ಮೈಸೂರು ಜಿಲ್ಲೆಯಲ್ಲಿ ಈವರೆಗೆ 6,043 ಮಂದಿಗೆ ಕೊರೊನಾ ಲಸಿಕೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಈವರೆಗೆ 6,043 ಮಂದಿಗೆ ಕೊರೊನಾ ಲಸಿಕೆ

January 21, 2021

ಮೈಸೂರು, ಜ.20(ಆರ್‍ಕೆ)- ಜನವರಿ 16ರಿಂದ 20ರವರೆಗೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಒಟ್ಟು 6,043 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಲಸಿಕೆ ಹಾಕಲಾಗಿದೆ. ಒಟ್ಟು 9,353 ಮಂದಿ ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತಾದರೂ, ಈವರೆಗೆ 6,043 ಮಂದಿ ಮಾತ್ರ ಲಸಿಕಾ ಚುಚ್ಚುಮದ್ದು ಪಡೆದಿದ್ದು, ಶೇ.64.61ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಕೋವಿಡ್-19 ನೋಡಲ್ ಅಧಿಕಾರಿ ಡಾ.ಎಲ್.ರವಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜ.16ರಂದು ಉದ್ದೇಶಿತ 860ರ ಪೈಕಿ 454 ಮಂದಿ, ಜ.18ರಂದು 4,601ರ ಪೈಕಿ 2,731 ಹಾಗೂ ಇಂದು (ಜ.20) 3,892 ಮಂದಿ ಪೈಕಿ 2,858 ಫಲಾನುಭವಿಗಳು ಕೊರೊನಾ ವಿರುದ್ಧದ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಹುಣಸೂರಿನ ಗಿರಿಜನ ಸಂಚಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹೆಚ್.ಕೆ.ಸೌಮ್ಯಶ್ರೀ, ಹೆಚ್.ಡಿ.ಕೋಟೆ ತಾಲೂಕು, ಚಿಕ್ಕೆನೆಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ಜೆ.ಎನ್.ದಿವಾಕರ್ ಸೇರಿದಂತೆ ವೈದ್ಯರು, ನರ್ಸ್‍ಗಳು, `ಡಿ’ ಗ್ರೂಪ್ ನೌಕರರು, ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದರು.

Translate »