ಮೈಸೂರು ಜಿಲ್ಲೆಯಲ್ಲಿ 24 ಮಂದಿಗೆ ಸೋಂಕು, 43 ಸೋಂಕಿತರು ಗುಣಮುಖ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 24 ಮಂದಿಗೆ ಸೋಂಕು, 43 ಸೋಂಕಿತರು ಗುಣಮುಖ

January 21, 2021

ಮೈಸೂರು, ಜ.20(ವೈಡಿಎಸ್)- ಮೈಸೂರು ಜಿಲ್ಲೆ ಯಲ್ಲಿ ಬುಧವಾರ 24 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದೇ ವೇಳೆ 43 ಸೋಂಕಿತರು ಗುಣ ಕಂಡಿದ್ದಾರೆ. ಇಂದು ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ.

ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53,097ಕ್ಕೆ ಏರಿಕೆ ಯಾಗಿದ್ದು, ಈವರೆಗೆ 51,852 ಮಂದಿ ಗುಣಮುಖರಾದಂತಾಗಿದೆ. ಇದುವರೆಗೆ 1,022 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 223 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಇವರಲ್ಲಿ 66 ಮಂದಿ ಸೋಂಕಿತರು ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆ ಹಾಗೂ ನಿಗಾ ಕೇಂದ್ರ ಗಳಲ್ಲಿ 31, ಖಾಸಗಿ ಆಸ್ಪತ್ರೆಗಳು ಹಾಗೂ ನಿಗಾ ಕೇಂದ್ರಗಳಲ್ಲಿ 124 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಲ್ಯಾಬ್‍ಗಳಲ್ಲಿ ಪರೀಕ್ಷೆ ಮಾಡಿಸಿಕೊಂಡಿ ರುವ 56,969 ಮಂದಿ ಸೇರಿ, ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,62,909 ಜನರಿಗೆ ಕೋವಿಡ್ ಪರೀಕ್ಷೆ ನಡೆಸಿದಂತಾಗಿದೆ.

ರಾಜ್ಯದ ವಿವರ: ರಾಜ್ಯದಲ್ಲಿ ಬುಧವಾರ ವರದಿ ಯಾದ 4 ಸಾವಿನ ಪ್ರಕರಣ ಸೇರಿ ಇದುವರೆಗೆ ಕೊರೊನಾದಿಂದ 12,185 ಮಂದಿ ಮೃತಪಟ್ಟಂತಾ ಗಿದೆ. ಗದಗ, ಯಾದಗಿರಿ ಜಿಲ್ಲೆಯಲ್ಲಿ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಇನ್ನು ಬಾಗಲಕೋಟೆ 2, ಬಳ್ಳಾರಿ 9, ಬೆಳಗಾವಿ 22, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 260, ಬೀದರ್ 1, ಚಾಮರಾಜನಗರ 5, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 1, ಚಿತ್ರದುರ್ಗ 19, ದಕ್ಷಿಣ ಕನ್ನಡ 16, ದಾವಣಗೆರೆ 10, ಧಾರವಾಡ 7, ಹಾಸನ 10, ಹಾವೇರಿ 2, ಕಲಬುರಗಿ 7, ಕೊಡಗು 4, ಕೋಲಾರ 10, ಕೊಪ್ಪಳ 1, ಮಂಡ್ಯ 7, ಮೈಸೂರು 24, ರಾಯ ಚೂರು 1, ರಾಮನಗರ 1, ಶಿವಮೊಗ್ಗ 3, ತುಮಕೂರು 33, ಉಡುಪಿ 7, ಉತ್ತರ ಕನ್ನಡ 4, ವಿಜಯಪುರ 12 ಮಂದಿಗೆ ಸೇರಿ ರಾಜ್ಯದಲ್ಲಿ ಬುಧವಾರ 501 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅದೇ ವೇಳೆ 665 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿ ದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,33,578ಕ್ಕೆ ಏರಿಕೆಯಾಗಿದ್ದರೆ, 9,13,677 ಕೊರೊನಾ ಸೋಂಕಿ ತರು ಗುಣಮುಖರಾಗಿದ್ದಾರೆ. 7,697 ಸಕ್ರಿಯ ಪ್ರಕರಣ ಗಳಿದ್ದು, ಸೋಂಕಿತರೆಲ್ಲಾ ವಿವಿಧ ನಿಗಾ ಕೇಂದ್ರಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.

Translate »