ಇನ್ಫೋಸಿಸ್ ಫೌಂಡೇಷನ್‍ನಿಂದ 30 ಕೋಟಿ   ವೆಚ್ಚದಲ್ಲಿ ಹೆಬ್ಬಾಳು ಕೆರೆ ಆಗಿದೆ ಸುಂದರ ತಾಣ
ಮೈಸೂರು

ಇನ್ಫೋಸಿಸ್ ಫೌಂಡೇಷನ್‍ನಿಂದ 30 ಕೋಟಿ  ವೆಚ್ಚದಲ್ಲಿ ಹೆಬ್ಬಾಳು ಕೆರೆ ಆಗಿದೆ ಸುಂದರ ತಾಣ

December 29, 2020

ಮೈಸೂರು, ಡಿ.28(ಪಿಎಂ)- ಹಕ್ಕಿಗಳ ಕಲರವ, ಪ್ರಶಾಂತಮಯ ವಾತಾವರಣ ಈಗ ಹೆಬ್ಬಾಳು ಕೆರೆಯಲ್ಲಿ ಮತ್ತೆ ಮೂಡಿದೆ. ಜೊತೆಗೆ ವಾಕಿಂಗ್ ಹಾಗೂ ಜಾಗಿಂಗ್ ಪಾತ್ ಸೇರಿ ಹಲವು ಆಕರ್ಷಣೆಗಳೊಂ ದಿಗೆ ಅಭಿವೃದ್ಧಿಗೊಂಡು ಜನಾಕರ್ಷ ಣೆಯ ತಾಣವಾಗಿ ಮಾರ್ಪಟ್ಟಿದೆ.

ಇನ್ಫೋಸಿಸ್ ಫೌಂಡೇಷನ್ ತನ್ನ ಸಿಎಸ್‍ಆರ್ ನಿಧಿಯ 30 ಕೋಟಿ ರೂ. ವೆಚ್ಚ ದಲ್ಲಿ ಹೆಬ್ಬಾಳು ಕೆರೆಗೆ ಉತ್ತಮ ರೀತಿ ಕಾಯ ಕಲ್ಪ ನೀಡಿದೆ. ಸುಮಾರು 48 ಎಕರೆ ಪ್ರದೇಶ ದಲ್ಲಿರುವ ಹೆಬ್ಬಾಳು ಕೆರೆ ಈಗ ಆಕರ್ಷಕ ವಾಗಿ ವಿನ್ಯಾಸಗೊಂಡಿದೆ. ಕೆರೆ ಏರಿ ಅಭಿವೃದ್ಧಿ ಪಡಿಸಿ ಕಬ್ಬಿಣದ ಬೇಲಿ ಅಳವಡಿಸಲಾಗಿದೆ. ಜೊತೆಗೆ ಬೇಲಿ ಪಕ್ಕದಲ್ಲಿ ಕೆರೆ ಸುತ್ತಲು ವಾಕಿಂಗ್ ಹಾಗೂ ಜಾಗಿಂಗ್‍ಗೆ ಅನುವಾಗು ವಂತೆ ಮಾರ್ಗ (ಪಾತ್) ನಿರ್ಮಿಸಲಾಗಿದೆ.

ವಾಯುವಿಹಾರಿಗಳು ಕುಳಿತುಕೊಳ್ಳಲು ಅಲ್ಲಲ್ಲಿ ಕಲ್ಲು ಕುರ್ಚಿಗಳನ್ನು ನಿರ್ಮಿಸಲಾ ಗಿದೆ. ಕೆಲವೆಡೆ ಶೆಲ್ಟರ್ ನಿರ್ಮಿಸಿ ವಿಶ್ರಾಂ ತಿಗೂ ಅವಕಾಶ ಕಲ್ಪಿಸಲಾಗಿದೆ. ಹಸರೀ ಕರಣಕ್ಕೆ ಆದ್ಯತೆ ನೀಡಲಾಗಿದ್ದು, ಕೆರೆ ಹೊರಾ ವರಣದಲ್ಲೂ ಹೆಚ್ಚುವರಿ ಆಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ವಾಕಿಂಗ್ ಪಾತ್ ಬದಿ ಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿ ಸಲು ಕಂಬಗಳನ್ನು ಹಾಕಲಾಗಿದ್ದು, ದೀಪ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.

ನಾನಾ ಬಗೆಯ ವಲಸೆ ಪಕ್ಷಿಗಳಿಗೆ ಆತಿಥ್ಯ ನೀಡುವ ಕೆರೆ ಇದಾಗಿದ್ದು, ಸುಮಾರು 165ಕ್ಕೂ ಹೆಚ್ಚಿನ ವಿವಿಧ ಜಾತಿಯ ಪಕ್ಷಿಗಳು ಇಲ್ಲಿ ನೆಲೆ ಕಂಡಿವೆ ಎಂಬುದು ಪಕ್ಷಿ ತಜ್ಞರ ಹೇಳಿಕೆ. ಹೆಬ್ಬಾಳು ಕೆರೆಯ ಆವರಣದಲ್ಲಿ ವಿಹರಿಸಲು ಎರಡು ದ್ವಾರಗಳನ್ನು ನಿರ್ಮಿಸಲಾಗಿದೆ. ದ್ವಾರ 1ರ ಮೂಲಕ ಪ್ರವೇಶ ಪಡೆದರೆ ಸನಿಹದಲ್ಲೇ ಕೆರೆ ಇಳಿಯಲು ಮೆಟ್ಟಿಲು ವ್ಯವಸ್ಥೆ ಮಾಡಲಾಗಿದೆ. ಮೆಟ್ಟಿಲುಗಳಿಗೆ ಎರಡೂ ಬದಿಯಲ್ಲಿ ಆಕರ್ಷಕವಾದ ಕಂಬಗಳನ್ನು ನಿಲ್ಲಿಸಲಾಗಿದ್ದು, ಜೊತೆಗೆ ಇಲ್ಲಿ ಎರಡೂ ಆನೆಗಳ ಪ್ರತಿಮೆ ನಿರ್ಮಿಸಿ ಆಕರ್ಷಣೆಗೆ ಒತ್ತು ನೀಡಲಾಗಿದೆ.

