2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪಟ್ಟಿ ಬಿಡುಗಡೆ
ಮೈಸೂರು

2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪಟ್ಟಿ ಬಿಡುಗಡೆ

January 5, 2021

ಚಾಮರಾಜನಗರ, ಜ.4(ಎಸ್‍ಎಸ್)- ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಜಾನಪದ ತಜ್ಞ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಬಿಡುಗಡೆಗೊಳಿಸಿದರು. ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹೊರ ಜಿಲ್ಲೆಯಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಮೈಸೂರಿನ ಕುಮಾರಸ್ವಾಮಿ ಅವರಿಗೆ ಕಂಸಾಳೆ ಹಾಡುಗಾರಿಕೆಯಲ್ಲಿ, ಕೊಡಗಿನ ಕುಡಿಯರ ಕೆ.ಪೊನ್ನಪ್ಪ ಅವರಿಗೆ ಬಾಳೋಪಾಟ್‍ನಲ್ಲಿ, ಮಂಡ್ಯದ ಭೂಮಿಗೌಡ ಅವರಿಗೆ ಕೋಲಾಟದಲ್ಲಿ, ಚಾಮರಾಜನಗರದ ಹೊನ್ನಮ್ಮ ಅವರಿಗೆ ಸೋಬಾನೆ ಪದದಲ್ಲಿ ಹಾಗೂ ಹಾಸನದ ಗ್ಯಾರಂಟಿ ರಾಮಣ್ಣ ಅವರಿಗೆ ಹಾಡು ಗಾರಿಕೆಯಲ್ಲಿ ಪ್ರಶಸ್ತಿ ಲಭಿಸಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪ್ರಸಕ್ತ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರಿಗೆ ಹಾಗೂ ಇಬ್ಬರು ಜಾನಪದ ತಜ್ಞರಿಗೆ ವಾರ್ಷಿಕ ಗೌರವ ಪ್ರಶಸ್ತಿ ನೀಡ ಲಾಗುವುದು. ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ ತಲಾ 25,000 ರೂ.ಗಳೊಂದಿಗೆ ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ 50 ಸಾವಿರ ರೂ.ಗಳ ಪ್ರಶಸ್ತಿ ಮೊತ್ತದ ಜೊತೆಗೆ ಪುರಸ್ಕೃತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದರು.

ಜಾನಪದ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಚಾಮರಾಜ ನಗರದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಆಯೋಜಿಸಲಾಗು ವುದು. ಸಮಾರಂಭದ ದಿನಾಂಕ ನಿಗದಿಯಾಗಬೇಕಿದೆ. ಸಮಾರಂಭಕ್ಕೆ ಜಿಲ್ಲಾಡಳಿತದ ಸಹಕಾರ ಅಗತ್ಯವೆಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಾತಾ ಬಿ.ಮಂಜಮ್ಮ ಜೋಗತಿ ಅವರು ತಿಳಿಸಿದರು.

ಸ್ವಸ್ಥ ಸಮಾಜಕ್ಕಾಗಿ ಹಸಿವು, ಅವಮಾನ, ಬಡತನವನ್ನು ಸಹಿಸಿಕೊಂಡು ಅಕ್ಷರ ಬಾರದೇ ಇದ್ದರೂ ಬಾಯಿಂದ ಬಾಯಿಗೆ ನೆಲ ಮೂಲ ಸಂಸ್ಕøತಿಯನ್ನು ತನ್ನ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ 1980 ರಿಂದ ಕರ್ನಾ ಟಕ ಜಾನಪದ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ಜಾನಪದ ಕಲೆಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡಿ ರುವ ಜನಪದ ಕಲಾವಿದರಿಗೆ ಜಾನಪದ ಕ್ಷೇತ್ರ ತಜ್ಞರಿಗೆ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಕಾಡೆಮಿಯ 1980ರಿಂದ 2019ರ ಸಾಲಿನವರೆಗೆ 963 ಜಾನಪದ ಕಲಾವಿದರು, 105 ವಿದ್ವಾಂಸರು ಸೇರಿದಂತೆ ಒಟ್ಟು 1068 ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಾನಪದ ಅಕಾಡೆಮಿಯ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಕೆ.ಗಿರೀಶ್ ಹಾಜರಿದ್ದರು.

