ಲಯನ್ಸ್ ಕ್ಲಬ್ ಸಂಸ್ಥಾಪಕರ ದಿನಾಚರಣೆ
ಮೈಸೂರು

ಲಯನ್ಸ್ ಕ್ಲಬ್ ಸಂಸ್ಥಾಪಕರ ದಿನಾಚರಣೆ

December 30, 2020

ಮೈಸೂರು,ಡಿ.29-ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಜಿಲ್ಲೆ 317 ಎ, ಮೈಸೂರಿನ ತಿಲಕ್‍ನಗರದಲ್ಲಿರುವ ಲಯನ್ಸ್ ಕ್ಲಬ್ ಮೈಸೂರಿನ 63ನೇ ಸಂಸ್ಥಾಪಕರ ದಿನಾಚರಣೆ ಹಾಗೂ 2021ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಸಮಾರಂಭ ತಿಲಕ್‍ನಗರದಲ್ಲಿರುವ ಲಯನ್ಸ್ ಭವನದಲ್ಲಿ ನೆರವೇರಿತು. ರಾಜ್ಯಪಾಲರಾದ ಲಯನ್ ಡಾ.ಜಿ.ಎ.ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ ಪ್ರತಿಮಾ ರಮೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಶ್ರೀನಾಥ್, ಜಿಲ್ಲಾ ಸಂಪುಟ ಖಜಾಂಚಿ ಲಯನ್ ನಿತ್ಯಾನಂದ, ಪ್ರಾಂತೀಯ ಅಧ್ಯಕ್ಷ ಲಯನ್ ಜೆ.ಲೋಕೇಶ್, ವಲಯ ಅಧ್ಯಕ್ಷ ಲಯನ್ ಪ್ರತಿಮಾ ರಮೇಶ್, ಕ್ಲಬ್ ಅಧ್ಯಕ್ಷ ಲಯನ್ ಎಂ.ಎಸ್. ಮೋಹನ್, ಲಯನ್ ಮಮತಾ ಮೋಹನ್, ಕಾರ್ಯದರ್ಶಿ ಲಯನ್ ಗೀತಾ ಕೃಷ್ಣಮೂರ್ತಿ, ಖಜಾಂಚಿ ಲಯನ್ ಬಿ.ಶಿವಣ್ಣ, ಲಯನ್ ಶಶಿಕುಮಾರ್,ಲಯನ್ ಮೋಹನಕುಮಾರ್, ಲಯನ್ ಉಮಾಪತಿ ರಾವ್ ಇನ್ನಿತರರು ಹಾಜರಿದ್ದರು.

Translate »