ಬೆಳಗೊಳ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ 20 ಕೋಟಿಯ ವಿಸ್ತರಣಾ ಯೋಜನೆ
ಮೈಸೂರು

ಬೆಳಗೊಳ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ 20 ಕೋಟಿಯ ವಿಸ್ತರಣಾ ಯೋಜನೆ

March 19, 2022

ಮೈಸೂರು, ಮಾ.18- ಮೈಸೂರು ತಾಲೂಕು ನಾಗನ ಹಳ್ಳಿ ಬಳಿ ಸೆಟಲೈಟ್ ರೈಲ್ವೆ ಟರ್ಮಿನಲ್ ಯೋಜನೆಯು ವಿಳಂಬವಾಗುತ್ತಿರುವ ಬೆನ್ನಲ್ಲೇ ನೈರುತ್ಯ ರೈಲ್ವೇ ವಿಭಾಗವು ಶ್ರೀರಂಗ ಪಟ್ಟಣ ತಾಲೂಕು ಬೆಳಗೊಳ ಸಮೀಪವಿರುವ ರೈಲು ನಿಲ್ದಾಣದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮಹತ್ವದ ವಿಸ್ತರಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಕಳೆದ 4 ವರ್ಷಗಳ ಹಿಂದೆ ನಾಗನಹಳ್ಳಿ ಸೆಟ ಲೈಟ್ ರೈಲ್ವೇ ಟರ್ಮಿನಲ್ ನಿರ್ಮಿಸಲು ರೈಲ್ವೇ ಇಲಾಖೆ 789 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಿತ್ತಾದರೂ, ಯೋಜನೆಗೆ ಅಗತ್ಯವಿರುವ ಭೂಮಿ ಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ರಾಜ್ಯ ಸರ್ಕಾರದಿಂದ ವಿಳಂಬವಾದ ಕಾರಣ, ಯೋಜನೆ ಇನ್ನು ನೆನಗುದಿಗೆ ಬಿದ್ದಿದೆ. ಮೈಸೂರು ರೈಲು ನಿಲ್ದಾಣದಲ್ಲಿ ರೈಲುಗಳ ಹಾಗೂ ಕಾರ್ಯಾಚರಣೆಗೆ ಸ್ಥಳಾಭಾವವಿರುವ ಕಾರಣ, ರೈಲುಗಳ ಸಂಚಾರಕ್ಕನು ಗುಣವಾಗಿ ರೆಸ್ಟಿಂಗ್ (ಸ್ಟೇಬಲಿಂಗ್) ಲೈನ್‍ಗಳಿಗೆ ಸ್ಥಳಾವಕಾಶವಿಲ್ಲದೇ ಒತ್ತಡ ಉಂಟಾದ ಹಿನ್ನೆಲೆಯಲ್ಲಿ ಹೊರವಲಯದ ನಾಗನಹಳ್ಳಿ
ಬಳಿ ರೈಲ್ವೇ ಟರ್ಮಿನಲ್ ನಿರ್ಮಿಸಲು ಉದ್ದೇಶಿಸಲಾಗಿತ್ತು.

ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಹಾಗೂ ಚಾಮುಂ ಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ನಾಗನಹಳ್ಳಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ರೈಲ್ವೆ ಟರ್ಮಿನಲ್‍ಗೆ ಭೂಮಿ ಸ್ವಾಧೀನ ಕುರಿತಂತೆ ಅಲ್ಲಿನ ಸ್ಥಳೀಯ ರೈತರೊಂದಿಗೆ ಮಾತ ನಾಡಿ, ಮನವೊಲಿಸಲೆತ್ನಿಸಿದ್ದರು. ಭೂಮಿ ಸ್ವಾಧೀನಕ್ಕೆ ಪರಿಹಾರದ ಜೊತೆಗೆ ಭೂಮಿ ಕಳೆದುಕೊಂಡವರ ಕುಟುಂಬದ ಒಬ್ಬರಿಗೆ ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಬೇಕೆಂದು ರೈತರು ಬೇಡಿಕೆ ಇಟ್ಟಿದ್ದರು.

