ರೈತರಿಗೆ ಹಣ ನೀಡುವ ಬದಲು ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಿ
ಮೈಸೂರು

ರೈತರಿಗೆ ಹಣ ನೀಡುವ ಬದಲು ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಿ

January 5, 2021

ಮೈಸೂರು,ಜ.4(ಎಂಕೆ)-ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿರುವ ಸಾಲ ಮೂರು ಪಟ್ಟು ಹೆಚ್ಚಾಗಿದ್ದು, ಬಡ್ಡಿ ಕಟ್ಟುವುದೇ ಕಷ್ಟ ವಾಗಿದೆ. ಮುಂದಿನ ಮೂರು ವರ್ಷಗಳ ವರೆಗೆ ಯಾವುದೇ ಅಭಿವೃದ್ಧಿಯನ್ನು ನಿರೀ ಕ್ಷಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರೈತ ಕುಟುಂಬಗಳಿಗೆ ವರ್ಷಕ್ಕೆ ಐದಾರು ಸಾವಿರ ರೂ. ಹಣ ನೀಡುವ ಬದಲು ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಿದರೆ ರೈತರ ಬದುಕು ಹಸನಾಗುತ್ತದೆ ಎಂದು ವಿಶ್ರಾಂತ ಡಿಜಿಪಿ ಶಂಕರ ಬಿದರಿ ಅಭಿ ಪ್ರಾಯಪಟ್ಟರು.

ಮೈಸೂರು ವಿಜಯನಗರ 1ನೇ ಹಂತದಲ್ಲಿ ರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಸೋಮ ವಾರ ಜಿಲ್ಲಾ ಕಸಾಪ, ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಆಯೋ ಜಿಸಿದ್ದ ‘ಮರೆಯಲಾಗದ ಮಹನೀಯರು ನವಕರ್ನಾಟಕ ಶಿಲ್ಪಿ ಎಸ್.ನಿಜಲಿಂಗಪ್ಪ-ಒಂದು ನೆನಪು’ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಬೇರೆ ರಾಜ್ಯ ದಲ್ಲಿ ರೈತರಿಗೆ ಹಣ ನೀಡುತ್ತಿದ್ದಾರೆ. ನಮ್ಮಲ್ಲಿ ನೀಡಬಾರದೇಕೆ ಎಂದು ವಿವಿಧ ಪಿಂಚಣಿ ಯೋಜನೆಗಳಡಿ ಪಾವತಿಸಬೇಕಾದ ಹಣ ವನ್ನು ಬಾಕಿ ಉಳಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಹಾಯ ಧನ ನೀಡುತ್ತಿವೆ. ಹಾಗೆ ನೋಡಿದರೆ, ಕೃಷಿ, ಕೇಂದ್ರ ಸರ್ಕಾರದ ವಿಷಯವೇ ಅಲ್ಲ. ಸುಮ್ಮನೇ ಹಣ ಕೊಡುವುದನ್ನು ಬಿಟ್ಟು ಪ್ರತಿ ಕುಟುಂಬಕ್ಕೊಂದು ಉದ್ಯೋಗ ನೀಡ ಬೇಕು ಎಂದು ಒತ್ತಾಯಿಸಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭ ದಲ್ಲಿ ‘ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ’ ಎಂದು ಸುಭಾಷ್ ಚಂದ್ರ ಬೋಸ್ ಹೇಳಿದ್ದರು. ಇಂದಿನ ಪರಿಸ್ಥಿತಿಯಲ್ಲಿ ಬೆವರು ಸುರಿಸಿ ಭೂಮಿ ತಾಯಿಯನ್ನು ತಂಪಾಗಿಸಿದರೆ ನಿಮಗೆ ಸಂವೃದ್ಧಿ, ಸಂಪತ್ತು ಕೊಡುತ್ತೇವೆ ಎಂದು ರೈತರಿಗೆ ಇಲ್ಲಿಯವರೆಗೆ ಯಾವ ನಾಯಕರು ಭರವಸೆ ನೀಡಲಿಲ್ಲ. ಅಂತಹ ನಾಯಕರು ಇಲ್ಲವೇ ಇಲ್ಲ. ಅಧಿಕಾರದ ಆಸೆ, ಅಪ್ರಿಯರಾಗುತ್ತೇವೆ ಎಂಬ ಕಾರಣಕ್ಕೆ ಜನರಿಗೆ ದುಡಿಯಿರಿ ಎಂದು ಯಾರು ಹೇಳುತ್ತಿಲ್ಲ. ದುಡಿಯುವುದಕ್ಕೆ ಪ್ರೇರಣೆಯನ್ನು ನೀಡು ತ್ತಿಲ್ಲ. ದುಡಿದರಷ್ಟೇ ಕಷ್ಟಗಳಿಂದ ಹೊರ ಬರಲು ಸಾಧ್ಯ ಎಂದರು.

