ಮೈಸೂರು,ಏ.೨೫(ಎಸ್ಬಿಡಿ)- ಮೈಸೂರು ತಾಲೂಕು ನೂತನ ಬೋಗಾದಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಿ.ಎನ್.ವಿಜಯ್ಕುಮಾರ್ ಸೋಮವಾರ ಲಂಚ ಪಡೆದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ. ನೋಂದಾಯಿತ ಇಂಜಿನಿಯರ್ ಒಬ್ಬರ ಪರವಾನಗಿ ನವೀಕರಣಕ್ಕೆ ೨೦ ಸಾವಿರ ಲಂಚ ಪಡೆಯು ವಾಗ ಎಸಿಬಿ ಪೊಲೀಸರು ದಾಳಿ ನಡೆಸಿ, ಲಂಚದ ಹಣ ಸಮೇತ ವಿಜಯ್ಕುಮಾರ್ನನ್ನು ವಶಕ್ಕೆ ಪಡೆದಿದ್ದಾರೆ.ಸರ್ಕಾರದ ಅನುಮೋದಿತ ಮೌಲ್ಯಮಾಪಕ(ಕಟ್ಟಡ)ರೂ ಆದ ಬೋಗಾದಿ ಪಟ್ಟಣ ಪಂಚಾಯ್ತಿ ನೋಂದಾಯಿತ ಇಂಜಿನಿ ಯರ್ ಒಬ್ಬರ ನೋಂದಣ ಪರವಾನಗಿ(ಲೈಸೆನ್ಸ್) ಅವಧಿ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಏ.೪ರಂದು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಿದ್ದರು. ಆದರೆ ಪರವಾನಗಿ ನವೀಕರಣಕ್ಕೆ ೨೦ ಸಾವಿರ ರೂ. ಲಂಚ ನೀಡುವಂತೆ ಇಂದು ಮುಖ್ಯಾಧಿಕಾರಿ ವಿಜಯ್ಕುಮಾರ್ ಒತ್ತಾಯಿಸಿದ್ದಾಗಿ ಇಂಜಿನಿಯರ್ ಎಸಿಬಿಗೆ ದೂರು ನೀಡಿದ್ದರು. ಈ ಸಂಬAಧ ಪ್ರಕರಣ ದಾಖಲಿ ಸಿಕೊಂಡ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಪರವಾನಗಿ ನವೀಕರಣ ಕ್ಕಾಗಿ ಇಂಜಿನಿಯರ್ನಿAದ ತಮ್ಮ ಕಚೇರಿಯಲ್ಲೇ ೨೦ ಸಾವಿರ ರೂ. ಲಂಚ ಪಡೆಯುವಾಗ ವಿಜಯ್ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬAಧ ತನಿಖೆ ಮುಂದುವರೆದಿದೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ಮೈಸೂರು