ಮೈಸೂರು ಜಿಲ್ಲೆಯಲ್ಲಿ ಬುಧವಾರ 29,195 ಜನರಿಗೆ ಲಸಿಕೆ ನೀಡಿಕೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಬುಧವಾರ 29,195 ಜನರಿಗೆ ಲಸಿಕೆ ನೀಡಿಕೆ

June 24, 2021

ಮೈಸೂರು, ಜೂ.23(ಆರ್‍ಕೆಬಿ)- ಬೃಹತ್ ಕೋವಿಡ್ ಲಸಿಕಾ ಆಭಿಯಾನ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ 3ನೇ ದಿನ ವಾದ ಬುಧವಾರ 29,195 ಜನರಿಗೆ ಲಸಿಕೆ ಹಾಕಲಾಯಿತು. ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳ ಮುಂದೆ ಸಾಲಿನಲ್ಲಿ ನಿಂತು ಜನರು ಲಸಿಕೆ ಪಡೆದುಕೊಂಡರು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ಮಹಾನಗರಪಾಲಿಕೆ ವತಿಯಿಂದ ಲಸಿಕಾ ಆಭಿಯಾನ ಆಯೋಜಿಸಲಾಗಿದೆ. 18 ರಿಂದ 44 ವರ್ಷ ವಯೋಮಿತಿಯ ಜನ ರಿಗೆ ಮೈಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ 170ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು.
ಲಸಿಕೆ ಹಾಕಿಸಿಕೊಳ್ಳಲು ಆಧಾರ್ ಕಡ್ಡಾಯವಾಗಿರುವುದರಿಂದ ಕೆಲವೆಡೆ ತಾಂತ್ರಿಕ ದೋಷದಿಂದ ಕೆಲವರ ಹೆಸರು ನೋಂದಣಿಯಾಗದೆ ಪರದಾಡಿದರು. ಇನ್ನೂ ಕೆಲವೆಡೆ ನೋಂದಣಿ ಕಾರ್ಯ ವಿಳಂಬವಾಗಿದ್ದರಿಂದ ಲಸಿಕೆ ಪಡೆಯ ಲಾಗದೆ ವಾಪಸಾದರು. ಅವರೆಲ್ಲರಿಗೂ ನಾಳೆ ಬರುವಂತೆ ಸೂಚನೆ ನೀಡಲಾಯಿತು.

ಮೈಸೂರಿನ ಇಂದಿರಾನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದೇ ಕುಟುಂಬದ ಐದು ಮಂದಿ ಲಸಿಕೆ ಪಡೆದ ಖುಷಿಯನ್ನು `ಮೈಸೂರು ಮಿತ್ರ’ನೊಂ ದಿಗೆ ಹಂಚಿಕೊಂಡರು. ಚಾಮರಾಜ ಜೋಡಿ ರಸ್ತೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಬೆಳಗ್ಗೆಯಿಂದಲೇ ಲಸಿಕೆ ಪಡೆಯಲು ಜನರು ಸಾಲುಗಟ್ಟಿ ನಿಂತು ಲಸಿಕೆ ಪಡೆದರೆ, ಕೆಲವೆಡೆ ನಿಗದಿಪಡಿಸಿದ್ದ ಕ್ಕಿಂತ ಹೆಚ್ಚು ಮಂದಿ ಬಂದಿದ್ದರಿಂದ ಇಂದು ಲಸಿಕೆ ಸಿಗುವುದಿಲ್ಲವೆಂಬುದು ಖಾತ್ರಿ ಯಾದ ಕಾರಣ ಕೆಲವರು ಹಿಂತಿರುಗಿ ದರು. ಕುವೆಂಪುಗರದ ಕರ್ನಾಟಕ ಪಬ್ಲಿಕ್ ಶಾಲೆ, ಜಯನಗರದ ಬಾಲೋದ್ಯಾನ, ಲಕ್ಷ್ಮೀಪುರಂ ಜೆಎಸ್‍ಎಸ್ ಶಾಲೆ, ಜೆ.ಪಿ. ನಗರ ಜೆಎಸ್‍ಎಸ್ ಪಬ್ಲಿಕ್ ಶಾಲೆ ಸೇರಿ ದಂತೆ ಮೈಸೂರಿನ ವಿವಿಧೆಡೆ ಲಸಿಕಾ ಕಾರ್ಯ ಚುರುಕಿನಿಂದ ನಡೆಯಿತು.

Translate »