ರಂಗಾಯಣದಲ್ಲಿ ಡಿ.31ರಂದು `ಕೋವಿಡ್   ಕತ್ತಲೆಯಲ್ಲೂ ರಂಗಬೆಳಕು’ ಪುಸ್ತಕ ಬಿಡುಗಡೆ
ಮೈಸೂರು

ರಂಗಾಯಣದಲ್ಲಿ ಡಿ.31ರಂದು `ಕೋವಿಡ್  ಕತ್ತಲೆಯಲ್ಲೂ ರಂಗಬೆಳಕು’ ಪುಸ್ತಕ ಬಿಡುಗಡೆ

December 29, 2020

ಮೈಸೂರು,ಡಿ.28(ಆರ್‍ಕೆಬಿ)- ರಂಗಾ ಯಣ ನಿರ್ದೇಶಕರಾಗಿ ಒಂದು ವರ್ಷ ಪೂರೈಸಿದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ಒಂದು ವರ್ಷದ ಅವಧಿ ಯಲ್ಲಿ ಕೋವಿಡ್-19 ಲಾಕ್‍ಡೌನ್ ಆದಾ ಗಿನಿಂದಲೂ ಕಠಿಣ ಸನ್ನಿವೇಶಗಳ ನಡು ವೆಯೂ ರಂಗಾಯಣವನ್ನು ಚಟುವಟಿಕೆಯ ಕೇಂದ್ರವಾಗಿ ಪರಿವರ್ತಿಸಿದ ಕುರಿತಂತೆ `ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಪುಸ್ತಕ ಡಿ.31ರಂದು ಬಿಡುಗಡೆಯಾಗಲಿದೆ.

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸೋಮವಾರ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ರಂಗಭೂಮಿ ಕಲಾವಿದರು, ಕಲಾತಂಡ ಗಳು ಆತಂಕಗೊಂಡು ಕುಳಿತಿದ್ದಾಗ ರಂಗಾ ಯಣ ಕೋವಿಡ್-19 ವಿರುದ್ಧವೇ ಸೆಡ್ಡು ಹೊಡೆದು ಸರ್ಕಾರದ ಮಾರ್ಗಸೂಚಿ ಗಳನ್ನು ಪಾಲಿಸುತ್ತಲೇ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿತು.

ಸಾಮಾಜಿಕ ಜಾಲತಾಣದ ಜೊತೆಗೆ ರಂಗಾಯಣದಲ್ಲೇ ಆಯ್ದ ಆಹ್ವಾನಿತ ಪ್ರೇಕ್ಷ ಕರಿಗಾಗಿ ನಿರಂತರ ಕಾರ್ಯಕ್ರಮಗಳನ್ನು ನೀಡಿತು. ಹವ್ಯಾಸಿ ತಂಡಗಳಲ್ಲಿಯೂ ಹೊಸ ಭರವಸೆ ಮೂಡಿಸಿದೆ. ಹವ್ಯಾಸಿ ಕಲಾವಿದರಿಗಾಗಿ ರಂಗ ಕಾರ್ಯಾಗಾರ ನಡೆಸುತ್ತಿದೆ. ನೂರಾರು ಕಲಾವಿದರ ಚಟು ವಟಿಕೆಯ ಕೇಂದ್ರ ಬಿಂದುವಾಗಿದೆ ಎಂದು ಕೊರೊನಾ ಆತಂಕದ ನಡುವೆ ರಂಗಾಯಣ ನಡೆಸಿಕೊಂಡು ಬಂದ ಬಗ್ಗೆ ವಿವರಿಸಿದರು.