ಪ್ರಶಸ್ತಿಗೆ ಆಯ್ಕೆಯಾದವರ ವಿವರ: ಬೆಂಗಳೂರು ಜಿಲ್ಲೆ ಎಂ.ಕೆ.ಸಿದ್ದರಾಜು (ಜಾನಪದ ಗಾಯನ), ಬೆಂಗ ಳೂರು ಗ್ರಾಮಾಂತರ ಜಿಲ್ಲೆ ಹೊನ್ನಗಂಗಮ್ಮ (ಸೋಬಾನೆ ಪದ), ರಾಮನಗರ ಜಿಲ್ಲೆ ತಿಮ್ಮಯ್ಯ (ತಮಟೆ ವಾದನ), ಕೋಲಾರ ಜಿಲ್ಲೆ ಕೆ.ಎನ್.ಚಂಗಪ್ಪ (ಭಜನೆ ತತ್ವಪದ), ಚಿಕ್ಕಬಳ್ಳಾಪುರ ಜಿಲ್ಲೆ ನಾರಾಯಣಪ್ಪ (ಕೀಲು ಕುದುರೆ), ತುಮಕೂರು ಜಿಲ್ಲೆ ಸಿ.ವಿ.ವೀರಣ್ಣ (ವೀರಭದ್ರನ ಕುಣಿತ), ದಾವಣಗೆರೆ ಜಿಲ್ಲೆ ಭಾಗ್ಯಮ್ಮ (ಸೋಬಾನೆ ಹಾಡು ಗಾರಿಕೆ), ಚಿತ್ರದುರ್ಗ ಜಿಲ್ಲೆ ಕೆಂಚಮ್ಮ (ಮದುವೆ ಹಾಡು), ಶಿವಮೊಗ್ಗ ಜಿಲ್ಲೆ ಕೆ.ಯುವರಾಜು (ಜಾನಪದ ಹಾಡು ಗಾರಿಕೆ), ಮೈಸೂರು ಜಿಲ್ಲೆ ಕುಮಾರಸ್ವಾಮಿ (ಕಂಸಾಳೆ ಹಾಡುಗಾರಿಕೆ), ಮಂಡ್ಯ ಜಿಲ್ಲೆ ಭೂಮಿಗೌಡ (ಕೋಲಾಟ), ಹಾಸನ ಜಿಲ್ಲೆ ಗ್ಯಾರಂಟಿ ರಾಮಣ್ಣ (ಹಾಡುಗಾರಿಕೆ), ಚಿಕ್ಕಮಗಳೂರು ಜಿಲ್ಲೆ ಎಂ.ಸಿ.ಭೋಗಪ್ಪ (ಚೌಡಿಕೆ ಪದ), ದಕ್ಷಿಣ ಕನ್ನಡ ಜಿಲ್ಲೆ ಗೋಪಾಲಕೃಷ್ಣ ಬಂಗೇರಾಮಧ್ವ (ಗೊಂಬೆ ಕುಣಿತ), ಉಡುಪಿ ಜಿಲ್ಲೆ ರಮೇಶ್ ಕಲ್ಮಾಡಿ (ಕರಗ ಕೋಲಾಟ), ಕೊಡಗು ಜಿಲ್ಲೆ ಕೆ.ಕೆ.ಪೆÇನ್ನಪ್ಪ (ಬಾಳೋಪಾಟ್), ಚಾಮರಾಜನಗರ ಜಿಲ್ಲೆ ಹೊನ್ನಮ್ಮ (ಸೋಬಾನೆ ಪದ), ಬೆಳಗಾವಿ ಜಿಲ್ಲೆ ಮುತ್ತಪ್ಪ ಅಲ್ಲಪ್ಪ ಸವದಿ (ತತ್ವಪದ), ಧಾರವಾಡ ಜಿಲ್ಲೆ ಮಲ್ಲೇಶಪ್ಪ ಫಕ್ಕೀ ರಪ್ಪ ತಡಸದ (ತತ್ವಪದ), ವಿಜಯಪುರ ಜಿಲ್ಲೆ ಸುರೇಶ ರಾಮಚಂದ್ರ ಜೋಶಿ (ಡೊಳ್ಳಿನ ಹಾಡುಗಾರಿಕೆ), ಬಾಗಲ ಕೋಟೆ ಜಿಲ್ಲೆ ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ (ತತ್ವಪದ ಮತ್ತು ಭಜನೆ), ಉತ್ತರ ಕನ್ನಡ ಜಿಲ್ಲೆ ಸಹದೇವಪ್ಪ ಈರಪ್ಪ ನಡಗೇರಾ (ಲಾವಣಿ ಪದ), ಹಾವೇರಿ ಜಿಲ್ಲೆ ಬಸವರಾಜ ತಿರುಕಪ್ಪ ಶಿಗ್ಗಾಂವಿ (ತತ್ವಪದ), ಗದಗ ಜಿಲ್ಲೆ ಮುತ್ತಪ್ಪ ರೇವಣಪ್ಪ ರೋಣದ (ಪುರುವಂತಿಕೆ), ಕಲಬುರಗಿ ಜಿಲ್ಲೆ ಸಾಯ ಬಣ್ಣ (ಹಲಗೆ ವಾದನ), ಬೀದರ ಜಿಲ್ಲೆ ವೈಜಿನಾಥಯ್ಯ ಸಂಗಯ್ಯಸ್ವಾಮಿ (ಚಕ್ರಿ ಭಜನೆ), ರಾಯಚೂರು ಜಿಲ್ಲೆ ಜಂಬಣ್ಣ (ಹಗಲು ವೇಷ), ಕೊಪ್ಪಳ ಜಿಲ್ಲೆ ತಿಪ್ಪಣ ಅಂಬಾಜಿ ಸುಗತೇಕರ (ಗೋಂದಲಿಗರು), ಬಳ್ಳಾರಿ ಜಿಲ್ಲೆ ಗೋಂದಳಿ ರಾಮಪ್ಪ (ಗೋಂದಳಿ ಪದ), ಯಾದವಗಿರಿ ಜಿಲ್ಲೆ ಗೋಗಿ ಬಸವಲಿಂಗಮ್ಮ (ಮದುವೆ ಹಾಡು) ಇವರು ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಾರ್ಷಿಕ ಗೌರವ ಜಾನಪದ ತಜ್ಞ ಪ್ರಶಸ್ತಿಗೆ ಇಬ್ಬ ರನ್ನು ಆಯ್ಕೆ ಮಾಡಲಾಗಿದೆ. ಜಾನಪದ ತಜ್ಞರಾದ ದಕ್ಷಿಣ ಕನ್ನಡ ಜಿಲ್ಲೆಯ ಡಾ.ಗಾಯತ್ರಿ ನಾವಡ ಅವರು ಡಾ.ಜೀ.ಶಂ. ಪ್ರಶಸ್ತಿಗೆ ಮತ್ತು ಕಲಬುರ್ಗಿ ಜಿಲ್ಲೆಯ ಬಸವರಾಜು ಸಬರದ ಅವರು ಡಾ.ಗದ್ದಗೀ ಮಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Translate »