ದೇಶ, ರಾಜ್ಯ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾಗಿಲ್ಲ ಎಂದು ಬರೀ ರಾಜಕಾರಣಿಗಳನ್ನು ದೂರುವುದಲ್ಲ. ಈ ವಿಚಾರದಲ್ಲಿ ದೇಶದ 135 ಕೋಟಿ ಜನರು ಭಾಗಿಯಾಗಿದ್ದಾರೆ. ನಾವು ಅಪ್ರಮಾಣಿಕ ರಾಗಿದ್ದೇವೆ. ನಮ್ಮ ಜವಾಬ್ದಾರಿಯನ್ನು ಸರಿ ಯಾಗಿ ನಿರ್ವಹಿಸಿಲ್ಲ. ಈ ನಿಟ್ಟಿನಲ್ಲಿ ಜನರು ಬದಲಾಗಬೇಕು. ದೇಶಕ್ಕೆ ತಮ್ಮದೇ ಪ್ರಾಮಾ ಣಿಕ ಕೊಡುಗೆಯನ್ನು ನೀಡಬೇಕು. ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಹುಣಸೆ ಬೀಜ ಕೊಟ್ಟು: ಚುನಾವಣೆಗಳನ್ನು ನಡೆಸಲು ನೂರಾರು ಕೋಟಿ ರೂ. ಖರ್ಚಾ ಗುತ್ತದೆ. ಒಬ್ಬರು-ಮತ್ತೊಬ್ಬರು ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಈ ವೇಳೆ ಪಕ್ಷ ಬದ ಲಾಯಿಸುವವರನ್ನು ಮತ್ತೊಂದು ಪಕ್ಷದವರು ಹುಣಸೆ ಬೀಜ ಕೊಟ್ಟು ಖರೀದಿ ಮಾಡು ವರೇ? ಯಾರೋ ಒಬ್ಬರು ತಮ್ಮ ಸಾಲ ತೀರಿಸಲು ಬೇರೆ ಪಕ್ಷಕ್ಕೆ ಸೇರಿದರು ಎಂದಿತ್ತು. ಇಂತಹವರು ಕೊನೆಯಲ್ಲಿ ಯಾವ ಗಂಗಾ, ಯಮುನಾ, ಕಾವೇರಿ ನದಿಗೂ ಬೀಳದೆÀ ಬೆಂಗಳೂರಿನ ವೃಷಭಾ ನದಿಗೆ ಬೀಳುತ್ತಾರೆ ಎಂದು ವ್ಯಂಗ್ಯವಾಡಿದರು.

ಸ್ವಕ್ಷೇತ್ರ ಮಾತ್ರ: ಶಾಸಕರು ಮತ್ತು ಸಚಿವರಿಗೆ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಿಟ್ಟು ಬೇರೆ ಕ್ಷೇತ್ರದ ಸಮಸ್ಯೆಗಳ ಅರಿವಿಲ್ಲ. ಇತ್ತೀಚೆಗೆ ಬಂದ ಎಲ್ಲ ಮುಖ್ಯಮಂತ್ರಿಗಳು ಹೆಚ್ಚಿನ ಹಣವನ್ನು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡಿದರು. ಆದರೆ, ನಿಜಲಿಂಗಪ್ಪ ಅವರು ಎಂದೂ ಈ ರೀತಿ ತಮ್ಮ ಸ್ವಂತ ಕ್ಷೇತ್ರದ ಕಡೆಗೆ ಪಕ್ಷಪಾತ ಮಾಡಲಿಲ್ಲ. ಇಂತಹ ರಾಜಕಾರಣಿಗಳು ಈಗ ವಿರಳಾತಿವಿರಳ ಎಂದು ಹೇಳಿದರು.

ಎಸ್.ನಿಜಲಿಂಗಪ್ಪ ಅವರು, ನಾಡು ಕಂಡ ಶ್ರೇಷ್ಟ ರಾಜಕಾರಣಿ. ರಾಜ್ಯದ ಮುಖ್ಯಮಂತ್ರಿ ಯಾಗಿದ್ದರೂ ಅವರ ಬಳಿ ಒಂದು ಮನೆ ಹೊರತು ಬೇರೆನೂ ಇರಲಿಲ್ಲ. ಆಸ್ತಿ-ಅಂತ ಸ್ತಿನ ವ್ಯಾಮೋಹವಿರಲಿಲ್ಲ. ಯಾವ ತತ್ವ-ಆದರ್ಶಗಳನ್ನು ಪಾಲಿಸಬೇಕು ಎನ್ನುತ್ತೇ ವೆಯೋ ಅಂತಹ ತತ್ವಗಳನ್ನು ಚಾಚೂ ತಪ್ಪದೆ ಪಾಲಿಸಿದರು. ಗ್ರಾಮೀಣ ಮತ್ತು ನಗರ ಪ್ರದೇಶದ ಜನರನ್ನು ಒಂದೇ ರೀತಿ ಯಲ್ಲಿ ಕಂಡವರು. ನಗರ ಪ್ರದೇಶದವ ರಂತೆ ಗ್ರಾಮೀಣ ಜನರು ಆರ್ಥಿಕವಾಗಿ ಸಬಲರಾಗಿರಬೇಕು ಎಂದು ಕನಸು ಕಂಡವರು ಎಂದು ಬಣ್ಣಿಸಿದರು.

ಸನ್ಮಾನ: ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರಾದ ವೈ.ಸಿ.ರೇವಣ್ಣ, ಡಾ. ಎಂ.ಸೋಮಶೇಖರಯ್ಯ, ಬಿ.ಲಿಂಗಯ್ಯ ಅವರನ್ನು ಶಾಸಕ ಎಲ್.ನಾಗೇಂದ್ರ ಸನ್ಮಾ ನಿಸಿ ಅಭಿನಂದಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಪಿ.ನಾಡಗೌಡ ಅವರು ಎಸ್.ನಿಜಲಿಂಗಪ್ಪ ಅವರೊಂದಿಗೆ ಒಡನಾಟ ಕುರಿತು ಮಾತನಾಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನದ ಅಧ್ಯಕ್ಷ ಕೆ.ಪ್ರಕಾಶ್, ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಜಿಲ್ಲಾ ಕಸಾಪ ಕಾರ್ಯದರ್ಶಿ ಕೆ.ಎಸ್.ನಾಗ ರಾಜು, ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಜಿ.ಡಿಂಡಿಮಶಂಕರ್ ಮತ್ತಿತರರು ಉಪಸ್ಥಿತರಿದ್ದರು.

 

 

Translate »