ಬೆಂಗಳೂರು, ಜು.12-ರಾಜ್ಯದಲ್ಲಿ ಭಾನುವಾರ 2627 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ 38,843 ಮಂದಿಗೆ ಸೋಂಕು ತಗು ಲಿದಂತಾಗಿದೆ. ಇಂದು ಸೋಂಕಿನಿಂದ 71 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 648ಕ್ಕೆ ಏರಿಕೆ ಯಾಗಿದೆ. ರಾಜ್ಯದಲ್ಲಿ ಇಂದು 693 ಮಂದಿ ಗುಣಮುಖರಾಗಿದ್ದು, ಈವರೆಗೆ 15,409 ಮಂದಿ ಗುಣಮುಖರಾದಂತಾಗಿದೆ. 22,746 ಸಕ್ರಿಯ ಸೋಂಕಿತರ ಪೈಕಿ 532 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರೆಲ್ಲರನ್ನೂ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ 1,525 ಮಂದಿಗೆ ಭಾನುವಾರ ಸೋಂಕು ತಗುಲಿದ್ದು, ರಾಜಧಾನಿಯಲ್ಲಿ ಸೋಂಕಿ ತರ ಸಂಖ್ಯೆ 18,387ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ 196, ಧಾರವಾಡ 129, ಯಾದಗಿರಿ 120, ಕಲಬುರಗಿ 79, ಬಳ್ಳಾರಿ 63, ಬೀದರ್ 62, ರಾಯ ಚೂರು 48, ಉಡುಪಿ 43, ಮೈಸೂರು 42, ಶಿವಮೊಗ್ಗ 42, ಚಿಕ್ಕಬಳ್ಳಾರಪುರ 39, ಹಾಸನ 31, ಕೊಪ್ಪಳ 27, ತುಮಕೂರು 26, ಕೋಲಾರ 24, ದಾವಣಗೆರೆ 20, ಬೆಂಗಳೂರು ಗ್ರಾಮಾಂತರ 19, ಕೊಡಗು 18, ಗದಗ 14, ಚಾಮರಾಜನಗರ 13, ಉತ್ತರ ಕನ್ನಡ ಮತ್ತು ಹಾವೇರಿ ತಲಾ 12, ಚಿಕ್ಕಮಗಳೂರು 10, ಬಾಗಲಕೋಟೆ 7, ಮಂಡ್ಯ 4, ಬೆಳಗಾವಿಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಸೋಂಕಿತರ ಪ್ರಥಮ ಸಂಪರ್ಕದ 42,168 ಮತ್ತು ದ್ವಿತೀಯ ಸಂಪರ್ಕದ 34,623 ಮಂದಿ ಸೇರಿದಂತೆ ಒಟ್ಟು 76,791 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.