ಸೀವೆಜ್ ಟ್ರೀಟ್‍ಮೆಂಟ್ ಪ್ಲಾಂಟ್: ಕೆರೆ ಪಕ್ಕದಲ್ಲಿ ಸೀವೆಜ್ ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ನಿರ್ಮಿಸಲಾಗಿದ್ದು, ಇದರ ಅಂತಿಮ ರೂಪುರೇಷೆ ಕೊಡುವ ಕಾರ್ಯ ಪ್ರಗತಿ ಯಲ್ಲಿದೆ. ಈಗಾಗಲೇ ಸುತ್ತಮುತ್ತ ಬಡಾ ವಣೆ ಹಾಗೂ ಕಾರ್ಖಾನೆಗಳ ಒಳಚರಂಡಿ ನೀರನ್ನು ಇಲ್ಲಿ ಶುದ್ಧೀಕÀರಿಸಿ ಕೆರೆಗೆ ಬಿಡ ಲಾಗುತ್ತಿದೆ. ಈ ನಡುವೆ ಮಳೆ ನೀರು ಕೆರೆಗೆ ಹರಿದು ಬರಲು ಇರುವ ಎರಡು ಕಾಲುವೆ ಗಳ ಮೂಲಕ ಸ್ಥಳೀಯ ಕೆಲ ಕೈಗಾರಿಕೆಗಳ ಹಾಗೂ ಬಡಾವಣೆಗಳ ಮಲೀನ ನೀರು ನೇರವಾಗಿ ಕೆರೆ ಒಡಲು ಸೇರುವಂತಾ ಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನೆಟ್ ಫಿಲ್ಟರ್ ಅಳವಡಿಸಲಾಗಿದೆ. ಆದರೆ ಇದು ಕೊಳಚೆ ಹಾಗೂ ಮಾಲಿನ್ಯದ ನೀರನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಅನಿವಾರ್ಯವಾಗಲಿದೆ. ಇಲ್ಲವಾದರೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಅಭಿವೃದ್ಧಿಪಡಿಸಿದರೂ ಮತ್ತೆ ಕೆರೆ ಈ ಹಿಂದಿನ ದುಸ್ಥಿತಿಗೆ ತಲುಪಲಿದೆ.

ಕೆರೆ ಇತಿಹಾಸ: ಒಂದು ಕಾಲದಲ್ಲಿ ಹೆಬ್ಬಾಳು ಕೆರೆ ಪ್ರಾಕೃತಿಕ ಸೌಂದರ್ಯ ದೊಂದಿಗೆ ಜನಸಮುದಾಯದ ಜೀವ ಜಲವಾಗಿತ್ತು. ಮೈಸೂರು ಹೊರ ವಲಯ ದಲ್ಲಿರುವ ಹೆಬ್ಬಾಳು ಒಂದು ಕಾಲಕ್ಕೆ ಶ್ರೀಮಂತ ಸಂಸ್ಥಾನವಾಗಿತ್ತು. ಆ ವೇಳೆ ಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಪಾಳೇಗಾರರು ಜನತೆ ಜೀವಜಲಕ್ಕಾಗಿ ಹೆಬ್ಬಾಳು ಕೆರೆ ನಿರ್ಮಿಸಿದ್ದರು. ಆಧುನಿಕ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಕೊಳವೆ ಬಾವಿಗಳು ಮತ್ತು ಮನೆಯ ಕೊಳಾಯಿಗಳು ಕೆರೆ ನಿರ್ಲಕ್ಷ್ಯಕ್ಕೆ ಕಾರಣವಾಯಿತು. ಜೊತೆಗೆ ಒಳಚರಂಡಿ ಗಳು ಕೊಳಚೆ ನೀರು ಇದರ ಅಂತರಂಗ ತಲುಪುವಂತಾಯಿತು. ಕೈಗಾರಿಕೆಗಳ ಹಾವಳಿ ಹೆಚ್ಚಾಗಿ ಕೆರೆ ವಿಸ್ತೀರ್ಣ ಕಡಿಮೆ ಯಾಯಿತು ಎನ್ನುತ್ತಾರೆ ಹೆಬ್ಬಾಳಿನ ಹಿರಿಯ ನಾಗರಿಕರು. ಇದೀಗ ಇನ್ಫೋ ಸಿಸ್ ಫೌಂಡೇಷನ್‍ನಿಂದ ಕೆರೆ ಅಭಿ ವೃದ್ಧಿಯ ಕನಸು ನನಸಾಗಿದೆ.

 

 

Translate »