸೇವೆ ಮಾಡಬೇಕೆಂಬ ಬಯಕೆಯಿಂದ ನಾನು ರಾಜಕಾರಣಕ್ಕೆ ಬಂದಿದ್ದು, ಸತ್ಯ ನಮ್ಮ ಎದುರೇ ಸಮಾಧಿಯಾಗುವುದನ್ನು ನೋಡಿದಾಗ ಅತೀವ ದುಃಖವಾಗುತ್ತದೆ ಎಂದು ವಿಷಾದಿಸಿದರು.

ಸನ್ಮಾನ ಸಮಾರಂಭಕ್ಕೂ ಮುನ್ನ ಬಂದಂ ತಮ್ಮ ಕಾಳಮ್ಮ ದೇವಾಲಯದಲ್ಲಿ ಹೆಚ್.ಡಿ. ದೇವೇಗೌಡರು ಪೂಜೆ ಸಲ್ಲಿಸಿದರು. ಪ್ರವಾ ಸೋದ್ಯಮ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಅರಕಲ ಗೂಡು ಕೃಷಿಕ ಸಮಾಜದ ಆಧ್ಯಕ್ಷ ಎಂ.ಸಿ. ರಂಗಸ್ವಾಮಿ, ಜೆಡಿಎಸ್ ಮೈಸೂರು ನಗರಾ ಧ್ಯಕ್ಷ ಕೆ.ಟಿ.ಚೆಲುವೇಗೌಡ, ನಗರಪಾಲಿಕೆ ಮಾಜಿ ಸದಸ್ಯೆ ಹೊನ್ನಮ್ಮ, ಹಾಸನ ಜಿಲ್ಲಾ ಬಳಗದ ಅಧ್ಯಕ್ಷೆ ಶಾರದಮ್ಮ, ಜೆಡಿಎಸ್ ರಾಜ್ಯ ಯುವ ಮಹಿಳಾ ರೈತದಳದ ಅಧ್ಯಕ್ಷೆ ಚೈತ್ರಗೌಡ ಮತ್ತಿತರರು ಹಾಜರಿದ್ದರು.

Translate »