ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಸಂಸ್ಕೃತಿ-2020’ ಕೈಮಗ್ಗ ಮೇಳ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಸಂಸ್ಕೃತಿ-2020’ ಕೈಮಗ್ಗ ಮೇಳ

December 30, 2020

ಮೈಸೂರು, ಡಿ.29(ಎಂಟಿವೈ)- ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಡಿ.30ರಿಂದ ಜ.12ರವರೆಗೆ ‘ಸಂಸ್ಕೃತಿ-2020’ ಶೀರ್ಷಿಕೆಯಡಿ ಕೈಮಗ್ಗದ ಉತ್ಪನ್ನಗಳ ವಿಶೇಷ ಪ್ರದರ್ಶನ-ಮಾರಾಟ ಮೇಳ ನಡೆಯಲಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಹೆಚ್.ಆರ್.ಮಹದೇವಸ್ವಾಮಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಡಿ.30ರ ಸಂಜೆ 4ಕ್ಕೆ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೇಳಕ್ಕೆ ಚಾಲನೆ ನೀಡುವರು. ಶಾಸಕ ಜಿ.ಟಿ.ದೇವೇಗೌಡ, ಜಿಪಂ ಅಧ್ಯಕ್ಷೆ ಬಿ.ಸಿ. ಪರಿಮಳಾ ಶ್ಯಾಂ, ಮೇಯರ್ ತಸ್ನೀಂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ವಿಶೇಷ ಮೇಳದಲ್ಲಿ ಜಮ್ಮು-ಕಾಶ್ಮೀರ, ನವದೆಹಲಿ, ರಾಜಸ್ತಾನ, ಗುಜ ರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಹರಿಯಾಣ, ಬಿಹಾರ್, ಮಹಾ ರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಕರ್ನಾ ಟಕದ ವಿವಿಧ ಪ್ರದೇಶಗಳ ಕೈಮಗ್ಗ ನೇಕಾರ ಸಹಕಾರಿ ಸಂಘಗಳ ನೇಕಾರರು ರೇಷ್ಮೆ, ಹತ್ತಿ, ಉಣ್ಣೆ ಹಾಗೂ ಮಿಶ್ರಿತ ನೂಲುಗಳಿಂದ ತಯಾರಿಸಿದ ಕೈಮಗ್ಗ ಉತ್ಪನ್ನ ಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗುವುದು ಎಂದರು. ಅಹಮದಾಬಾದ್‍ನ ಇಂಡೆಕ್ಟ್ಸ್-ಸಿ ವ್ಯವಸ್ಥಾಪಕರಾದ ಸ್ನೇಹಲ್ ಮುಕ್ವಾನ್ ಮಾತನಾಡಿ, ನೇಕಾರ ಕುಟುಂಬ ಗಳನ್ನು ಉತ್ತೇಜಿಸಲು ಒಂದೇ ಸೂರಿನಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಗುಜರಾತ್‍ನ 45 ಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. ಪಟೋಲ, ಬಾಂದಿನಿ ಸೀರೆ, ಕಸೂತಿ ಬೆಡ್‍ಶೀಟ್, ಟವಲ್, ಕುಶನ್ ಕವರ್, ಪರಿಸರ ಸ್ನೇಹಿ ಆಭರಣ, ಡ್ರೆಸ್ ಮೆಟೀರಿಯಲ್, ಬೀಡ್ ವರ್ಕ್ ವಸ್ತುಗಳ ಪ್ರದರ್ಶನ-ಮಾರಾಟವಿದೆ ಎಂದರು. ಜಿಲ್ಲಾ ಜವಳಿ ಇಲಾಖೆ ಉಪ ನಿರ್ದೇಶಕ ಲಕ್ಷ್ಮಣ ತಳವಾರ್, ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನ ಸಂಯೋಜಕ ರಾಕೇಶ್ ರೈ ಸುದ್ದಿಗೋಷ್ಠಿಯಲ್ಲಿದ್ದರು.

 

Translate »