ಇನ್ವಿಟೇಷನ್ ಕಪ್ ಹಾಕಿ: ಕೊಡಗು ಚಾಂಪಿಯನ್
ಮೈಸೂರು

ಇನ್ವಿಟೇಷನ್ ಕಪ್ ಹಾಕಿ: ಕೊಡಗು ಚಾಂಪಿಯನ್

December 24, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಹಾಕಿ ಮೈದಾನದಲ್ಲಿ ಗುರುವಾರ ಆರಂಭಗೊಂಡು 4 ದಿನಗಳ ಕಾಲ ನಡೆದ ರಾಜ್ಯಮಟ್ಟದ ಇನ್ವಿಟೇಷನ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಕೂರ್ಗ್ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಹಾಕಿ ಮೈಸೂರು ಸಂಸ್ಥೆ ಆಯೋಜಿಸಿದ್ದ ಹಾಕಿ ಪಂದ್ಯಾವಳಿಯ ಫೈನಲ್‍ನಲ್ಲಿ ಮೈಸೂರು ತಂಡದ ವಿರುದ್ಧ ಕೂರ್ಗ್ ತಂಡ(1-0) ಗೋಲಿನಿಂದ ಗೆಲುವು ಸಾಧಿಸಿ, ಪ್ರಥಮ ಸ್ಥಾನ ಪಡೆಯಿತು. ಮೈಸೂರು ತಂಡ ರನ್ನರ್ ಅಪ್‍ಗೆ ತೃಪ್ತಿಪಟ್ಟುಕೊಂಡಿತು.

ಎರಡೂ ತಂಡಗಳು ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದವು. ಆದರೆ, ಕೂರ್ಗ್ ತಂಡದ ಆಟಗಾರ ಮಣಿರವರು 39ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಗೋಲು ಗಳಿಸಲು ನಡೆಸಿದ ಮೈಸೂರು ತಂಡದ ಪ್ರಯತ್ನವನ್ನು ಕೂರ್ಗ್ ತಂಡದ ಆಟಗಾರರು ವ್ಯರ್ಥಗೊಳಿಸಿ, ಗೆಲುವು ಸಾಧಿಸಿ ದರು. ಉಳಿದಂತೆ, ಹಾಸನ ತಂಡವು ಶಿವಮೊಗ್ಗ ತಂಡವನ್ನು 4-2 ಗೋಲು ಗಳಿಂದ ಮಣಿಸಿ ತೃತೀಯ ಸ್ಥಾನ ಪಡೆದರೆ, ಶಿವಮೊಗ್ಗ ತಂಡ 4ನೇ ಸ್ಥಾನಕ್ಕೆ ತೃಪ್ತಿಪಡ ಬೇಕಾಯಿತು. ಹಾಸನ ತಂಡದ ರಮೇಶ್ (5ನೇ, 53ನೇ ನಿ.), ತಾರಾನಾಥ್ (45ನೇ ನಿ.), ದೀಕ್ಷಿತ್ (52ನೇ ನಿ.) ಗೋಲು ಗಳಿಸಿದರೆ, ಶಿವಮೊಗ್ಗ ತಂಡದ ಸೈಯದ್ ಮಜರ್ (19ನೇ, 37ನೇ ನಿಮಿಷ) ಗೋಲು ಗಳಿಸಿದರು.

ಭಾನುವಾರ ಸಂಜೆ ನಡೆದ ಬಹು ಮಾನ ವಿತರಣಾ ಸಮಾರಂಭದಲ್ಲಿ ರಾಜ ಮಾತೆ ಪ್ರಮೋದಾದೇವಿ ಒಡೆಯರ್ ಅವರು ವಿಜೇತ ಕೊಡಗು ತಂಡಕ್ಕೆ 1 ಲಕ್ಷ ರೂ. ನಗದು, ಟ್ರೋಫಿ ಹಾಗೂ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಮೈಸೂರು ತಂಡಕ್ಕೆ 50 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ಪ್ರದಾನ ಮಾಡಿದರು. ತೃತೀಯ ಸ್ಥಾನ ಪಡೆದ ಹಾಸನ ತಂಡಕ್ಕೆ 30 ಸಾವಿರ ರೂ. ಹಾಗೂ 4ನೇ ಸ್ಥಾನ ಪಡೆದ ಶಿವಮೊಗ್ಗ ತಂಡಕ್ಕೆ 20 ಸಾವಿರ ರೂ. ನಗದು ಬಹುಮಾನ ದೊರೆಯಿತು.

ಕೊಡಗು ತಂಡದ ಪೊನ್ನಣ್ಣ ಪಂದ್ಯಾ ವಳಿಯ ಅತ್ಯುತ್ತಮ ಆಟಗಾರರಾಗಿ ಹೊರಮ್ಮಿದರು. ಈ ವೇಳೆ ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕೃಷ್ಣಯ್ಯ, ಹಾಕಿ ಮೈಸೂರು ಅಧ್ಯಕ್ಷ ಕೆ.ಬಿ.ದಿಲೀಪ್, ಉಪಾಧ್ಯಕ್ಷ ಕೆ.ಎನ್. ಮುದ್ದಯ್ಯ, ಕಾರ್ಯದರ್ಶಿ ಸಿ.ಟಿ.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Translate »