ಮೈಸೂರಿನ ರಸ್ತೆಗಳ 45 ಸಿಸಿ ಕ್ಯಾಮರಾ ಮಾತ್ರ ಸಕ್ರಿಯ
ಮೈಸೂರು

ಮೈಸೂರಿನ ರಸ್ತೆಗಳ 45 ಸಿಸಿ ಕ್ಯಾಮರಾ ಮಾತ್ರ ಸಕ್ರಿಯ

June 24, 2021

ಮೈಸೂರು, ಜೂ.23(ಆರ್‍ಕೆ)- ಮೈಸೂರು ನಗರದ ಪ್ರಮುಖ ಜಂಕ್ಷನ್, ರಸ್ತೆ, ರಾಜಮಾರ್ಗಗಳಲ್ಲಿ ಅಳವಡಿಸಿರುವ 59 ಸಿಸಿ ಕ್ಯಾಮರಾಗಳ ಪೈಕಿ 45 ಮಾತ್ರ ಕಾರ್ಯನಿರ್ವಹಿಸುತ್ತಿವೆ.

ವಾಹನ ಸಂಚಾರ ದಟ್ಟಣೆ, ಸಂಚಾರ ನಿಯಮ ಉಲ್ಲಂಘನೆ, ಕಾನೂನು-ಸುವ್ಯವಸ್ಥೆಗೆ ಭಂಗ ತರುವ ಘಟನೆಗಳ ಮೇಲೆ ನಿಗಾ ಇರಿಸಿ ನಿಯಂತ್ರಿಸುವ ಸಲು ವಾಗಿ ಹಾಗೂ ಘರ್ಷಣೆ, ಜಗಳ, ಹೊಡೆ ದಾಟ, ಅಪಘಾತ, ಕೊಲೆ-ಸುಲಿಗೆ ಯಂತಹ ಅಪರಾಧ ಪ್ರಕರಣಗಳಿಗೆ ಸಾಕ್ಷ್ಯವಾಗಿ ಬಳಸಿಕೊಳ್ಳುವ ಸಲುವಾಗಿ ಮೈಸೂರು ನಗರದಾದ್ಯಂತ ಪ್ರಮುಖ ಸರ್ಕಲ್, ಜಂಕ್ಷನ್, ರಸ್ತೆಗಳು, ವಾಣಿಜ್ಯ ಕೇಂದ್ರಗಳಲ್ಲಿ 59 ಸಿಸಿ ಕ್ಯಾಮರಾಗಳನ್ನು ಮೈಸೂರು ನಗರ ಪೊಲೀಸ್ ಘಟಕ ದಿಂದ ಅಳವಡಿಸಲಾಗಿದೆ.

