ಅಂತಾರಾಜ್ಯ ಖದೀಮನ ಸೆರೆ; 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಮೈಸೂರು

ಅಂತಾರಾಜ್ಯ ಖದೀಮನ ಸೆರೆ; 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

December 29, 2020

ಮೈಸೂರು,ಡಿ.28(ಎಸ್‍ಬಿಡಿ)-ಮೈಸೂರಿನ ಸಿಸಿಬಿ ಪೊಲೀಸರು, ಅಂತಾರಾಜ್ಯ ಕಳ್ಳನನ್ನು ಭಾನುವಾರ ಬಂಧಿಸಿ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಚೆನ್ನೈನ ಆಲಪಾಕ್ಕಂನ ರಾಜೀವ್‍ಗಾಂಧಿ ನಗರದ ನಿವಾಸಿ ಪ್ರೇಂ ಕುಮಾರ್(29) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸುಮಾರು 9 ಲಕ್ಷ ರೂ. ಮೌಲ್ಯದ 176 ಗ್ರಾಂ ಚಿನ್ನಾಭರಣ, 454 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 25,840 ರೂ, ಯುಎಸ್‍ಎ ರಾಷ್ಟ್ರದ 5 ಡಾಲರ್ಸ್ ಹಾಗೂ ಕಳ್ಳತನದ ಹಣ ದಿಂದ ಖರೀದಿಸಿದ್ದ ಒಂದು ಮೊಬೈಲ್ ಅನ್ನು ಆರೋಪಿಯಿಂದ ವಶಪಡಿಸಿ ಕೊಳ್ಳಲಾಗಿದೆ. ಭಾನುವಾರ(ಡಿ.27) ಸಂಜೆ 4.30ರ ಸಮಯದಲ್ಲಿ ಅಶೋಕ ರಸ್ತೆಯಲ್ಲಿರುವ ಭಾಗ್ಯಲಕ್ಷ್ಮಿ ಜ್ಯೂಯಲರಿ ಕ್ರಾಫ್ಟ್ ಅಂಗಡಿ ಬಳಿ ಕಳ್ಳತನ ಮಾಡಿದ್ದ ಆಭರಣಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಚೆನ್ನೈನ ವಿಲ್ಲಿವಕ್ಕಂ ಏರಿಯಾದ ಮನೆಯೊಂದರಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಹಿಂದೆ ಚೆನ್ನೈನಲ್ಲಿ 3 ಪ್ರಕರಣಗಳಲ್ಲಿ ದಸ್ತಗಿರಿಯಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಎಂಬ ವಿಚಾರವು ವಿಚಾರಣೆ ವೇಳೆ ತಿಳಿದು ಬಂದಿದೆ. ಆರೋಪಿ ಪ್ರೇಂ ಕುಮಾರ್ ವಿರುದ್ಧ ಲಷ್ಕರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಡಿಸಿಪಿ ಗೀತಪ್ರಸನ್ನ, ಸಿಸಿಬಿ ಘಟಕದ ಎಸಿಪಿ ವಿ.ಮರಿ ಯಪ್ಪರವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಆರ್.ಜಗದೀಶ್, ಎಎಸ್‍ಐ ಡಿ.ಜಿ. ಚಂದ್ರೇಗೌಡ, ಸಿಬ್ಬಂದಿ ಸಲೀಂ ಪಾಷ, ರಾಮಸ್ವಾಮಿ, ಚಿಕ್ಕಣ್ಣ, ಪರಮೇಶ, ಶಿವರಾಜು, ಲಕ್ಷ್ಮಿಕಾಂತ, ಎಂ.ಆರ್.ಗಣೇಶ್.ಆನಂದ್, ಅನಿಲ್, ಚಂದ್ರ ಶೇಖರ್, ಪ್ರಕಾಶ್, ಗೌತಮ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »