ಇಂದಿನಿಂದ ರೈಲು ಪ್ರಯಾಣ ದುಬಾರಿ
ಮೈಸೂರು

ಇಂದಿನಿಂದ ರೈಲು ಪ್ರಯಾಣ ದುಬಾರಿ

January 6, 2021

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿರುವ ರೈಲುಗಳ ಕಾರ್ಯಾಚರಣೆಯನ್ನು ಭಾರತೀಯ ರೈಲ್ವೆಯು ಶೀಘ್ರದಲ್ಲೇ ಪುನರಾಂ ಭಿಸಲಿದೆ. ಅದಕ್ಕೂ ಮುನ್ನ ರೈಲು ಇಲಾಖೆ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ್ದು, ಜ.6ರಿಂದ ಹಲವು ರೈಲುಗಳ ಪ್ರಯಾಣ ದರ ಏರಿಕೆ ಮಾಡಲಾಗುತ್ತಿದೆ. ಇನ್ನು ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಸೀಟುಗಳ ಕಾಯ್ದಿರಿಸುವುದು ಕಡ್ಡಾಯವಾಗಿದ್ದು, ಆನ್‍ಲೈನ್‍ನಲ್ಲಿ ರೈಲು ಬರುವ 30 ನಿಮಿಷ ಮೊದಲು ಸೀಟುಗಳ ಕಾಯ್ದಿರಿಸಬಹುದು. ಪ್ರಯಾಣಿಕರು ಪ್ರಯಾಣಿಸ ಬಯಸುವ ದೂರವನ್ನು ಲೆಕ್ಕಿಸದೆ, ಸೀಟುಗಳ ಕಾಯ್ದಿರಿಸುವುದು ಕಡ್ಡಾಯವಾಗಿರುತ್ತದೆ. ಹಾಗಾಗಿ ಎಲ್ಲಾ ಟಿಕೆಟ್ ದರಗಳಲ್ಲಿ 15 ರೂಪಾಯಿಗಳ ರಿಸರ್ವ್ ಶುಲ್ಕವನ್ನು ಸೇರಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಉಧಂಪುರಕ್ಕೆ ರೈಲು ಸಂಚಾರವನ್ನೂ ರೈಲ್ವೆ ಇಲಾಖೆ ಆರಂಭಿಸಿದೆ. ಈ ರೈಲುಗಳು ಫೆ.1ರಿಂದ ಕಾರ್ಯಾರಂಭ ಮಾಡಿದ ನಂತರ ಪಾಟ್ನಾ, ದುರ್ಗ್, ವಾರಣಾಸಿ, ಅಜ್ಮೀರ್ ಮತ್ತು ನವದೆಹಲಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

Translate »