ರೈತ-ಕಾರ್ಮಿಕ ಕರಾಳ ತಿದ್ದುಪಡಿ ಕಾಯ್ದೆಗಳ ರದ್ದು ಮಾಡಲು ಆಗ್ರಹ
ಮೈಸೂರು

ರೈತ-ಕಾರ್ಮಿಕ ಕರಾಳ ತಿದ್ದುಪಡಿ ಕಾಯ್ದೆಗಳ ರದ್ದು ಮಾಡಲು ಆಗ್ರಹ

January 6, 2021

ದೆಹಲಿ ರೈತರ ಹೋರಾಟ ಬೆಂಬಲಿಸಿ ಎಐಯುಟಿಯುಸಿ ಪ್ರತಿಭಟನೆ
ಮೈಸೂರು, ಜ.5(ಆರ್‍ಕೆಬಿ)- ದೆಹಲಿ ಯಲ್ಲಿ ನಡೆಯುತ್ತಿರುವ ರೈತರ ಹೋರಾಟ ವನ್ನು ಬೆಂಬಲಿಸಿ ಹಾಗೂ ಕೇಂದ್ರ ಸರ್ಕಾ ರದ ಕಾರ್ಪೊರೇಟ್ ಪರ ಕರಾಳ ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋ ಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕಾರ್ಯಕರ್ತರು ಮೈಸೂರಿನ ರಾಮ ಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರೈತರು ದೆಹಲಿಯಲ್ಲಿ ಕೊರೆಯುವ ಚಳಿಯ ನಡುವೆಯೂ 38 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿ ಸದೆ ರೈತರನ್ನು ನಿರ್ಲಕ್ಷಿಸಿದೆ. ಇಲ್ಲಿಯವ ರೆಗೆ ಸರ್ಕಾರ 6-7 ಸುತ್ತು ರೈತ ನಾಯಕರೊಂದಿಗೆ ಮಾತುಕತೆ ನಡೆಸಿ ದ್ದರೂ ಯಾವುದೇ ಸೂಕ್ತ ಪರಿಹಾರ ಖಾತ್ರಿ ಪಡಿಸದೆ ಸುಮ್ಮನೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ದೇಶದ ಸಮಸ್ತ ರೈತಾಪಿ ಸಮುದಾಯ ಹಾಗೂ ದುಡಿಯುವ ವರ್ಗವು ಒಕ್ಕೊರಲಿನ ಬೇಡಿಕೆಯಂತೆ ತಕ್ಷಣವೇ ಕರಾಳ ಕಾಯ್ದೆ ಗಳನ್ನು ಬೇಷರತ್ತಾಗಿ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ದರು. ರಾಜ್ಯ ಸರ್ಕಾರದ ಎಪಿಎಂಸಿ ತಿದ್ದು ಪಡಿ ಕಾಯ್ದೆ, ಭೂಸ್ವಾಧೀನ ತಿದ್ದುಪಡಿ ಕಾಯ್ದೆಗಳು ಸೇರಿದಂತೆ ಕೇಂದ್ರದ ಎಪಿ ಎಂಸಿ ತಿದ್ದುಪಡಿ ಕಾಯ್ದೆ 2020, ಬೆಲೆ ಭರವಸೆ ಕೃಷಿ ಸೇವೆಗಳ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆಗಳನ್ನು ರದ್ದು ಪಡಿಸಬೇಕು. ಜೊತೆಗೆ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಜಂಟಿ ಕಾರ್ಯದರ್ಶಿ ಎನ್. ಮುದ್ದುಕೃಷ್ಣ, ಪುಟ್ಟರಾಜು, ಜಿಲ್ಲಾ ಸಮಿತಿ ಸದಸ್ಯರಾದ ಪಿ.ರಾಜು, ರವಿ, ಮಹ ದೇವಮ್ಮ, ಹರೀಶ್, ಸತೀಶ್, ಲೋಕೇಶ್, ವಿಜಯಕುಮಾರ್, ರಾಘವೇಂದ್ರ ಇನ್ನಿ ತರರು ಭಾಗವಹಿಸಿದ್ದರು.

 

 

Translate »