ಸಿಎಂ ಯಾರಾಗುವರು ಎಂಬುದು ಅಪ್ರಸ್ತುತ: ಡಾ.ಯತೀಂದ್ರ ಸಿದ್ದರಾಮಯ್ಯ
ಮೈಸೂರು

ಸಿಎಂ ಯಾರಾಗುವರು ಎಂಬುದು ಅಪ್ರಸ್ತುತ: ಡಾ.ಯತೀಂದ್ರ ಸಿದ್ದರಾಮಯ್ಯ

June 24, 2021

ಮೈಸೂರು, ಜೂ.23(ಎಂಕೆ)- ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿ ಕಾರಕ್ಕೆ ತರಬೇಕು ಎಂಬುದು ಮುಖ್ಯವೇ ಹೊರತು ಯಾರು ಮುಖ್ಯಮಂತ್ರಿ ಆಗ ಬೇಕು ಎಂಬುದು ಈಗ ಅಪ್ರಸ್ತುತ. ಆದ್ದ ರಿಂದ ಇದನ್ನು ಗಂಭೀರವಾಗಿ ತೆಗೆದು ಕೊಳ್ಳುವ ಅವಶ್ಯಕತೆ ಇಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪಕ್ಷದ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಸಿದ್ದ ರಾಮಯ್ಯ ಅಭಿಮಾನಿ ಬಳಗದಿಂದ 80 ಕಲಾವಿದರಿಗೆ ದಿನಸಿ ಕಿಟ್ ಮತ್ತು ತರಕಾರಿ ವಿತರಿಸಿದ ಬಳಿಕ ಅವರು ಮಾತನಾಡಿದರು.

ಅಭಿಮಾನಿಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ವೈಯಕ್ತಿಕ ಅಭಿ ಪ್ರಾಯವನ್ನಷ್ಟೇ ಹೇಳಿದ್ದಾರೆ. ಅದು ಪಕ್ಷದ ತೀರ್ಮಾನವಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್‍ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿ ದ್ದಾರೆ. ಇಬ್ಬರ ನಡುವೆ ವೈಷಮ್ಯ ತರದೆ ಈ ವಿಚಾರಕ್ಕೆ ಇಲ್ಲಿಗೇ ವಿರಾಮ ಹಾಕಬೇಕು. ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆ ಯಲ್ಲಿ ಬಗೆಹರಿಸಿಕೊಳುತ್ತೇವೆ ಎಂದರು.
ಕೋವಿಡ್ ಸಂಕಷ್ಟದಲ್ಲಿ ಜನರು ಬಿಜೆಪಿ ಆಡಳಿತಕ್ಕೆ ಬೇಸರಗೊಂಡಿದ್ದು, ಕಾಂಗ್ರೆಸ್ ನತ್ತ ಒಲವು ತೋರುತ್ತಿದ್ದಾರೆ. ಬಿಜೆಪಿಯ ದುರಾಡಳಿತವನ್ನು ಜನತೆಗೆ ತಿಳಿಸಿ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲ ನಾಯಕರು ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.
ಡೆಲ್ಟಾ ಪ್ಲಸ್: ರಾಜ್ಯದ ಹಲವೆಡೆ ‘ಡೆಲ್ಟಾ ಪ್ಲಸ್’ ಕಾಣಿಕೊಂಡಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದರೆ ಮೊದಲು ಕೊರೊನಾ ಸೋಂಕು ಹರಡುವುದನ್ನು ತಡೆಯಬೇಕು. ಕೊರೊನಾ ವೈರಸ್ ಹೆಚ್ಚಾದಂತೆ ರೂಪಾಂ ತರವಾಗುವ ಸಾಧ್ಯತೆಗಳಿರುತ್ತವೆ. ಆದ್ದ ರಿಂದ ಮೊದಲು ಕೊರೊನಾಗೆ ಕಡಿವಾಣ ಹಾಕಬೇಕು. ಸದ್ಯಕ್ಕೆ ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದೆ ಎಂದು ಜನರು ಮೈಮರೆಯದೆ ಮಾಸ್ಕ್ ಧರಿಸುವುದು, ವ್ಯಕ್ತಿ ಗತ ಅಂತರ ಕಾಪಾಡಿಕೊಳ್ಳುವುದು ಸೇರಿ ದಂತೆ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಮುಖ್ಯವಾಗಿದೆ ಎಂದರು.

ಕೊರೊನಾ 3ನೇ ಅಲೆ ಆಗಸ್ಟ್-ಸೆಪ್ಟೆಂ ಬರ್‍ಗೆ ಬರಲಿದ್ದು, ಮಕ್ಕಳನ್ನು ಹೆಚ್ಚಾಗಿ ಬಾಧಿಸುತ್ತದೆ ಎಂದು ತಜ್ಞರು ವರದಿ ನೀಡಿ ದ್ದಾರೆ. ಕೊರೊನಾ 3ನೇ ಅಲೆ ಪ್ರಾರಂ ಭಕ್ಕೂ ಮುನ್ನವೇ ಸರ್ಕಾರ ಹಲವು ಸಿದ್ಧತೆ ಗಳನ್ನು ಮಾಡಿಕೊಳ್ಳಬೇಕು. ಪ್ರತೀ ತಾಲೂ ಕಿನ ಆಸ್ಪತ್ರೆಗಳಿಯೂ ಆಕ್ಸಿಜನ್ ಲಭ್ಯವಾಗು ವಂತೆ ಮಾಡಬೇಕು. ಅಗತ್ಯ ಬೆಡ್‍ಗಳ ವ್ಯವಸ್ಥೆ ಮಾಡಬೇಕು. ಜೊತೆಗೆ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್, ಮಾಜಿ ಜಿ.ಪಂ ಅಧ್ಯಕ್ಷ ಕೆ.ಮರೀಗೌಡ, ಮುಖಂಡ ಸುನೀಲ್ ಬೋಸ್, ನಗರ ಪಾಲಿಕೆ ಸದಸ್ಯ ಶಮಿ, ಕರ್ನಾಟಕ ರಾಜ್ಯ ಶ್ರೀ ಸಿದ್ದರಾಮಯ್ಯ ಅಭಿ ಮಾನಿಗಳ ಬಳಗ ಅಧ್ಯಕ್ಷ ಹಿನಕಲ್ ಪ್ರಕಾಶ್, ಕೆಪಿಸಿಸಿ ಮಾನವ ಹಕ್ಕು ಮತ್ತು ಕಾನೂನು ಘಟಕದ ರಾಜ್ಯ ಕಾರ್ಯದರ್ಶಿ ಕವಿತಾ ಕಾಳೆ ಮತ್ತಿತರರು ಉಪಸ್ಥಿತರಿದ್ದರು.

Translate »