ಇಬ್ಬರು ಖದೀಮರ ಬಂಧನ; 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಮೈಸೂರು

ಇಬ್ಬರು ಖದೀಮರ ಬಂಧನ; 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

December 29, 2020

ಮೈಸೂರು,ಡಿ.28(ಎಸ್‍ಬಿಡಿ)- ಎಂಟು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಲ್ಲದೆ, ಕಳ್ಳತನ ಮುಂದುವರೆಸಿದ್ದ ಖದೀಮ ಸೇರಿ ಇಬ್ಬರನ್ನು ಮೈಸೂರಿನ ಮಂಡಿ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಹಳೆಯ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ 8 ವರ್ಷ ದಿಂದ ತಲೆಮರೆಸಿಕೊಂಡಿದ್ದ ಮೈಸೂರಿನ ಅಜೀಜ್‍ಸೇಠ್‍ನಗರದ ಮುಜ್ಜು ಅಹಮ್ಮದ್(35) ಹಾಗೂ ಆತನ ಸಹಚರ ಮುಜಾಮಿಲ್ ಅಹಮ್ಮದ್(40) ಬಂಧಿತರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರ ಬಂಧನದೊಂದಿಗೆ ಡಿ.18ರಂದು ಲಷ್ಕರ್ ಮೊಹಲ್ಲಾದ ಮನೆಯೊಂದರ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಪ್ರಕರಣವನ್ನು ಬೇಧಿಸಿದಂತಾಗಿದೆ.

ಕಳ್ಳತನ ಪ್ರಕರಣದ ತನಿಖೆ ಸಂದರ್ಭದಲ್ಲಿ ಸುಳಿವಿನ ಮೇರೆಗೆ ಮುಜ್ಜು ಅಹಮ್ಮದ್ ಹಾಗೂ ಸಹಚರ ಮುಜಾಮಿಲ್‍ನನ್ನು ವಶಕ್ಕೆ ಪಡೆದು ವಿಚಾ ರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದಾಗಿ ತಿಳಿಸಿದ್ದಾರೆ. ಬಂಧಿತರಿಂದ ಸುಮಾರು 8 ಲಕ್ಷ ಮೌಲ್ಯದ ಚಿನ್ನ, ಡೈಮಂಡ್ ಮತ್ತು ಪ್ಲಾಟಿನಂ ಆಭರಣಗಳು, ಎಲ್‍ಸಿಡಿ ಟಿವಿ, ಸೆಟಪ್ ಬಾಕ್ಸ್, ಡಿವಿಡಿ ಪ್ಲೆಯರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರುತಿ 800 ಕಾರನ್ನು ವಶಪಡಿಸಿಕೊಂಡಿದ್ದಾರೆ. ಡಿಸಿಪಿ ಗೀತಪ್ರಸನ್ನ, ಎನ್‍ಆರ್ ವಿಭಾಗದ ಎಸಿಪಿ ಶಿವಶಂಕರ್ ಮಾರ್ಗ ದರ್ಶನದಲ್ಲಿ ಮಂಡಿ ಠಾಣೆಯ ಇನ್ಸ್‍ಪೆಕ್ಟರ್ ನಾರಾಯಣಸ್ವಾಮಿ, ಸಬ್ ಇನ್ಸ್‍ಪೆಕ್ಟರ್‍ಗಳಾದ ವಿ.ಆರ್.ಶಭರೀಶ, ಶಿವಕುಮಾರ್, ಎಎಸ್‍ಐ ಕೆ.ಎಸ್.ಗುರುಸ್ವಾಮಿ ಸಿಬ್ಬಂದಿ ಜಯಪಾಲ, ಜಿ.ಸಿ.ರಾಜೇಂದ್ರ., ಸಂತೋಷ್ ಕುಮಾರ್, ರವಿಗೌಡ, ಶಂಕರ ಟಿ ಬಂಡಿವಡ್ಡರ್, ಹನುಮಂತ ಕಲ್ಲೇದ, ಕರಿಯಪ್ಪ ಹಾಗೂ ಸಮೀರ್ ಕಾರ್ಯಾಚರಣೆ ನಡೆಸಿದ್ದರು.

 

Translate »