ಇದೆಲ್ಲವನ್ನೂ ದಾಖಲಿಸುವ ಉದ್ದೇಶ ದಿಂದ `ಕೋವಿಡ್ ಕತ್ತಲೆಯಲ್ಲೂ ರಂಗ ಬೆಳಕು’ ಪುಸ್ತಕ ಹೊರತರಲಾಗಿದ್ದು, ಡಿ.31ರ ಮಧ್ಯಾಹ್ನ 3.30ಕ್ಕೆ ರಂಗಾಯಣದ ಭೂಮಿಗೀತದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಬಿಡುಗಡೆ ಮಾಡಲಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ಕಲಾ ನಿರ್ದೇಶಕ ಶಶಿಧರ್ ಅಡಪ ಮುಖ್ಯ ಅತಿಥಿಯಾಗಿ ಭಾಗವಹಿ ಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಾಯಣ ಭಾರ ತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿ ಗಳಿಂದ `ಕೋಲಾಟ ಮತ್ತು ರಾಗ ಸರಾಗ’ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ 6.30ಕ್ಕೆ ವನರಂಗದಲ್ಲಿ ಪುತ್ತೂರಿನ ಆಂಜನೇಯ ಮಹಿಳಾ ಯಕ್ಷಗಾನ ತಂಡದಿಂದ `ಭೀಷ್ಮಾ ರ್ಜುನ’ ತಾಳಮದ್ದಳೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.

`ರಾಗ ರಂಗಾಯಣ’ ತಿಂಗಳ ಕಾರ್ಯಕ್ರಮ: ರಂಗಾಯಣದ ಹೊಸ ಕಲ್ಪನೆ- ಯೋಜನೆ `ರಾಗ ರಂಗಾಯಣ’. ಪ್ರತಿ ತಿಂಗಳ ಮೊದಲ ಶನಿವಾರ ಆಯೋಜಿಸಲಿದ್ದು, ಕವಿಗಳ ಕಾವ್ಯ ಗಾಯನ, ಜನಪದ ಮಹಾಕಾವ್ಯ ಗಾಯನ, ರಂಗಗೀತೆಗಳು, ತತ್ವಪದ ಗಾಯನ, ವಚನ ಗಾಯನ ಇತ್ಯಾದಿ ಸಂಗೀತ ಕಾರ್ಯಕ್ರಮ ಗಳನ್ನು ಒಳಗೊಂಡಿರುತ್ತದೆ. ಮೊದಲ ಕಾರ್ಯಕ್ರಮ ಜ.2ರಂದು ಸಂಜೆ 6.30ಕ್ಕೆ ರಂಗಾಯಣ ಪ್ರಸ್ತುತಪಡಿಸುವ ಸಂಗೀತ ಕಾರ್ಯಕ್ರಮ `ಬೇಂದ್ರೆ ಬೆರಗು’. ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತ ಕವಿ ದ.ರಾ. ಬೇಂದ್ರ ಅವರ ಕವಿತೆಗಳ ಗಾಯನ, ಸಂಗೀತ ನಿರ್ದೇಶಕ ರಂಗಾಯಣದ ಕಲಾವಿದ, ಹಿಂದೂಸ್ತಾನಿ ಗಾಯಕ ರಾಮಚಂದ್ರ ಹಡ ಪದ, ಸಂಗೀತ ಕಾರ್ಯಕ್ರಮ ಸಂಯೋಜನೆ ಸಾಹಿತಿ, ಬರಹಗಾರ ಜಿ.ಪಿ.ಬಸವರಾಜು, ಖ್ಯಾತ ಗಾಯಕಿ ಹೆಚ್.ಆರ್.ಲೀಲಾವತಿ ರಾಗ ರಂಗಾಯಣದ ಉದ್ಘಾಟನೆ ಮತ್ತು ತಿಂಗಳ ಅತಿಥಿಯಾಗಿ ಭಾಗವಹಿಸಲಿ ದ್ದಾರೆ ಎಂದು ತಿಳಿಸಿದರು.

