ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಿ
ಮೈಸೂರು

ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಿ

December 29, 2020

ಮೈಸೂರು,ಡಿ.28(ಆರ್‍ಕೆಬಿ)-ರಾಜ್ಯ ದಲ್ಲಿ ಹರಿದು ಹಂಚಿಹೋಗಿರುವ 36 ಕ್ಷತ್ರಿಯ ಪಂಗಡಗಳನ್ನು ಒಂದೇ ವೇದಿಕೆ ಯಡಿ ತರುವ ನಿಟ್ಟಿನಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಿದೆ. ಈಗ ಕ್ಷತ್ರಿಯರು ನಾವೆಲ್ಲರೂ ಒಂದು ಎಂಬ ಕೂಗೆದ್ದಿದೆ. ಮುಖ್ಯಮಂತ್ರಿ ವೀರಶೈವ ಅಭಿವೃದ್ಧಿ ನಿಗಮ ರಚಿಸಿದ ರೀತಿಯಲ್ಲಿಯೇ ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾ ಧ್ಯಕ್ಷ ಉದಯ್‍ಸಿಂಗ್ ಆಗ್ರಹಿಸಿದರು.

ಮೈಸೂರಿನ ಪಾಂಡುರಂಗ ವಿಠಲ ದೇವ ಸ್ಥಾನದ ರಾಮಮಂದಿರದಲ್ಲಿ ಭಾನುವಾರ ಕ್ಷತ್ರಿಯ ಸಮುದಾಯದ ಕೊರೊನಾ ವಾರಿ ಯರ್ಸ್‍ಗಳಿಗೆ ಸನ್ಮಾನ ಮತ್ತು ಕರ್ನಾಟಕ ಕ್ಷಾತ್ರ ಪರಂಪರೆಯ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ರಾಜ್ಯದಲ್ಲಿ ವಾಸಿ ಸುತ್ತಿರುವ 36 ಕ್ಷತ್ರಿಯ ಒಳಪಂಗಡಗಳು `ನಾವೆಲ್ಲ ಕ್ಷತ್ರಿಯರು ಒಂದು’ ಎಂಬ ಕೂಗೆತ್ತಿದ್ದೇವೆ. ಅದಕ್ಕಾಗಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಂಘಟನೆಯಲ್ಲಿ ತೊಡಗಿದೆ. ಅನ್ಯ ಸಮಾಜಗಳಂತೆ ನಾವೂ ಸದೃಢರಾಗಬೇಕು. ಎಲ್ಲಾ ರಂಗಗಳಲ್ಲೂ ಮುಖ್ಯವಾಹಿನಿಗೆ ಬರಬೇಕು ಎಂಬುದು ನಮ್ಮ ಹೋರಾಟದ ಮುಖ್ಯ ಉದ್ದೇಶ ಎಂದು ಹೇಳಿದರು.

ಬೇರೆ ಬೇರೆ ಕ್ಯಾಲೆಂಡರ್‍ಗಳಲ್ಲಿ ನಮ್ಮ ಕ್ಷತ್ರಿಯ ಸಮುದಾಯದ ರಾಜಮಹಾರಾಜರ ಭಾವಚಿತ್ರಗಳಾಗಲೀ, ಅವರ ಜಯಂತಿ ದಿನಗಳಾಗಲೀ ನಮೂದಾಗಿಲ್ಲ. ಹೀಗಾಗಿ ಕ್ಷಾತ್ರ ಪರಂಪರೆಯ ರಾಜ ಮಹಾರಾಜರ ಭಾವಚಿತ್ರ, ಜಯಂತಿ ದಿನಗಳನ್ನು ಒಳಗೊಂಡ ಕ್ಯಾಲೆಂಡರ್ ಇಂದು ಬಿಡುಗಡೆ ಮಾಡಿ ದ್ದೇವೆ. ರಾಜ್ಯದ ಪ್ರತಿಯೊಬ್ಬ ಕ್ಷತ್ರಿಯರ ಮನೆ ಯಲ್ಲಿ ಈ ಕ್ಯಾಲೆಂಡರ್‍ಗಳು ವರ್ಷಪೂರ್ತಿ ಇರಬೇಕು. ನಮ್ಮ ರಾಜ ಮಹಾರಾಜರ ತ್ಯಾಗ, ಬಲಿದಾನ, ಜಯಂತಿ ದಿನಗಳನ್ನು ನೆನಪಿಸಿಕೊಡುವ ಯತ್ನವಿದು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯ ಮಹಿಳಾ ಸಂಚಾಲಕಿ ಉಮಾ ಮೂರ್ತಿ ರಾವ್, ಆಶಾ ರಾಜು, ಮೈಸೂರು ಭಾವ ಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಆರ್.ವಿ. ಶಿವಾಜಿರಾವ್ ರಂಪೂರೆ, ಮಂಡಳಿಯ ನಿರ್ದೇಶಕರಾದ ನಾಗರಾಜ ಪತಂಗೆ, ಬಾಲಾಜಿ ರಾವ್ ನಾಯಕ್, ಒಕ್ಕೂಟದ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಗಣೇಶ್ ಎನ್. ಲಾಳಿಗೆ, ಹುಣಸೂರು ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಗಣೇಶ್ ರಾಶಿಂಕರ್, ಪಾಂಡವಪುರ ಅಧ್ಯಕ್ಷ ನಾಗರಾಜ ರಂಪೂರೆ, ಬಿವಿಐ ಶ್ರೀರಂಗಪಟ್ಟಣದ ಅಧ್ಯಕ್ಷ ಪ್ರಕಾಶ್ ಕುಂಟೆ, ಮೈಸೂರು ರಜಪೂತ್ ಸಮಾ ಜದ ಅಧ್ಯಕ್ಷ ಸತ್ಯನಾರಾಯಣ ಸಿಂಗ್, ಗೀತಾ ಬಾಯಿ, ಕೆಕೆಓ ಮುಖಂಡರಾದ ಸಂತೋಷ್ ಪತಂಗೆ, ರಘುನಾಥ್ ಬಾರಾಟಿಕ್ಕೆ, ಉಮೇಶ್ ಹೆಬ್ಬಾರ್, ರಾಜು ಕುತ್ನೀಕರ್, ಸಮಾಜದ ಗುರುಗಳಾದ ಜಿ.ಪಿರಾವ್ ಇನ್ನಿತರರು ಉಪಸ್ಥಿತರಿದ್ದರು.

 

Translate »