2 ಕೆಜಿ ಚಿನ್ನಾಭರಣ ಕಳವು, ವೃದ್ಧ ದಂಪತಿ ದೋಚಿದ ಪ್ರಕರಣ ಶೀಘ್ರ ಬಯಲು
ಮೈಸೂರು

2 ಕೆಜಿ ಚಿನ್ನಾಭರಣ ಕಳವು, ವೃದ್ಧ ದಂಪತಿ ದೋಚಿದ ಪ್ರಕರಣ ಶೀಘ್ರ ಬಯಲು

September 3, 2020

ಮೈಸೂರು,ಸೆ.2(ಆರ್‍ಕೆ)- ಮೈಸೂರು ಸರಸ್ವತಿಪುರಂನ ಮನೆಯೊಂದರಲ್ಲಿ 2 ಕೆಜಿ ಚಿನ್ನಾಭರಣ ಕಳವು ಮತ್ತು ವಿವೇಕಾ ನಂದನಗರದಲ್ಲಿ ಬೆಳ್ಳಂಬೆಳಗ್ಗೆ ವೃದ್ಧ ದಂಪತಿ ಕಟ್ಟಿಹಾಕಿ ಆಭರಣ ದೋಚಿದ್ದ ಪ್ರಕರಣಗಳ ತನಿಖೆ ತೀವ್ರಗೊಂಡಿದ್ದು, ಅತೀ ಶೀಘ್ರ ಆರೋಪಿಗಳ ಬಂಧಿಸು ವುದಾಗಿ ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ದೇವರಾಜ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಪ್ರಕರಣಗಳ ಸಂಬಂಧ ಸಿಸಿ ಕ್ಯಾಮರಾಗಳಲ್ಲಿ ಲಭ್ಯವಾದ ಫುಟೇ ಜಸ್‍ಗಳನ್ನು ಕಲೆ ಹಾಕಿ ಸುಳಿವಿನ ಜಾಡು ಹಿಡಿದು ಖದೀಮರ ಪತ್ತೆಗೆ ಜಾಲ ಬೀಸ ಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಶೀಘ್ರ ಪ್ರಕರಣವನ್ನು ಭೇದಿಸುವುದಾಗಿ ತಿಳಿಸಿದರು.

ಸರಸ್ವತಿಪುರಂನ ವಿಜಯಕುಮಾರ್ ಎಂಬುವರ ಮನೆಯಲ್ಲಿ 2 ಕೆಜಿ ಚಿನ್ನಾಭರಣ ನಾಪತ್ತೆ ಪ್ರಕರಣ ಸಂಬಂಧವೂ ಕೆಲ ಶಂಕಿತರನ್ನು ಠಾಣೆಗೆ ಕರೆತಂದು ವಿಚಾ ರಣೆ ಮಾಡಲಾಗುತ್ತಿದೆ. ಅವರಿಗೆ ಪರಿಚಿ ತರು, ಸಂಬಂಧಿಗಳು ಅಥವಾ ವೃತ್ತಿನಿರತ ಖದೀಮರು ಈ ಕೃತ್ಯವೆಸಗಿದ್ದಾರೆಂಬ ಶಂಕೆ ಇದ್ದು ತನಿಖೆಯಿಂದ ಬಯಲಾಗಬೇಕಾ ಗಿದೆ. ವಿವೇಕಾನಂದನಗರದಲ್ಲಿ ಸೋಮ ವಾರ ಮುಂಜಾನೆ ವೃದ್ಧ ದಂಪತಿ ಕಟ್ಟಿ ಹಾಕಿ, ಮನೆಯಲ್ಲಿದ್ದ ಆಭರಣ ಮತ್ತು 15,000 ರೂ. ನಗದು ದೋಚಿ ಪರಾರಿ ಯಾಗಿರುವ ಪ್ರಕರಣವನ್ನೂ ಪತ್ತೆ ಮಾಡಲು ಶೋಧ ಕಾರ್ಯ ಮುಂದು ವರಿದಿದೆ ಎಂದು ತಿಳಿಸಿದರು.

ಮೈಸೂರು ನಗರದಾದ್ಯಂತ ಅಧಿಕಾರಿ ಗಳು ಮತ್ತು ಸಿಬ್ಬಂದಿ ರಾತ್ರಿ ಗಸ್ತು ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಮನೆ ಕಳವು, ಮಹಿಳೆಯರ ಚಿನ್ನದ ಸರ ಅಪಹರಣದಂತಹ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗಿದೆ ಎಂದು ಅವರು ತಿಳಿಸಿದರು.

Translate »