ಎಸ್‍ಜೆಸಿಇಯಲ್ಲಿ 3 ದಿನಗಳ ಮೈಸೂರು ಸ್ಟಾರ್ಟ್‍ಅಪ್ ಪೆವಿಲಿಯನ್ ಆರಂಭ
ಮೈಸೂರು

ಎಸ್‍ಜೆಸಿಇಯಲ್ಲಿ 3 ದಿನಗಳ ಮೈಸೂರು ಸ್ಟಾರ್ಟ್‍ಅಪ್ ಪೆವಿಲಿಯನ್ ಆರಂಭ

August 6, 2022

ಮೈಸೂರು, ಆ. 5(ಆರ್‍ಕೆ)- ಮೈಸೂರಿನ ಎಸ್‍ಜೆಸಿಇ ಕ್ಯಾಂಪಸ್‍ನಲ್ಲಿ ಇಂದಿನಿಂದ 3 ದಿನಗಳ ಮೆಗಾ ಮೈಸೂರು ಸ್ಟಾರ್ಟ್‍ಅಪ್ ಪೆವಿಲಿ ಯನ್ ಮತ್ತು ಕಾನ್‍ಕ್ಲೇವ್ ಆರಂಭವಾಯಿತು.

ಎಸ್‍ಜೆಸಿಇ-ಸ್ಟೆಪ್, ಟೈ ಮೈಸೂರು, ಸಿಐಐಎಲ್, ವೈಐ, ಮೈಸೂರು ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾರ್ಟ್‍ಅಪ್ ಕರ್ನಾ ಟಕ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಎಕ್ಸೆಲ್‍ಸಾಫ್ಟ್, ಜೆಎಸ್‍ಎಸ್ ಮಹಾವಿದ್ಯಾಪೀಠ ಇವರ ಸಂಯುಕ್ತಾ ಶ್ರಯದಲ್ಲಿ ಅಮೃತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿರುವ ಸ್ಟಾರ್ಟ್ ಅಪ್ ಸಮಿಟ್ ಅನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಉದ್ಘಾಟಿಸಿದರು.
ಪ್ರೋಟಿಯನ್ ಕ್ಲೌಡ್ ಟೆಕ್ನಾಲಜೀಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಸುರೇಶ್ ಸೇಥಿ, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರ ಮಠ, ಟೈ ಮೈಸೂರು ಚಾಪ್ಟರ್ ಅಧ್ಯಕ್ಷರೂ ಆದ ಎಕ್ಸೆಲ್‍ಸಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಡಿ. ಸುಧನ್ವ ಧನಂಜಯ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಶ್ವ ಹಿಂದೂ ಪ್ರತಿಷ್ಠಾನ ಸಂಸ್ಥಾಪಕ ಸ್ವಾಮಿ ವಿಗ್ಯಾನಂದ ಅವರು ‘ಇಛಿoಟಿomiಛಿ ಈoಡಿum: ಇಟಿಣeಡಿ ಠಿಡಿeಟಿeuಡಿshiಠಿ ಚಿಟಿಜ Weಚಿಟಣh ಅಡಿeಚಿಣioಟಿs ಅeಟಿಣಡಿಚಿಟ ಣo Pಡಿosಠಿeಡಿous ಃhಚಿಡಿಚಿಣ’ ವಿಷಯ ಕುರಿತು ಮಾತನಾಡಿದರೆ, ಸ್ಕ್ಯಾನ್‍ರೇ ಟೆಕ್ನಾಲಜೀಸ್ ಮುಖ್ಯಸ್ಥ ವಿಶ್ವಪ್ರಸಾದ್ ಆಳ್ವ ಅವರು ‘ಒಥಿsuಡಿu ಗಿisioಟಿ 2030: Whಚಿಣ, Whಥಿ, Wheಟಿ ಜಿoಡಿ ಒಥಿsuಡಿu’ ಕುರಿತು ವಿಷಯ ಮಂಡಿಸಿದರು.

