ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ರಂಗಶಿಕ್ಷಕರಿಗೂ ಆದ್ಯತೆ ನೀಡಿ
ಮೈಸೂರು

ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ರಂಗಶಿಕ್ಷಕರಿಗೂ ಆದ್ಯತೆ ನೀಡಿ

June 23, 2021

ಮೈಸೂರು,ಜೂ.22(ಪಿಎಂ)- ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷ ಕರ ನೇಮ ಕಾತಿಗೆ ಕರ್ನಾ ಟಕ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ರಂಗ ಶಿಕ್ಷಕರ ಪ್ರಸ್ತಾಪ ಇಲ್ಲವಾಗಿದೆ. ಈ ನೇಮಕಾತಿಯಲ್ಲಿ ರಂಗಶಿಕ್ಷಕರಿಗೂ (ನಾಟಕ ಶಿಕ್ಷಕರು) ಆದ್ಯತೆ ನೀಡುವ ಮೂಲಕ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಒತ್ತು ಕೊಡಬೇಕೆಂದು ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರನ್ನು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಈ ಹಿಂದೆ ಶಿಕ್ಷಕರ ನೇಮಕಾತಿ ಯಲ್ಲಿ ನಾಟಕ ಶಿಕ್ಷಕರನ್ನು ನೇಮಿಸ ಲಾಗಿತ್ತು. ಅವರಲ್ಲಿ ಅನೇಕರು ನಿವೃತ್ತ ರಾಗಿದ್ದಾರೆ. ನಂತರದ ದಿನಗಳಲ್ಲಿ ನಾಟಕ ಶಿಕ್ಷಕರ ನೇಮಕಾತಿ ಮಾಡಿಲ್ಲ.

ಕರ್ನಾಟಕ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಸರ್ಕಾರಿ ಸಂಸ್ಥೆ ಯಾದ ರಂಗಾಯಣ `ಭಾರತೀಯ ರಂಗಶಿಕ್ಷಣ ಕೇಂದ್ರ’ ಎಂಬ ಹೆಸರಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಒಂದು ವರ್ಷದ ಡಿಪ್ಲೊಮಾ ತರಗತಿ ನಡೆ ಸುತ್ತಾ ಬಂದಿದ್ದು, ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ.
ಇದರ ಜೊತೆಗೆ ನೀನಾಸಂ, ಸಾಣೇಹಳ್ಳಿಯ ಶಿವಕುಮಾರ್ ರಂಗ ಪ್ರಯೋಗ ಶಾಲೆ, ಕುಂದಾಪುರ ರಂಗ ಶಾಲೆ ಸೇರಿದಂತೆ ಮೊದಲಾದ ಸಂಸ್ಥೆಗಳು ನಾಟಕ ಡಿಪ್ಲೊಮಾ ತರಗತಿ ನಡೆಸುತ್ತಿವೆ. ಇಲ್ಲಿಯೂ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ರಂಗಶಿಕ್ಷಣ ಪಡೆದು ಹೊರ ಬಂದಿದ್ದಾರೆ. ಇದೀಗ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಅಧಿ ಸೂಚನೆ ಹೊರಡಿಸಿದ್ದು, ಇದರಲ್ಲಿ ರಂಗ ಶಿಕ್ಷಕರನ್ನು (ನಾಟಕ ಶಿಕ್ಷಕರು) ಆದ್ಯತೆ ಮೇಲೆ ನೇಮಿಸಿ, ಈ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ವಿನಂತಿಸುತ್ತೇನೆ. ಇದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಂಗಭೂಮಿ ಮತ್ತು ನಾಟಕ ಮೂಲಕ ಕಲಿಕೆಗೆ ಆದ್ಯತೆ ನೀಡಿರುವ ಉದ್ದೇಶವೂ ಸಫಲವಾಗುತ್ತದೆ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

Translate »