ಅವುಗಳನ್ನು ನಿರ್ವಹಣೆ ಮಾಡಿ ಆಗಿಂ ದಾಗ್ಗೆ ರಿಪೇರಿ ಮಾಡಲೆಂದು ಸಂಸ್ಥೆ ಯೊಂದಕ್ಕೆ ವಾರ್ಷಿಕ ನಿರ್ವ ಹಣೆ ಗುತ್ತಿಗೆ ನೀಡಲಾಗಿತ್ತಾದರೂ, ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ, 14 ಸಿಸಿ ಕ್ಯಾಮರಾಗಳು ಕೆಟ್ಟಿ ನಿಂತಿವೆ. 45 ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಬೇಸಿಗೆ ಕಾಲದಲ್ಲಿ ಸಿಸಿ ಕ್ಯಾಮರಾ ಧೂಳಿನಿಂದ ಆವರಿಸಿದ ಪರಿಣಾಮ ಸೆರೆ ಯಾಗುವ ದೃಶ್ಯಾವಳಿಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ವಾಹನಗಳ ನೋಂದಣಿ ಸಂಖ್ಯೆಯೂ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದ್ದರಿಂದ ಸಿಸಿ ಕ್ಯಾಮರಾ ಅಳವಡಿಸಿ ರುವ ಉದ್ದೇಶವೇ ಈಡೇರದಂತಾಗಿದೆ.
ಮೈಸೂರು ನಗರದ 52 ಸಿಗ್ನಲ್ ಲೈಟ್ ಸರ್ಕಲ್‍ಗಳ ಪೈಕಿ 16 ಕಡೆ ಸಿಗ್ನಲ್ ಲೈಟ್‍ಗಳು ಕಾರ್ಯ ನಿರ್ವಹಿಸುತ್ತಿಲ್ಲ. 36 ಸರ್ಕಲ್‍ಗಳಲ್ಲಿ ಮಾತ್ರ ಸಿಗ್ನಲ್ ಲೈಟ್‍ಗಳು ವಾಹನ ಸವಾರರಿಗೆ ಸೂಚನೆ ನೀಡುತ್ತಿವೆ. ಸಿಗ್ನಲ್ ಲೈಟ್ ಮತ್ತು ಸಿಸಿ ಕ್ಯಾಮರಾಗಳನ್ನು ನಿರ್ವಹಣೆ ಮಾಡಲು ಜೂನ್ 1ರಿಂದ ಜಾರಿಗೆ ಬರುವಂತೆ ವಾರ್ಷಿಕ ನಿರ್ವಹಣೆ ಗುತ್ತಿಗೆಯನ್ನು ಎಲೆ ಕ್ಟ್ರಿಕಲ್ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ಲಾಕ್‍ಡೌನ್ ಕಾರಣ ದುರಸ್ತಿ ಮಾಡುವ ಪ್ರಕ್ರಿಯೆ ನಡೆಸಿಲ್ಲ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ನಗರದಲ್ಲಿ ವಾಹನಗಳ ವೇಗ ನಿಯಂತ್ರಿಸುವ 6 ಇಂಟರ್ ಸೆಪ್ಟರ್‍ಗಳಿದ್ದು, ಲಾಕ್‍ಡೌನ್ ಕಾರಣ ಅವುಗಳನ್ನು ಪಬ್ಲಿಕ್ ಅಡ್ರೆಸಿಂಗ್ ಸಿಸ್ಟಂ ಮೂಲಕ ಕೊರೊನಾ ಮಾರ್ಗಸೂಚಿ ಅನುಸರಿಸುವಂತೆ ಸಾರ್ವಜನಿಕರಿಗೆ ತಿಳಿ ವಳಿಕೆ ನೀಡಲು ಸದ್ಯ ಬಳಸಿಕೊಳ್ಳಲಾಗು ತ್ತಿದೆ. ನಾಲ್ಕು ಹೈವೇ ಪೆಟ್ರೋಲಿಂಗ್ ವಾಹನಗಳು, ಎರಡು ಪೊಲೀಸ್ ಸಂಜೀ ವಿನಿ ವಾಹನಗಳು ಹೆದ್ದಾರಿಗಳಲ್ಲಿ ಅಪ ಘಾತಗಳಿಂದ ಗಾಯಗೊಂಡವರನ್ನು ಗೋಲ್ಡನ್ ಹವರ್‍ನಲ್ಲಿ ಆಸ್ಪತ್ರೆಗೆ ಕರೆ ದೊಯ್ಯುವ ಕಾರ್ಯದಲ್ಲಿ ನಿರತವಾಗಿವೆ. 19 ಕೋಬ್ರಾ ಮೋಟಾರ್ ಸೈಕಲ್‍ಗಳು ಹಾಗೂ ಎರಡು ಟೈಗರ್ ವಾಹನಗಳೂ ಮೈಸೂರು ನಗರದಲ್ಲಿ ಸೇವೆ ಸಲ್ಲಿಸುತ್ತಿವೆ ಎಂದು ವಿವರ ನೀಡಿದ್ದಾರೆ.

Translate »