ಪರಿಹಾರದ ವಿಚಾರವಾಗಿ ರೈತರಿಗೆ ಅನುಕೂಲ ಮಾಡಿಕೊಡ ಬಹುದೇ ಹೊರತು, ಕೇಂದ್ರ ಸರ್ಕಾರಿ ಕೆಲಸ ಕೊಡಲು ಸಾಧ್ಯ ವಾಗುವುದಿಲ್ಲ ಎಂದು ರೈಲ್ವೇ ಇಲಾಖೆ ಖಡಕ್ ಆಗಿ ಹೇಳಿದ್ದ ರಿಂದಾಗಿ ಯೋಜನೆಗೆ ಭೂಮಿ ನೀಡಲು ರೈತರು ಆಸಕ್ತಿ ತೋರ ಲಿಲ್ಲ. ಮೈಸೂರು ರೈಲು ನಿಲ್ದಾಣದ ಸ್ಥಳಾಭಾವ ಹಾಗೂ ಒತ್ತಡ ತಪ್ಪಿಸಲು ಪರ್ಯಾಯವಾಗಿ ಬೆಳಗೊಳ (ಬೆಳಗುಳ) ರೈಲು ನಿಲ್ದಾಣದ ಬಳಿ ಪ್ರಸ್ತುತ ಇರುವ 3 ಸ್ಟೇಬ್ಲಿಂಗ್ (ರೆಸ್ಟಿಂಗ್) ರೈಲು ಹಳಿ ಮಾರ್ಗದ ಜೊತೆಗೆ ಹೆಚ್ಚುವರಿಯಾಗಿ 2 ಲೈನ್‍ಗಳು, ಹೊಸ ರೈಲು ನಿಲ್ದಾಣ ಕಟ್ಟಡ ಹಾಗೂ ಪ್ಲಾಟ್ ಫಾರಂ ನಿರ್ಮಿ ಸಲು 20 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ನೈರುತ್ಯ ರೈಲ್ವೇ ಕೈಗೆತ್ತಿಕೊಂಡಿದೆ. 3 ಹಳೇ ಸ್ಟೇಬ್ಲಿಂಗ್ ಲೈನ್‍ಗಳ ಬದಿಯಲ್ಲಿ 2 ಹೊಸ ಮಾರ್ಗ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಮೈಸೂರು- ಅರಸೀಕೆರೆ ರೈಲು ಮಾರ್ಗದ ನಡುವೆ ಮೈಸೂರು ರೈಲು ನಿಲ್ದಾಣದಿಂದ ಸುಮಾರು 14 ಕಿಮೀ ದೂರದಲ್ಲಿರುವ ಬೆಳಗೊಳ ರೈಲು ನಿಲ್ದಾಣದ ಬಳಿ ಹೊಸ 2 ರೆಸ್ಟಿಂಗ್ ಲೈನ್‍ಗಳ ನಿರ್ಮಾಣ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಈಗಾಗಲೇ ಒಂದು ಬದಿಯಲ್ಲಿ ಸುಮಾರು 1 ಕಿಮೀ ದೂರದವರೆಗೆ ಕಾಮಗಾರಿ ಮುಗಿದಿದ್ದು, ರೈಲ್ವೆ ಕಂಬಿ ಅಳವಡಿಸುವುದಷ್ಟೇ ಬಾಕಿ ಉಳಿದಿದೆ. ಪ್ರತಿ ದಿನ 45 ರೈಲುಗಳು ಓಡಾಡುತ್ತಿದ್ದು, 1 ಲಕ್ಷ ಪ್ರಯಾಣಿಕರು ಸಂಚರಿಸುತ್ತಿರುವುದರಿಂದ ಸ್ಥಳಾಭಾವ ಉಂಟಾಗಿರುವ ಕಾರಣ ರೈಲುಗಳನ್ನು ತಾತ್ಕಾಲಿಕ ವಾಗಿ ನಿಲುಗಡೆ ಮಾಡಲು ಬೆಳಗೊಳ ರೈಲು ನಿಲ್ದಾಣದ ಬಳಿ 2 ಹೆಚ್ಚುವರಿ ಮಾರ್ಗಗಳನ್ನು ಅಳವಡಿಸಲಾಗುತ್ತಿದೆ.