ಡಿ.31ರಂದು `ಪದ್ಮಶ್ರೀ ಬಿ.ವಿ.ಕಾರಂತ ರಸ್ತೆ’ಗಾಗಿ ಅಭಿಯಾನ: ಭಾರತೀಯ ರಂಗ ಭೂಮಿಯಲ್ಲಿ `ರಂಗಭೀಷ್ಮ’ ಎಂದು ಕರೆ ಯಲ್ಪಡುವವರು ಪದ್ಮಶ್ರೀ ಬಿ.ವಿ.ಕಾರಂ ತರು. ಮೈಸೂರು ರಂಗಾಯಣಕ್ಕೆ, ರಂಗ ಕಲಾವಿದರಿಗೆ ಕಾರಂತರು ಮಾಡಿದ ಸೇವೆ, ಕೊಡುಗೆ ಅನನ್ಯ. ಹೀಗಾಗಿ ಇವರ ಹೆಸ ರನ್ನು ಕಲಾಮಂದಿರ ಮತ್ತು ರಂಗಾಯಣಕ್ಕೆ ಹೊಂದಿಕೊಂಡಿರುವ ಹುಣಸೂರು ಮುಖ್ಯ ರಸ್ತೆ ಸಿಗ್ನಲ್‍ನಿಂದ ಕುಕ್ಕರಹಳ್ಳಿ ಕೆರೆ ರೈಲ್ವೆ ಗೇಟ್‍ವರೆಗಿನ ರಸ್ತೆಗೆ `ಪದ್ಮಶ್ರೀ ಬಿ.ವಿ. ಕಾರಂತ ರಸ್ತೆ’ ಎಂದು ನಾಮಕರಣ ಮಾಡ ಬೇಕು. ಈ ಬಗ್ಗೆ ಈಗಾಗಲೇ ನಗರಪಾಲಿಕೆ ಮತ್ತು ಶಾಸಕರಿಗೆ ಮನವಿ ನೀಡಲಾಗಿದೆ. ಹೀಗಾಗಿ ಅವರ ಗಮನ ಸೆಳೆಯಲು ಡಿ.31 ರಂದು ಬೆಳಿಗ್ಗೆ 11.30 ಗಂಟೆಗೆ ರಂಗಾ ಯಣ ನಿರ್ದೇಶÀಕ ಅಡ್ಡಂಡ ಕಾರ್ಯಪ್ಪ, ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ಹೆಚ್.ಎಸ್.ಸುರೇಶ್‍ಬಾಬು, ಹಿರಿಯ ರಂಗಕರ್ಮಿಗಳಾದ ಜಯರಾಮ್ ಪಾಟೀಲ್, ರಾಜಶೇಖರ ಕದಂಬ ಇನ್ನಿತ ರರ ನೇತೃತ್ವದಲ್ಲಿ ರಂಗಾಯಣದ ಗೇಟ್ ಮುಂಭಾಗದ ರಸ್ತೆಯಲ್ಲಿ ಅಭಿಯಾನ ಹಮ್ಮಿಕೊಂಡಿದ್ದು, ಘೋಷಣೆ, ಹಾಡುಗಳ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದರು.

ಫೆಬ್ರವರಿಯಲ್ಲಿ `ಸೂತ್ರಧಾರ’ ನಾಟಕ:  ಸರ್ವರಿಗೂ ಸಂವಿಧಾನದ ಆಶಯಗಳನ್ನು ತಿಳಿಸುವ ನಿಟ್ಟಿನಲ್ಲಿ ರಂಗಾಯಣವು `ಸೂತ್ರ ಧಾರ’ ನಾಟಕವನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ  ಕಲಾವಿದರ ಆಯ್ಕೆ ಕಾರ್ಯ ನಡೆಸಲಾಗಿದೆ. ಎಸ್.ರಾಮನಾಥ್ ಕಥೆ ಬರೆದಿದ್ದು, ಒಟ್ಟು 15 ಕಲಾವಿದರು ಪಾತ್ರ ವರ್ಗದಲ್ಲಿದ್ದಾರೆ. ಫೆಬ್ರವರಿಯಲ್ಲಿ ನಾಟಕ ಪ್ರದರ್ಶನಕ್ಕೆ ತಯಾರಿ ನಡೆಸಲಾಗುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಂಗಾಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಇದ್ದರು.

