ಮೇಟಗಳ್ಳಿ ಕರಕುಶಲನಗರದ 300 ಮಂದಿಗೆ  ಕೋವಿಶೀಲ್ಡ್ ಮೊದಲ ಡೋಸ್
ಮೈಸೂರು

ಮೇಟಗಳ್ಳಿ ಕರಕುಶಲನಗರದ 300 ಮಂದಿಗೆ ಕೋವಿಶೀಲ್ಡ್ ಮೊದಲ ಡೋಸ್

July 8, 2021

ಮೈಸೂರು,ಜು.7(ಪಿಎಂ)- ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಮತ್ತು ಆರೋಗ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಬುಧ ವಾರ ಹಮ್ಮಿಕೊಂಡಿದ್ದ ಉಚಿತ ಕೋವಿಡ್ ಲಸಿಕಾ ಶಿಬಿರದಲ್ಲಿ ಮೈಸೂರಿನ ಮೇಟಗಳ್ಳಿಯ ಕರಕುಶಲನಗರದ 300 ಮಂದಿಗೆ ಕೋವಿ ಶೀಲ್ಡ್ ಮೊದಲ ಡೋಸ್ ಲಸಿಕೆ ನೀಡಲಾಯಿತು.

ಕರಕುಶಲನಗರದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಸಿಕಾ ಶಿಬಿರದಲ್ಲಿ 45 ವರ್ಷ ಮೇಲ್ಪಟ್ಟ ವಯೋಮಾನದ 50 ಮಂದಿಗೆ ಹಾಗೂ 18ರಿಂದ 45 ವರ್ಷದೊಳಗಿನ ವಯೋ ಮಾನದ 250 ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಯಿತು.

ಮೊದಲಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆಗಾಗಿ ಸ್ವ್ಯಾಬ್ ಸಂಗ್ರಹಿಸಿ, ಬಳಿಕ ಲಸಿಕೆ ನೀಡಲಾ ಯಿತು. ಆರೋಗ್ಯ ಇಲಾಖೆ ವೈದ್ಯರು ಹಾಗೂ ನರ್ಸ್‍ಗಳು ಲಸಿಕಾ ಪ್ರಕ್ರಿಯೆ ನಡೆಸಿದರು. ಇದಕ್ಕೂ ಮುನ್ನ ದೀಪ ಬೆಳಗುವ ಮೂಲಕ ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭ ಸಂಜಯ್ ಅರಸ್ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ನಮ್ಮ ಟ್ರಸ್ಟ್ ವತಿಯಿಂದ ಈ ಕೋವಿಡ್ ಸಂದರ್ಭದಲ್ಲಿ ಹಲವು ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಈಗಾಗಲೇ ಅನೇಕ ಸೇವಾ ಕಾರ್ಯ ಕ್ರಮಗಳ ಮೂಲಕ ಸಾಧ್ಯವಿರುವ ಸಹಾಯಹಸ್ತ ನೀಡಲಾಗಿದೆ. ಐಟಿ ವಲಯದ 300 ಮಂದಿಗೆ ಸ್ಯಾನಿಟೈಸರ್, ಸಾಬೂನು ಸೇರಿದಂತೆ ಹಲವು ಸಾಮಗ್ರಿ ಒಳಗೊಂಡ ಸ್ಯಾನಿಟೈಸಿಂಗ್ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ. ಅಲ್ಲದೆ, 150 ಅತಿಥಿ ಉಪನ್ಯಾಸಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗಿದೆ ಎಂದರು.

ಸೇಟ್ ಮೋಹನ್‍ದಾಸ್ ತುಳಸೀದಾಸ್ ಆಸ್ಪತ್ರೆಗೆ ಕಪಾಟುಗಳನ್ನು ಒದಗಿಸಲಾಯಿತು. ಅಂತೆಯೇ ಮೈಸೂರು ಜಿಲ್ಲಾಸ್ಪತ್ರೆಗೆ ರೆಫ್ರಿಜರೇಟರ್ ಸೇರಿ ದಂತೆ ಇನ್ನಿತರ ಸಲಕರಣೆ ನೀಡಲಾಯಿತು. 355 ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕರಕುಶಲ ನಗರದ ಇನ್ನು 300 ಮಂದಿಗೆ ಲಸಿಕೆ ಕೊಡಿ ಸಲು ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.

ಭಾರತೀಯ ಇತಿಹಾಸ ಸಂಕಲನಾ ಸಮಿತಿ ಕರ್ನಾಟಕ ಪ್ರಾಂತದ ಉಪಾಧ್ಯಕ್ಷ ಡಾ.ಎಸ್.ಬಿ.ಎಂ. ಪ್ರಸನ್ನ, ಆರೋಗ್ಯ ಇಲಾಖೆ ವೈದ್ಯೆ ಡಾ.ರಾಜೇ ಶ್ವರಿ, ಸಿಬ್ಬಂದಿ ಪದ್ಮಾವತಿ, ಮುಖಂಡ ಮುರುಗೇಶ್, ಟ್ರಸ್ಟ್ ಕಾರ್ಯದರ್ಶಿ ತಂಗಂ ಪನಕಲ್, ಸಂಚಾ ಲಕಿ ಲಕ್ಷ್ಮೀ, ಯಂಗ್ ಅಂಡ್ ಆಡಲ್ಟ್ ಬುಕ್ ಕ್ಲಬ್ ಸದಸ್ಯ ನಿಶಿತ್ ಮತ್ತಿತರರು ಹಾಜರಿದ್ದರು.

Translate »