ಪ್ರತಿದಿನ 40ರಿಂದ 50 ಕಾರ್ಮಿಕರು ಸ್ಟೇಬ್ಲಿಂಗ್ ಲೈನ್ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಜುಲೈ ಅಥವಾ ಆಗಸ್ಟ್ ಮಾಹೆಯೊಳಗೆ ರೆಸ್ಟಿಂಗ್ ಲೈನ್ ನಿರ್ಮಾಣ ಕೆಲಸ ಪೂರ್ಣಗೊಳಿಸಲು ರೈಲ್ವೇ ಇಲಾಖೆ ಉದ್ದೇಶಿಸಿದೆ.

ಮಾರ್ಗಕ್ಕೆ ಜಲ್ಲಿ ಕಲ್ಲು ಹಾಕಿ ಕಬ್ಬಿಣದ ರೈಲ್ವೇ ಕಂಬಿ ಅಳವಡಿಸುವುದು, ಕೇಬಲ್, ವಿದ್ಯುದೀಕರಣ, ಮಾರ್ಗ ಸುರಕ್ಷತಾ ಕೆಲಸವಷ್ಟೇ ಬಾಕಿ ಉಳಿದಿದೆ. ರೈಲ್ವೇ ಇಲಾಖೆಗೆ ಜಾಗ ಲಭ್ಯವಿದ್ದ ಕಾರಣ ರೈಲ್ವೆ ಇಲಾಖೆಗೆ ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆಯೇ ಎದುರಾಗದಿರುವುದರಿಂದ ಕಳೆದ ನಾಲ್ಕೈದು ತಿಂಗಳಿಂದ ಹೆಚ್ಚುವರಿ ರೆಸ್ಟಿಂಗ್ ಲೈನ್ ನಿರ್ಮಾಣ ಕಾಮಗಾರಿ ಸದ್ದಿಲ್ಲದೇ ನಡೆಯುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೇ ವಿಭಾಗದ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ ವಾಲ್, ಮೈಸೂರು ರೈಲು ನಿಲ್ದಾಣದಲ್ಲಿ ಸ್ಥಳಾಭಾವವಿ ರುವುದ ರಿಂದ ಆ ಮಾರ್ಗದಲ್ಲಿ ಸಂಚರಿಸುತ್ತಿರುವ ರೈಲುಗಳ ನಿಲುಗಡೆಗೆ ತೊಂದರೆಯಾಗುತ್ತಿದೆ. ಹಾಗಾಗಿ ಬೆಳಗೊಳ ರೈಲು ನಿಲ್ದಾಣದಲ್ಲಿ ಎರಡು ಹೆಚ್ಚುವರಿ ರೆಸ್ಟಿಂಗ್ ಲೈನ್ ಹಾಗೂ ಹೊಸ ಪ್ಲಾಟ್ ಫಾರಂ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಭೂಸ್ವಾಧೀನ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದಾಗಿ ಉದ್ದೇಶಿತ ನಾಗನಹಳ್ಳಿ ಸೆಟಲೈಟ್ ರೈಲ್ವೇ ಟರ್ಮಿನಲ್ ಯೋಜನೆ ಸಾಕಾರವಾಗದ ಕಾರಣ ಬೆಳಗೊಳ ಯೋಜನೆಯನ್ನು ಕೈಗೆತ್ತಿ ಕೊಳ್ಳಲಾಗಿದ್ದು, ಸ್ಟೇಬ್ಲಿಂಗ್ ಲೈನ್ ನಿರ್ಮಾಣ ಕೆಲಸವನ್ನು ಜುಲೈ- ಆಗಸ್ಟ್ ಮಾಹೆಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು. ಪ್ರಸ್ತುತ ಇರುವ ಬೆಳಗೊಳ ರೈಲು ನಿಲ್ದಾಣದ ಪಾರಂ ಪರಿಕ ಕಟ್ಟಡವನ್ನು ಉಳಿಸಿಕೊಂಡು ಅದರ ಪಕ್ಕದಲ್ಲೇ ಹೊಸ ಕಟ್ಟಡ ಮತ್ತು ಪ್ಲಾಟ್ ಫಾರಂ ಅನ್ನೂ ನಿರ್ಮಿಸಲಾಗುತ್ತಿದ್ದು, ಇದರಿಂದ ನಿಲ್ದಾಣ ಉನ್ನತೀಕರಣಗೊಳ್ಳಲಿದೆ. ಅದರಿಂದಾಗಿ ಮೈಸೂರು ರೈಲು ನಿಲ್ದಾಣದಲ್ಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ತಿಳಿಸಿದರು.

Translate »