ಜನವರಿ ತಿಂಗಳಲ್ಲಿ ಸಂಜೆ 6.30ಕ್ಕೆ ನಡೆ ಯುವ ರಂಗಾಯಣದ ಕಾರ್ಯಕ್ರಮ ಗಳಿವು: ಜ.2ರಂದು ರಂಗಾಯಣ ಭೂಮಿ ಗೀತದಲ್ಲಿ ರಾಮಚಂದ್ರ ಜಿ.ಹಡಪದ ಹಾಗೂ ಶ್ವೇತಾ ಪ್ರಭು ಅವರಿಂದ `ಬೇಂದ್ರೆ ಬೆರಗು’. ಜ.3ರಂದು ಕಲಾಮಂದಿರ ಆವ ರಣದ ಕಿರು ರಂಗಮಂದಿರದಲ್ಲಿ ಬೆಂಗಳೂ ರಿನ ಪ್ರಯೋಗರಂಗದ ಧನಂಜಯ ಅವ ರಿಂದ `ಅಂತಿಮ’ ಏಕವ್ಯಕ್ತಿ ಪ್ರದರ್ಶನ, ರಚನೆ-ರಾಧಾಕೃಷ್ಣ ಕಲ್ಚಾರ್, ನಿರ್ದೇಶನ -ಕೃಷ್ಣಮೂರ್ತಿ ಕವತ್ತಾರ್.

ಜ.10ರಂದು ಕಿರುರಂಗ ಮಂದಿರದಲ್ಲಿ ಕಲಬುರಗಿ ರಂಗಾಯಣದಿಂದ ಮಹದೇವ ಹಡಪದ ಅವರ ನಿರ್ದೇಶನದಲ್ಲಿ ಸಿರಿ ಪುರಂದರ, ಜ.11ರಂದು ಕಲಬುರಗಿ ರಂಗಾಯಣದಿಂದ ಕಿರುರಂಗಮಂದಿರ ದಲ್ಲಿ `ತ್ರಯಸ್ಥ’ ರಂಗರೂಪ ಮತ್ತು ನಿರ್ದೇ ಶನ ವಿಶ್ವರಾಜ್ ಪಾಟೀಲ್, ಜ.15ರಂದು ಕಿರುರಂಗ ಮಂದಿರದಲ್ಲಿ ಕರ್ನಾಟಕ ಅರೆ ಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಯಿಂದ `ಸಾಹೇಬ್ರು ಬಂದವೇ’, ಕೆ.ವಿ. ಸುಬ್ಬಣ್ಣನವರ ಮೂಲ ಕತೆಗೆ ಅರೆ ಭಾಷೆಗೆ ಜಯಪ್ರಕಾಶ್ ಕುಕ್ಕೇಟಿ, ನಿರ್ದೇಶನ- ಜೀವನ್‍ರಾಂ ಸುಳ್ಯ.

ಜನವರಿ 14, 17, 24 ಮತ್ತು 31ರಂದು ರಂಗಾಯಣದ ವನರಂಗದಲ್ಲಿ ಸುಬ್ಬಯ್ಯ ನಾಯ್ಡು ರಂಗ ಕಾರ್ಯಾಗಾರದಿಂದ `ಸೀತಾಸ್ವಯಂವರÀ’, ರಚನೆ-ಎಂ.ಎಲ್. ಶ್ರೀಕಂಠೇಗೌಡÀ, ರಂಗ ಪಠ್ಯ-ಮಂಜುನಾಥ ಎಲ್.ಬಡಿಗೇರ, ನಿರ್ದೇಶನ-ಜೀವನ್ ಕುಮಾರ್ ಬಿ.ಹೆಗ್ಗೋಡು.

 

 

Translate »