ಇದೇ ವೇಳೆ ಅಂಚೆ ಇಲಾಖೆ ಹೊರ ತಂದಿರುವ ವಿಶೇಷ ಅಂಚೆ ಲಕೋಟೆ (Sಠಿeಛಿiಚಿಟ Posಣಚಿಟ ಅoveಡಿ)ಯನ್ನು ಚೀಫ್ ಪೋಸ್ಟ್ ಮಾಸ್ಟರ್ ಎಸ್. ರಾಜೇಂದ್ರಪ್ರಸಾದ್ ಬಿಡುಗಡೆ ಮಾಡಿ ದರು. ಕ್ಲೌಡ್ ಪ್ರೊಟೇನಿಯಾ ಕಂಪನಿ ಸಿದ್ಧಪಡಿಸಿದ್ದ ಕ್ಲೌಡ್ ಟೆಕ್ನಾಲಜಿ ಲೋಗೋ ವನ್ನೂ ಇದೇ ಸಂದರ್ಭ ಬಿಡುಗಡೆ ಗೊಳಿಸ ಲಾಯಿತು. ಕೇಂದ್ರದ ಐಟಿ-ಬಿಟಿ, ಸೈನ್ಸ್ ಅಂಡ್ ಟೆಕ್ನಾಲಜಿ ಇಲಾಖೆ ಮುಖ್ಯಸ್ಥೆ ಡಾ. ಅಮಿತಾ ಗುಪ್ತ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ ಅವರು ಮೈಸೂರು ಸ್ಟಾರ್ಟ್ ಅಪ್ ಪೆವಿಲಿಯನ್ ಕುರಿತಂತೆ ವರ್ಚುಯಲ್ ಮೂಲಕ ಪಾಲ್ಗೊಂಡು, ಮಾತನಾಡಿದರು.

ಮೂರು ದಿನಗಳ ಕಾಲ ನಡೆಯುವ ಪೆವಿಲಿಯನ್ ಅಂಗವಾಗಿ ಏರ್ಪಡಿಸಿ ರುವ ವಿವಿಧ ಕಂಪನಿಗಳ ವಸ್ತುಪ್ರದರ್ಶನವನ್ನೂ ಗಣ್ಯರು ಇದೇ ವೇಳೆ ಉದ್ಘಾ ಟಿಸಿದರು. ಎಕ್ಸೆಲ್‍ಸಾಫ್ಟ್, ಸ್ಕ್ಯಾನ್‍ರೇ, ಎಸ್‍ಜೆಸಿಇ-ಸ್ಟೆಪ್, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಸಿಎಫ್‍ಟಿ ಆರ್‍ಐ, ಆಯುಷ್ ಇಲಾಖೆ, ವಿಗ್ಯಾನ ಲ್ಯಾಬ್ಸ್ ಇನ್ನೋವೇಷನ್ಸ್ ಪ್ರೈ. ಲಿ. ಸೇರಿದಂತೆ ಹಲವು ಕಂಪನಿಗಳು 150ಕ್ಕೂ ಹೆಚ್ಚು ಮಳಿಗೆಗಳನ್ನು ವಸ್ತುಪ್ರದ ರ್ಶನದಲ್ಲಿ ತೆರೆದಿವೆ. ಸಣ್ಣ, ಅತೀ ಸಣ್ಣ, ಮಧ್ಯಮ ಉದ್ಯಮಿಗಳು, ಹೂಡಿಕೆದಾರರು, ವಿದ್ಯಾರ್ಥಿಗಳು, ನವ ಉದ್ಯಮ ಆಕಾಂಕ್ಷಿ ಗಳು, ಇಂಡಸ್ಟ್ರೀ ಪಾರ್ಟ್‍ನರ್‍ಗಳು, ಇನ್ನೋವೇಟರ್ಸ್, ಸಂಶೋಧಕರು, ಮೆಂಟರ್ಸ್, ಇನ್‍ಕ್ಯುಬೇಟರ್‍ಗಳು ಪೆವಿಲಿಯನ್‍ನಲ್ಲಿ ಭಾಗವಹಿಸುತ್ತಿದ್ದಾರೆ. ನಂತರ ನಡೆಯ ಲಿರುವ 3 ದಿನಗಳ ಗೋಷ್ಠಿ, ಪ್ಯಾನಲ್ ಡಿಸ್ಕಷನ್, ಡಿಬೇಟ್‍ಗಳಲ್ಲಿ ಇ-ಕಾಮರ್ಸ್ ರೆವೆಲ್ಯೂಷನ್, ಸೈಬರ್ ಸೆಕ್ಯೂರಿಟಿ, ಕ್ಲೌಡ್ ಟೆಕ್ನಾಲಜಿ, ಡಿಜಿಟಲ್ ಟ್ರಾನ್ಸ್‍ಫರ್ಮೇ ಷನ್ ಸೇರಿದಂತೆ ವಿವಿಧ ವಿಷಯ ಕುರಿತು ನುರಿತ ವೃತ್ತಿಪರರು ಮಾತನಾಡುವರು.

Translate »