ರೈತರ ಹಿತ ಕಾಯದ ಪ್ರಧಾನಿ ನರೇಂದ್ರ ಮೋದಿ ಪ.ಮಲ್ಲೇಶ್ ಆಕ್ರೋಶ
ಮೈಸೂರು

ರೈತರ ಹಿತ ಕಾಯದ ಪ್ರಧಾನಿ ನರೇಂದ್ರ ಮೋದಿ ಪ.ಮಲ್ಲೇಶ್ ಆಕ್ರೋಶ

December 29, 2020

ಮೈಸೂರು,ಡಿ.28(ಎಂಟಿವೈ)- ಅಧಿಕಾರದ ಚುಕ್ಕಾಣಿ ಹಿಡಿದು ಆರು ವರ್ಷವಾದರೂ ಒಂದೇ ಒಂದು ಸುದ್ದಿ ಗೋಷ್ಠಿ ನಡೆಸದ ಪ್ರಧಾನಿ ನರೇಂದ್ರ ಮೋದಿ, 36 ದಿನ ಗಳಿಂದ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹಿತ ಕಾಯದೆ ಕಾರ್ಪೋರೇಟ್ ಕಂಪನಿಗಳ ಹಿಡಿತ ದಲ್ಲಿದ್ದಾರೆ ಎಂದು ಹಿರಿಯ ಸಮಾಜವಾದಿ ಪ.ಮಲ್ಲೇಶ್ ಕಿಡಿಕಾರಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ಕಾಯಿದೆ ಗಳನ್ನು ವಾಪಸ್ ಪಡೆಯುವಂತೆ ಆಗ್ರ ಹಿಸಿ ಹೊಸ ದಿಲ್ಲಿಯಲ್ಲಿ ನಡೆಸುತ್ತಿರುವ ಹೋರಾಟ ಈಗಾಗಲೇ 36 ದಿನ ಕಳೆ ದಿದೆ. ಸ್ವತಃ ಪ್ರಧಾನಿಯವರೇ ಪ್ರತಿಭಟನಾ ನಿರತ ರೈತರ ಬಳಿಗೆ ತೆರಳಿ ಮಾತುಕತೆ ನಡೆಸಿಲ್ಲ. ಈ ಹಿಂದಿನ ಪ್ರಧಾನಿಗಳು ಹೋರಾಟ ನಿರತರ ಬಳಿ ತೆರಳಿ ಮಾತು ಕತೆ ನಡೆಸುತ್ತಿದ್ದರು. ಇದನ್ನು ನೆನೆದರೆ ದೇಶ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಪ್ರಧಾನಿಯಾಗಿ 6 ವರ್ಷ ಕಳೆದರು ನರೇಂದ್ರ ಮೋದಿ ಒಂದೇ ಒಂದೂ ಪತ್ರಿಕಾಗೋಷ್ಠಿ ನಡೆಸಿಲ್ಲ. ಜನರ ಸಮಸ್ಯೆಗಳಿಗೆ ಉತ್ತರ ಕೊಟ್ಟಿಲ್ಲ. ‘ಮನ್ ಕೀ ಬಾತ್’ ಮೂಲಕ ಲಿಖಿತ ರೂಪದ ಭಾಷಣ ಮಾಡಿ ಹೋಗು ತ್ತಾರೆ. ಈ ಸರ್ಕಾರದ ಆಡಳಿತ ಆತಂಕ ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇತ್ತ ಮೈಸೂರು ಜಿಲ್ಲೆ ನಂಜನ ಗೂಡು ತಾಲೂಕಿನಲ್ಲಿ ಏಷ್ಯನ್ ಪೇಂಟ್ಸ್ ಕಾರ್ಖಾನೆಯ ಧೋರಣೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಜಿಲ್ಲಾಡಳಿತವೂ ಸ್ಪಂದಿಸುತ್ತಿಲ್ಲ. ಈ ವಿಚಾರದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಾತಿಗೂ ಬೆಲೆ ನೀಡುತ್ತಿಲ್ಲ. ಹೀಗಾಗಿ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಪಾದಯಾತ್ರೆಯ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾ ಪಾರ್ಟಿಯ ಜಿಲ್ಲಾ ಧ್ಯಕ್ಷ ಉಗ್ರೇನರಸಿಂಹೇಗೌಡ, ರೈತ ಮುಖಂಡ ಬೊಕ್ಕಳ್ಳಿ ನಂಜುಂಡ ಸ್ವಾಮಿ, ಎನ್.ಪ್ರಸನ್ನ ಹಾಗೂ ಭೂಮಿ ಕಳೆದುಕೊಂಡ ರೈತರು ಇದ್ದರು.

Translate »