ಮೈಸೂರಲ್ಲಿ ಅರ್ಧ ಗಂಟೆ ಅಂತರದಲ್ಲಿ 2 ಕಡೆ ಮಹಿಳೆಯರ ಚಿನ್ನದ ಸರ ಅಪಹರಣ
ಮೈಸೂರು

ಮೈಸೂರಲ್ಲಿ ಅರ್ಧ ಗಂಟೆ ಅಂತರದಲ್ಲಿ 2 ಕಡೆ ಮಹಿಳೆಯರ ಚಿನ್ನದ ಸರ ಅಪಹರಣ

March 11, 2020

ಮೈಸೂರು, ಮಾ. 10 (ಆರ್‍ಕೆ)- ಮೈಸೂರಲ್ಲಿ ಒಂದೇ ದಿನ ಅರ್ಧ ಗಂಟೆ ಅಂತರದಲ್ಲಿ ಎರಡು ಕಡೆ ಮಹಿಳೆಯರ ಚಿನ್ನದ ಸರ ಕಿತ್ತು ಬೈಕ್ ಸವಾರರು ಪರಾರಿಯಾಗಿರುವ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

ಮೈಸೂರಿನ ವಿಜಯನಗರ 4ನೇ ಹಂತದ ನಿವಾಸಿ ವನಜಾಕ್ಷಿ(45) ಹಾಗೂ ಕುವೆಂಪು ನಗರ ನಿವಾಸಿ ಸುಮಾ(60) ಎಂಬುವರೇ ಚಿನ್ನದ ಸರ ಕಳೆದುಕೊಂಡ ವರು. ಮೊದಲನೇ ಘಟನೆಯು ಸಂಜೆ 6.45 ಗಂಟೆಗೆ ವರದಿಯಾಗಿದ್ದು, ವನಜಾಕ್ಷಿ ಅವರು ವಿಜಯನಗರ 3ನೇ ಹಂತದಲ್ಲಿರುವ ಐಶ್ವರ್ಯ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಸ್ಕೂಟರ್‍ನಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದಾಗ, ಹಿಂದಿನಿಂದ ಬೈಕ್‍ನಲ್ಲಿ ಬಂದ ಅಪರಿಚಿತ ಯುವಕರಿ ಬ್ಬರು ವಿಜಯನಗರ 4ನೇ ಹಂತದ ನಿರ್ಜನ ಪ್ರದೇಶದ ತಿರುವಿನಲ್ಲಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 1,30,000 ರೂ. ಮೌಲ್ಯದ 40 ಗ್ರಾಂ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಾಲಕೃಷ್ಣ ಹಾಗೂ ಸಿಬ್ಬಂದಿ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡರು.

ಎರಡನೇ ಪ್ರಕರಣ: ಕುವೆಂಪುನಗರದ ಸುಮಾ ಅವರು ಅಂಗಡಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ನಡೆದುಕೊಂಡು ಹೋಗು ತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು, ಸಂಜೆ ಸುಮಾರು 7.15 ಗಂಟೆ ವೇಳೆ 30 ಗ್ರಾಂ ತೂಗುವ ಚಿನ್ನದ ಸರ ಕಿತ್ತು ಕತ್ತಲಲ್ಲಿ ಪರಾರಿಯಾದರು. ಈ ಘಟನೆ ಕುವೆಂಪು ನಗರದ ರೂಬಿ ಸ್ಟೋರ್ ಸಮೀಪ ಜನನಿಬಿಡ ಪ್ರದೇಶದಲ್ಲೇ ನಡೆದಿದ್ದರೂ ದುಷ್ಕರ್ಮಿಗಳು ಕೈಚಳಕ ತೋರಿರುವುದು ಅಚ್ಚರಿ ಮೂಡಿಸಿದೆ. ಕುವೆಂಪುನಗರ ಠಾಣೆ ಇನ್ಸ್‍ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು.

ಎಚ್ಚರ ವಹಿಸಿ: ವಾಯುವಿಹಾರ ಮಾಡುವಾಗ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವಾಗ ಮಹಿಳೆಯರು ಎಚ್ಚರದಿಂದಿದ್ದು, ತಮ್ಮ ಅಕ್ಕಪಕ್ಕದಲ್ಲಿ ಓಡಾಡು ವವರ ಬಗ್ಗೆ ನಿಗಾ ಇರಿಸಬೇಕು. ಚಿನ್ನದ ಒಡವೆ ಧರಿಸಿದಾಗ ವೇಲ್ ಅಥವಾ ಸೀರೆ ಸೆರಗಿನಿಂದ ಮುಚ್ಚಿ ಕೊಂಡಿರುವುದು ಒಳಿತು ಎಂದು ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಾಲಕೃಷ್ಣ ಅವರು ಸಲಹೆ ನೀಡಿದ್ದಾರೆ.

Translate »