ಮೈತ್ರಿ ಯೋಜನೆಯಡಿ ಅರ್ಚಕರು, ಪುರೋಹಿತರ ಮದುವೆಯಾದರೆ ವಧುವಿಗೆ 3 ಲಕ್ಷ ರೂ. ಬಾಂಡ್
ಮೈಸೂರು

ಮೈತ್ರಿ ಯೋಜನೆಯಡಿ ಅರ್ಚಕರು, ಪುರೋಹಿತರ ಮದುವೆಯಾದರೆ ವಧುವಿಗೆ 3 ಲಕ್ಷ ರೂ. ಬಾಂಡ್

January 6, 2021

ಬೆಂಗಳೂರು: ಅರ್ಚಕರನ್ನು ಮದುವೆಯಾಗುವ ವಧುವಿಗೆ 3 ಲಕ್ಷ ರೂ. ಮೊತ್ತದ ಬಾಂಡ್ ನೀಡಲಾಗುತ್ತದೆ. ವಧುವಿನ ಹೆಸರಲ್ಲೇ ಮೈತ್ರಿ ಬಾಂಡ್ ವಿತರಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅರ್ಚಕರು, ಪುರೋಹಿತರ ಮದುವೆಯಾಗುವವರಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಮೈತ್ರಿ ಯೋಜನೆಯಡಿ 3 ಲಕ್ಷ ರೂ. ಬಾಂಡ್ ನೀಡಲಾಗುತ್ತದೆ. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಹೆಚ್. ಸಚ್ಚಿದಾನಂದ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಅರ್ಚಕರು ಮತ್ತು ಪೌರೋಹಿತ್ಯ ಮಾಡುವವರನ್ನು ಮದುವೆಯಾಗಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ವಧುವನ್ನು ಪೆÇ್ರೀತ್ಸಾಹಿಸಲು ಯೋಜನೆ ರೂಪಿಸಲಾಗಿದೆ. ಮೂರು ವರ್ಷಗಳ ನಂತರ ಫಲಾನುಭವಿಗಳು ಬಾಂಡ್ ಹಣ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ. ಮಂಡಳಿಯ ವತಿಯಿಂದ ಬಡ ಹೆಣ್ಣು ಮಕ್ಕಳ ಮದುವೆಗೆ 25 ಸಾವಿರ ರೂಪಾಯಿ ನೆರವು ನೀಡಲಾಗುವುದು. 5 ಎಕರೆಗಿಂತ ಕಡಿಮೆ ಜಮೀನು ಹೊಂದಿದವರಿಗೆ ಬೋರ್‍ವೆಲ್, ಟ್ರ್ಯಾಕ್ಟರ್ ಖರೀದಿಗೆ ಧನಸಹಾಯ ನೀಡಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ನೀಡಲು ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆಯಡಿ ನಗದು ಬಹುಮಾನ ನೀಡಲಾಗುತ್ತದೆ. ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Translate »